ADVERTISEMENT

Bigg Boss 8 | ಕಿರು ವಿಡಿಯೊಗಳ ಮೂಲಕ ಜನಪ್ರಿಯರಾಗಿರುವ ರಘು ಗೌಡ 13ನೇ ಸ್ಪರ್ಧಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 16:50 IST
Last Updated 28 ಫೆಬ್ರುವರಿ 2021, 16:50 IST
ರಘು ಗೌಡ
ರಘು ಗೌಡ   

ಸಾಮಾಜಿಕ ಜಾಲತಾಣದಲ್ಲಿ ಕಿರು ವಿಡಿಯೊಗಳ ಮೂಲಕ ಜನಪ್ರಿಯರಾಗಿರುವ ರಘು ಗೌಡ, ಏಳೂವರೆ ವರ್ಷ ವಿಪ್ರೊದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಸಿನಿಮಾಗಾಗಿ ಎಂಜಿನಿಯರ್ ಕೆಲಸ ಬಿಟ್ಟರು.

ಫೇಸ್‌ಬುಕ್‌ನಲ್ಲಿ ‘ಮೆಟ್ರೊ ಸಾಗಾ‘, ಎಫ್‌ಎಮ್ ರೇಡಿಯೊ, ಕೆಲವೊಂದು ಟಿವಿ ಗಳಿಗೆ ವಿಡಿಯೊ, ಆಡಿಯೊ ಕಂಟೆಂಟ್ ಪೂರೈಕೆ ಮಾಡುತ್ತಿದ್ದ ರಘು, ಸೋಷಿಯಲ್ ಮೀಡಿಯಾಗಾಗಿ ಶೋಗಳನ್ನು ಮಾಡಿದ್ದಾರೆ.

‘ನಿದ್ದೆ ಬರದಿದ್ದರೆ ವಿಡಿಯೊ ಮಾಡುವ‘ ಹವ್ಯಾಸವಿರುವ ರಘು ಗೌಡ, ಲಾಕ್‌ಡೌನ್ ಅವಧಿಯಲ್ಲಿ ವಿವಿಧ ವಿಷಯಗಳ ಮೇಲೆ ಹತ್ತಾರು ವಿಡಿಯೊಗಳನ್ನು ಮಾಡಿ, ಹೆಚ್ಚು ಫಾಲೋಯೆರ್ಸ್ ಪಡೆದಿದ್ದಾರೆ.

ADVERTISEMENT

ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಲು ಪ್ರಯತ್ನಪಟ್ಟು ಕೈಬಿಟ್ಟರು. ಈಗ ಕೆಲ ತಿಂಗಳಿನಿಂದ ತಾವೇ ಸ್ವತಂತ್ರವಾಗಿ ವಿಡಿಯೊ ಕಂಟೆಂಟ್ ಸಿದ್ಧ ಮಾಡುತ್ತಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ‘ಮೆಟ್ರೊ ಸಾಗಾ‘ ಮೂಲಕ ಫೇಸ್‌ಬುಕ್‌ನಲ್ಲಿ ಹೆಚ್ಚು ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದರು ರಘು.

ಈಗ ಹದಿಮೂರನೇ ಸ್ಪರ್ಧಿಯಾಗಿ ಬಿಗ್‌ಬಾಸ್‌ ಪ್ರವೇಶಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.