
ಧ್ರುವಂತ್
ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್
ಕನ್ನಡದ ಬಿಗ್‌ಬಾಸ್ ಮನೆಯಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಇದಕ್ಕೆ ಸಾಕ್ಷಿ ಧ್ರುವಂತ್. ಕಳೆದ ವಾರ ಮನೆಮಂದಿ ಒಟ್ಟಾಗಿ ಧ್ರುವಂತ್‌ಗೆ ಉತ್ತಮ ಪಟ್ಟ ಕೊಟ್ಟಿದ್ದರು. ಆದರೆ, ಈ ವಾರ ಅವರಿಗೆ ಕಳಪೆ ಪಟ್ಟ ನೀಡಿ ಜೈಲಿಗೆ ಕಳುಹಿಸಿದ್ದಾರೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮ್ರೋ ಒಂದನ್ನು ಹಂಚಿಕೊಂಡಿದೆ. ಪ್ರೊಮೋದಲ್ಲಿ ಕಾವ್ಯ, ರಿಷಾ, ಮಲ್ಲಮ್ಮ, ರಘು, ಚಂದ್ರಪ್ರಭ, ಸೂರಜ್ ಸಿಂಗ್ ಕಳಪೆ ಪಟ್ಟ ಕೊಟ್ಟಿದ್ದಾರೆ. ಆಗ ಕಾವ್ಯ ‘ಕಳೆದ ವಾರ ನಾವೆಲ್ಲಾ ಅವರಿಗೆ ಉತ್ತಮ ಕೊಟ್ಟಿದ್ದೇವು, ಆದರೆ ಎಲ್ಲೋ ಒಂದು ಕಡೆ ನಮ್ಮೆಲ್ಲರ ಅಭಿಪ್ರಾಯಕ್ಕೆ ಅಗೌರವ ತೋರಿಸಿದಂತೆ ಆಯಿತು ಅಂತ ಅನೀಸಿತು’ ಎಂದು ಹೇಳಿದ್ದಾರೆ. ಆಗ ಕ್ಯಾಪ್ಟನ್ ರಘು ಮಾತನಾಡಿ, ‘ತಕ್ಷಣವೇ ಸೋಲನ್ನು ಒಪ್ಪಿಕೊಂಡರು’ ಎಂದು ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
ಇನ್ನು, ಕಳಪೆ ಪಟ್ಟ ಪಡೆದು ಜೈಲಿಗೆ ಹೋದ ಧ್ರುವಂತ್ ಮನೆಮಂದಿ ಕೊಟ್ಟ ಕಾರಣಗಳನ್ನು ಒಪ್ಪುತ್ತೇನೆ ಎಂದಿದ್ದಾರೆ. ಆದರೆ ಕಳೆದ ವಾರ ಧ್ರುವಂತ್ ಚೆನ್ನಾಗಿ ಆಟ ಆಡಿದ್ದರು. ಎಲ್ಲ ಕೆಲಸದಲ್ಲೂ ಭಾಗಿಯಾಗಿದ್ದರು. ಆದರೆ ಈ ವಾರ ಧ್ರುವಂತ್ ಆಟ ಅಷ್ಟಕ್ಕಷ್ಟೆ ಆಗಿದ್ದೇಕೆ ಎಂದು ಮನೆಮಂದಿ ಪ್ರಶ್ನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.