ADVERTISEMENT

BBK 11: ಇತರ ಸದಸ್ಯರ ನಿರ್ಧಾರದಿಂದ ಫಿನಾಲೆ ಟಿಕೆಟ್‌ ಕಳೆದುಕೊಂಡ್ರಾ ಧನರಾಜ್‌ ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2025, 7:12 IST
Last Updated 9 ಜನವರಿ 2025, 7:12 IST
   

ಬೆಂಗಳೂರು: ಬಿಗ್‌ಬಾಸ್‌ನಲ್ಲಿ ಫಿನಾಲೆ ಟಿಕೆಟ್‌ಗಾಗಿ ಸ್ಪರ್ಧಿಗಳ ನಡುವೆ ಹೋರಾಟ ನಡೆದಿದೆ. ಈಗಾಗಲೇ ಚೈತ್ರಾ ಕುಂದಾಪುರ ಅವರು ಫಿನಾಲೆ ಟಿಕೆಟ್‌ ಕಳೆದುಕೊಂಡಿದ್ದಾರೆ. 

ಇಂದು ಬಿಡುಗಡೆಯಾದ ಪ್ರೊಮೊದಲ್ಲಿ ಮನೆಯ ಸದಸ್ಯರು ಧನರಾಜ್‌ ಅವರನ್ನು ಫಿನಾಲೆ ಟಿಕೆಟ್‌ ಪಡಯುವುದರಿಂದ ಹೊರಗಿಟ್ಟಿದ್ದಾರೆ. ‘ಮೊದಲ ಮೂರು ವಾರ ಧನರಾಜ್‌ ಸರಿಯಾಗಿ ಆಡಲಿಲ್ಲ’ ಎನ್ನುವ ಕಾರಣವನ್ನು ಗೌತಮಿ ನೀಡಿದ್ದಾರೆ. ಇತ್ತ ‘ಮಾರಿ ಹಬ್ಬದ ಜಾತ್ರೆಯಲ್ಲಿ ಬಲಿಕೊಟ್ಟಾಯ್ತು’ ಎಂದು ಭವ್ಯಾ ವ್ಯಂಗ್ಯವಾಡಿದ್ದಾರೆ. ‘ಗೌತಮಿಗಿಂತ ಧನರಾಜ್‌ ಕಳೆಪಯಾಗಿದ್ದಾರಾ’ ಎಂದು ರಜತ್‌ ಪ್ರಶ್ನಿಸಿದ್ದಾರೆ.

ಟಾಸ್ಕ್‌ ಗೆದ್ದು ತ್ರಿವಿಕ್ರಮ್‌ ನೇರವಾಗಿ ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ. 

ADVERTISEMENT

ಇತ್ತ, ‘ಫಿನಾಲೆ ಟಿಕೆಟ್‌ ಕಳೆದುಕೊಂಡ ಚೈತ್ರಾ, ಆಟವಾಡಲು ಬಿಡದೆ ಹೊರಗಿಟ್ಟದ್ದರು, ಈಗ ಆಟವಾಡಿದರೂ ನನ್ನನ್ನು ಪರಿಗಣಿಸಲಿಲ್ಲ’ ಎಂದು ಕಣ್ಣೀರು ಹಾಕಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.