ರಕ್ಷಿತಾ ಶೆಟ್ಟಿ
ಚಿತ್ರ: ಇನ್‌ಸ್ಟಾಗ್ರಾಮ್
ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆಯಲ್ಲಿ ಗಲಾಟೆ ಸದ್ದು ಜೋರಾಗಿದೆ. ಮಂಗಳೂರು ಮೂಲದ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಹಾಗೂ ಜಾಹ್ನವಿ ಈ ಮೂವರು ರಾತ್ರೋರಾತ್ರಿ ಬಿಗ್‌ಬಾಸ್ ಮನೆಯಲ್ಲಿ ಜಗಳವಾಡಿಕೊಂಡಿದ್ದಾರೆ.
ನಿನ್ನೆ ನಡೆದ ಮಿಡ್ ವೀಕ್ ಎಲಿಮಿನೇಷನ್ ಸಂದರ್ಭದಲ್ಲಿ ರಕ್ಷಿತಾ ನಾಮಿನೇಷನ್‌ಗೆ ಜಾಹ್ನವಿ ಹೆಸರನ್ನು ತೆಗೆದುಕೊಂಡಿದ್ದರು. ಆಗ ಜಾಹ್ನವಿ ಕೂಡ ಮನೆಯಿಂದ ಆಚೆ ಕಳುಹಿಸಲು ರಕ್ಷಿತಾ ಹೆಸರನ್ನು ಸೂಚಿಸಿದ್ದರು. ಆ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈಗ ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅಶ್ವಿನಿ ಗೌಡ, ಜಾಹ್ನವಿ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಗಲಾಟೆ ನಡೆದಿದೆ.
‘ರಕ್ಷಿತಾ ಕ್ಯಾಮೆರಾ ಮುಂದೆ ಹೋಗಿ ಮಾತನಾಡಿರುವುದು, ನಾಗವಲ್ಲಿ ರೀತಿ ನೃತ್ಯ ಮಾಡುತ್ತಾಳೆ. ಒಬ್ಬಳೆ ಮಾತಾಡುತ್ತಾ ಇರುತ್ತಾಳೆ ಎಂದು ಅಶ್ವಿನಿ ಗೌಡ ಹಾಗೂ ಜಾಹ್ನವಿ ಸುಳ್ಳು ಕಥೆ ಕಟ್ಟಿದ್ದರು. ಇದರಿಂದ ಮನನೊಂದ ರಕ್ಷಿತಾ ಶೆಟ್ಟಿ ಕಣ್ಣೀರು ಹಾಕಿದ್ದಳು. ಇದೀಗ ಬಿಡುಗಡೆಯಾದ ಪ್ರೊಮೋದಲ್ಲಿ, ಅಶ್ವಿನಿ ಗೌಡ ಹಾಗೂ ಜಾಹ್ನವಿ ವಿರುದ್ಧ ರಕ್ಷಿತಾ ಶೆಟ್ಟಿ ಕೋಪಗೊಂಡಿದ್ದಾಳೆ.
ಜಾಹ್ನವಿ ಹಾಗೂ ಅಶ್ವಿನಿ ಇಬ್ಬರು ರಕ್ಷಿತಾ ಜೊತೆಗೆ ಮಾತನಾಡಬೇಕು ಎಂದು ಕಾದು ಕುಳಿತುಕೊಂಡಿದ್ದರು. ಆಗ ರಕ್ಷಿತಾ ಬರುತ್ತಿದ್ದಂತೆ ಜಾಹ್ನವಿ ‘ಚೈಲ್ಡ್ ಅಂತ ಅಂದುಕೊಂಡಿದ್ದೀಯಾ’ ಎಂದಿದ್ದಾರೆ. ಆ ಕೂಡಲೇ ರಕ್ಷಿತಾ ‘ಹೌದು ನೀವು ಚೈಲ್ಡ್ ದೊಡ್ಡ ನಾಗವಲ್ಲಿ ನೀವೇ. ಅವರು ಇಬ್ಬರು ಗೆಜ್ಜೆ ಶಬ್ದ ಮಾಡ್ತಾ ಇದ್ದಾರೆ’ ಎಂದಿದ್ದಾಳೆ. ಆಗ ಅಶ್ವಿನಿ ಗೌಡ ಮಾತಿನ ಭರದಲ್ಲಿ ‘ಜಾಸ್ತಿ ಮಾತನಾಡಬೇಡ ಮುಚ್ಚಿಕೊಂಡು ಮಲಗಿಕೋ. ನಿನ್ನ ನಾಟಕವನ್ನೇಲ್ಲಾ ಶೌಚಾಲಯದಲ್ಲಿ ಇಟ್ಟುಕೋ ಈಡಿಯಟ್ (ಅವಿವೇಕಿ)’ ಎಂದು ಗದರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.