
ಭುವನೇಶ್ ಹಾಸನ್, ಅನನ್ಯ ಅಮರ್
ಚಿತ್ರ: ಇನ್‌ಸ್ಟಾಗ್ರಾಂ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’, ‘ಭರ್ಜರಿ ಬ್ಯಾಚುಲರ್ಸ್’ ರಿಯಾಲಿಟಿ ಶೋಗಳಲ್ಲಿ ತಮ್ಮ ಅದ್ಭುತ ಹಾಸ್ಯದ ಮೂಲಕವೇ ಎಲ್ಲರನ್ನೂ ರಂಜಿಸಿದ್ದ ಹಾಸ್ಯ ಕಲಾವಿದ ಭುವನೇಶ್ ಹಾಸನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭುವನೇಶ್ ಹಾಸನ್ ದಂಪತಿ
ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರಲ್ಲಿ ಅನನ್ಯಾ ಅಮರ್ ಅವರ ಜೋಡಿಯಾಗಿದ್ದ ಭುವನೇಶ್ ಹಾಸನ್ ಸರಳವಾಗಿ ಮದುವೆಯಾಗಿದ್ದಾರೆ.
ಭುವನೇಶ್ ಹಾಸನ್ ದಂಪತಿ
ಹಾಸನದ ಹೊಳೇನರಸೀಪುರದಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭುವನೇಶ್ ಹಾಸನ್ ದಂಪತಿ
ಮದುವೆಗೆ ರಕ್ಷಕ್ ಬುಲೆಟ್ ಸೇರಿದಂತೆ ಕಿರುತೆರೆಯ ಹಲವು ಕಲಾವಿದರು ಹಾಗೂ ಸ್ನೇಹಿತರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಭುವನೇಶ್ ಹಾಸನ್ ಅವರು ಮದುವೆಯಾದ ಹುಡುಗಿ ಯಾರು ಎಂದು ಮಾಹಿತಿ ಬಿಟ್ಟುಕೊಟ್ಟಿಲ್ಲ.
ಭುವನೇಶ್ ಹಾಸನ್ ದಂಪತಿ
ಮದುವೆಯ ಫೋಟೊಗಳನ್ನು ಭುವನೇಶ್ ಹಾಸನ್ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಕ್ಷಕ್ ಬುಲೆಟ್, ಭುವನೇಶ್ ಹಾಸನ್
ಫೋಟೊಗಳನ್ನು ನೋಡಿದ ಅಭಿಮಾನಿಗಳು, ಸ್ನೇಹಿತರು ಭುವನೇಶ್ ಹಾಸನ್ ದಂಪತಿಗೆ ಶುಭ ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.