ADVERTISEMENT

PHOTOS: ವಿಚ್ಛೇದನ ನೀಡಿ 4 ವರ್ಷಗಳ ಬಳಿಕ ಎರಡನೇ ಮದುವೆಯಾದ ನಟಿ ಅರ್ಚನಾ ಕವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2025, 10:22 IST
Last Updated 17 ಅಕ್ಟೋಬರ್ 2025, 10:22 IST
<div class="paragraphs"><p> ನಟಿ ಅರ್ಚನಾ ಕವಿ </p></div>

ನಟಿ ಅರ್ಚನಾ ಕವಿ

   

ಚಿತ್ರ: ಇನ್‌ಸ್ಟಾಗ್ರಾಮ್

ಮಲಯಾಳಂ ನಟಿ ಅರ್ಚನಾ ಕವಿ ಮೊದಲ ಪತಿಗೆ ವಿಚ್ಛೇದನ ನೀಡಿ 4 ವರ್ಷಗಳ ಬಳಿಕ ಮತ್ತೊಂದು ಮದುವೆಯಾಗಿದ್ದಾರೆ. 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅರ್ಚನಾ ಕವಿ ಅವರು ರಿಕ್ ವರ್ಗೀಸ್ ಎಂಬುವವರ ಜೊತೆಗೆ ಹಸೆಮಣೆ ಏರಿದ್ದಾರೆ.

ADVERTISEMENT

ಕುಟುಂಬಸ್ಥರ ಒಪ್ಪಿಗೆ ಮೇರೆಗೆ ರಿಕ್ ವರ್ಗೀಸ್ ಜೊತೆಗೆ ಎರಡನೇ ಮದುವೆಯಾದ ಫೋಟೊಗಳನ್ನು ನಟಿ ಅರ್ಚನಾ ಕವಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನೀಲಾತಮಾರ ಇವರ ಮೊದಲ ಸಿನಿಮಾವಾಗಿದ್ದು, ‘ಬೆಸ್ಟ್ ಆಫ್ ಲಕ್’, ‘ಸಾಲ್ಟ್ ಆಂಡ್ ಪೆಪ್ಪರ್’, ‘ಡೇ ನೈಟ್ ಗೇಮ್’, ‘ಬ್ಯಾಂಗಲ್ಸ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ ಮಲಯಾಳಂನಲ್ಲಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ಇನ್ನು, ನಟಿ ಅರ್ಚನಾ ಕವಿ ಅವರು ಇತ್ತೀಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನಟಿ ಅರ್ಚನಾ ಕವಿ ಹಾಗೂ ರಿಕ್ ವರ್ಗೀಸ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾಗಿದ್ದರಂತೆ. ಆರಂಭದಲ್ಲಿ ಈ ಇಬ್ಬರು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು. ಯಾವುದೋ ಶಕ್ತಿ ನಮ್ಮನ್ನು ಒಟ್ಟಿಗೆ ಸೇರುವಂತೆ ಮಾಡಿದೆ ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಈ ವಿಡಿಯೊವನ್ನು ನಿರೂಪಕಿ ಧನ್ಯಾ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ನಟಿ ಅರ್ಚನಾ ಹಂಚಿಕೊಂಡ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನಟಿ ಅರ್ಚನಾ ಕವಿ ಅವರು 2016ರಲ್ಲಿ ಹಾಸ್ಯನಟ ಮತ್ತು ಯೂಟ್ಯೂಬರ್ ಅಬಿಶ್ ಮ್ಯಾಥ್ಯೂ ಅವರನ್ನು ಮದುವೆುಯಾಗಿದ್ದರು. ಆದರೆ 2021ರಲ್ಲಿ ಈ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.