ADVERTISEMENT

111 ದಿನ, 24 ಸ್ಪರ್ಧಿಗಳು, 6 ಫೈನಲಿಸ್ಟ್ಸ್: ಪ್ರೀ ಫಿನಾಲೆಗೆ ಸಜ್ಜಾಯ್ತು ವೇದಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2026, 10:04 IST
Last Updated 17 ಜನವರಿ 2026, 10:04 IST
<div class="paragraphs"><p>ಚಿತ್ರ:&nbsp;<strong><a href="https://www.instagram.com/colorskannadaofficial/">colorskannadaofficial</a>&nbsp;</strong>ನಟ ಸುದೀ‍ಪ್‌</p></div>

ಚಿತ್ರ: colorskannadaofficial ನಟ ಸುದೀ‍ಪ್‌

   

ಬರೋಬ್ಬರಿ 111 ದಿನಗಳು, 24 ಸ್ಪರ್ಧಿಗಳು, 6 ಫೈನಲಿಸ್ಟ್‌ಗಳು, ಒಬ್ಬರಿಗೆ ವಿನ್ನರ್‌ ಪಟ್ಟ. ಈಗ ಪ್ರೀ ಫಿನಾಲೆಗೆ ಬಿಗ್‌ಬಾಸ್‌ ವೇದಿಕೆ ಸಜ್ಜಾಗಿದೆ. ಭಾನುವಾರ (ಜ.18) ಈ ಬಾರಿಯ ಬಿಗ್‌ಬಾಸ್‌ ಸೀಸನ್ 12ರ ವಿಜೇತರು ಯಾರೆಂದು ಕಿಚ್ಚ ಸುದೀಪ್‌ ಘೋಷಿಸಲಿದ್ದಾರೆ.

ಕನ್ನಡದ ಬಿಗ್‌ಬಾಸ್‌ ಸೀಸನ್ 12 ಶುರುವಾಗಿ ಇಂದಿಗೆ 111 ದಿನಗಳಾಗಿವೆ. ಒಟ್ಟು 24 ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ ಆಗಮಿಸಿದ್ದರು. ಸದ್ಯ 24 ಸ್ಪರ್ಧಿಗಳಲ್ಲಿ 6 ಮಂದಿ ಫೈನಲಿಸ್ಟ್‌ಗಳಾಗಿ ಆಯ್ಕೆಯಾಗಿದ್ದಾರೆ. ಈ 111 ದಿನಗಳಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕುಟುಂಬಸ್ಥರನ್ನು ಬಿಟ್ಟು ಬಿಗ್‌ಬಾಸ್‌ಗೆ ಬಂದಿದ್ದ ಸ್ಪರ್ಧಿಗಳು ಕೊನೆಯ ಹಂತಕ್ಕೆ ತಲುಪಿದ್ದಾರೆ.

ADVERTISEMENT

ಇಂದು ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ‍ಪ್ರೋಮೊ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ನೀವು ಪ್ರೀ ಫಿನಾಲೆಗೆ ರೆಡಿ ತಾನೇ ಎಂದು ಬರೆದುಕೊಂಡು ಕಿಚ್ಚ ಸುದೀಪ್ ಅವರನ್ನು ತೋರಿಸಿದ್ದನ್ನು ಕಾಣಬಹುದು. ಸದ್ಯ ಬಿಗ್‌ಬಾಸ್‌ ಸೀಸನ್ 12ರ ಪ್ರೀ ಫಿನಾಲೆ ವೀಕ್ಷಿಸಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇಂದು ರಾತ್ರಿ 9 ಗಂಟೆಗೆ ಬಿಗ್‌ಬಾಸ್‌ ಪ್ರೀ ಫಿನಾಲೆ ನಡೆಯಲಿದ್ದು, ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.