ADVERTISEMENT

ನಟ ಅನಿಲ್ ಕುಮಾರ್ ನಿಧನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 10:58 IST
Last Updated 3 ಏಪ್ರಿಲ್ 2019, 10:58 IST
ಅನಿಲ್ ಕುಮಾರ್ (ಚಿತ್ರ ಕೃಪೆ: ಫೇಸ್‌ಬುಕ್)
ಅನಿಲ್ ಕುಮಾರ್ (ಚಿತ್ರ ಕೃಪೆ: ಫೇಸ್‌ಬುಕ್)   

ಬೆಂಗಳೂರು: ಕಿರುತೆರೆ ಮತ್ತು ಹಿರಿತೆರೆ ನಟ ಅನಿಲ್ ಕುಮಾರ್ (48) ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಬೆಂಗಳೂರಿನಲ್ಲಿ ಬುಧವಾರ ನಿಧನರಾದರು.

ಅನಿಲ್ ಅವರು ಹೆಗ್ಗೋಡಿನ ‘ನೀನಾಸಂ’ನಲ್ಲಿ ತರಬೇತಿ ಪಡೆದವರು. ಇವರು ನೀನಾಸಂನಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ನಟ ದರ್ಶನ್ ಅವರು ಸಹಪಾಠಿಯಾಗಿದ್ದರು.

ಮೂಡಲಮನೆ ಧಾರಾವಾಹಿ ಮೂಲಕ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಹೆಸರು ಸಂಪಾದಿಸಿದವರು ಅನಿಲ್. ಬ್ರಹ್ಮಗಂಟು ಧಾರಾವಾಹಿಯಲ್ಲಿ ಕೂಡ ಅವರು ಅಭಿನಯಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.