
ರಾಶಿಕಾ, ಧನುಷ್, ಅಶ್ವಿನಿ ಗೌಡ, ಗಿಲ್ಲಿ ನಟ, ರಿಷಾ ಗೌಡ
ಚಿತ್ರ: ಇನ್‌ಸ್ಟಾಗ್ರಾಮ್
ಬಿಗ್‌ಬಾಸ್ 12ನೇ ಆವೃತ್ತಿ 30ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯ ಸಂಚಿಕೆಯಲ್ಲಿ (ಮಂಗಳವಾರ) ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಉಳಿದ 9 ಸ್ಪರ್ಧಿಗಳು ನಾಮಿನೇಷನ್‌ನಿಂದ ಬಚಾವ್ ಆಗಿದ್ದಾರೆ.
ರಾಶಿಕಾ, ಧನುಷ್ಯ, ಅಶ್ವಿನಿ ಗೌಡ, ಗಿಲ್ಲಿ ನಟ, ರಿಷಾ ಗೌಡ, ಮಲ್ಲಮ್ಮ, ಮಾಳು ನಿಪನಾಳ, ಧ್ರುವಂತ್ ಸೇರಿ 8 ಸ್ಪರ್ಧಿಗಳು ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಹೋಗಲು ಕ್ಯಾಪ್ಟನ್ ರಘು ಅವರಿಂದ ನೇರವಾಗಿ ನಾಮಿನೇಟ್ ಆಗಿದ್ದಾರೆ.
ಕಳೆದ ಸಂಚಿಕೆಯಲ್ಲಿ ಬಿಗ್‌ಬಾಸ್ ಮನೆ ಬಿ.ಬಿ ಕಾಲೇಜ್ ಆಗಿ ಬದಲಾಗಿತ್ತು. ಎಲ್ಲ ಸ್ಪರ್ಧಿಗಳು ಬಿ.ಬಿ ಕಾಲೇಜ್ ವಿದ್ಯಾರ್ಥಿಗಳಾಗಿ ಬದಲಾಗಿದ್ದರು. ಅದರಂತೆ ಬಿಗ್‌ಬಾಸ್ ಎರಡು ತಂಡವಾಗಿ ವಿಂಗಡಣೆ ಮಾಡಿ ಟಾಸ್ಕ್ ಒಂದನ್ನು ಕೊಟ್ಟಿದ್ದರು.
ಬಿಗ್‌ಬಾಸ್ ಸ್ಪರ್ಧಿಗಳು
‘ತಮ್ಮ ಎದುರಾಳಿ ಸ್ಪರ್ಧಿ ಈ ಮನೆಯಲ್ಲಿ ಇರಲು ಏಕೆ ಯೋಗ್ಯರಲ್ಲ’? ಎಂದು ಸ್ಪರ್ಧಿಗಳು ಚರ್ಚೆ ಮಾಡಬೇಕಿತ್ತು. ಅದರಂತೆ ಚರ್ಚೆಗಿಳಿದ ಸ್ಪರ್ಧಿಗಳಲ್ಲಿ ಗೆದ್ದವರು ಯಾರು? ಸೋತವರು ಯಾರು ಎಂದು ಬಿ.ಬಿ ಕಾಲೇಜ್ ಪ್ರಾಂಶುಪಾಲ ರಘು ಹೇಳಬೇಕಾಗಿತ್ತು. ಇದು ನಾಮಿನೇಷನ್ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎಂದು ಬಿಗ್‌ಬಾಸ್ ಘೋಷಿಸಿದ್ದರು. ಹೀಗೆ ಚರ್ಚೆಯಲ್ಲಿ ಸೋತ 8 ಸ್ಪರ್ಧಿಗಳಿ ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು ನೇರವಾಗಿ ನಾಮಿನೇಟ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.