
ಜಾಹ್ನವಿ, ಅಶ್ವಿನಿ ಗೌಡ
ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್
ಕನ್ನಡದ ಬಿಗ್‌ಬಾಸ್ 12ನೇ ಸೀಸನ್ 5ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್‌ಬಾಸ್ ನೀಡಿದ ಒಂದೇ ಟಾಸ್ಕ್‌ನಿಂದ ಜಾಹ್ನವಿ ಹಾಗೂ ಅಶ್ವಿನಿ ಗೌಡ ಮಧ್ಯೆ ಸ್ನೇಹದಲ್ಲಿ ಬಿರುಕು ಉಂಟಾಗಿದೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್‌ಬಾಸ್ ಮನೆಮಂದಿಗೆ ಟಾಸ್ಕ್ ಒಂದನ್ನು ನೀಡಿದ್ದಾರೆ . ಅದೇ ಟಾಸ್ಕ್‌ನಿಂದ ಅಶ್ವಿನಿ ಗೌಡ ಹಾಗೂ ಜಾಹ್ನವಿ ಗಲಾಟೆ ಮಾಡಿಕೊಂಡು ಕಣ್ಣೀರಿಟ್ಟಿದ್ದಾರೆ. ‘ತಮ್ಮ ಎದುರಾಳಿ ಸ್ಪರ್ಧಿ ಈ ಮನೆಯಲ್ಲಿ ಇರಲು ಏಕೆ ಯೋಗ್ಯರಲ್ಲ’ ಎಂದು ಹೇಳಬೇಕು ಅಂತ ಬಿಗ್‌ಬಾಸ್ ಟಾಸ್ಕ್ ನೀಡಿದ್ದರು.
ಇದೇ ವೇಳೆ ಅಶ್ವಿನಿ ಗೌಡ ‘ಜಾಹ್ನವಿ ಸ್ನೇಹದಿಂದ ನನಗೆ ಕಳಂಕ ಬಂದಿದೆ. ನನ್ನನ್ನು ಮುಂದೆ ಬಿಟ್ಟು, ನೀವು ಹಿಂದೆ ಇದ್ದು, ತಮಾಷೆ ನೋಡುತ್ತೀದ್ದೀರಾ? ನನ್ನನ್ನು ಬಿಗ್‌ಬಾಸ್ ಮನೆಯಿಂದ ಹೊರಗಡೆ ಕಳಿಸಬೇಕು ಅಂತ ಕಾಯ್ತಿದ್ದೀರಾ? ಸ್ನೇಹ ಅಂತ ಹೇಳಿಕೊಂಡು ನೀವು ನನಗೆ ಬಾವಿ ತೋಡ್ತೀರಾ ಅಂತ ಗೊತ್ತಿರಲಿಲ್ಲ. ಇಂಥ ಸ್ನೇಹಕ್ಕೆ ನಾವು ಬ್ರೇಕ್ ಹಾಕೋದು ಒಳ್ಳೆಯದು’ ಎಂದು ಗುಡುಗಿದ್ದಾರೆ.
ಇನ್ನು, ಅದಕ್ಕೆ ಉತ್ತರಿಸಿದ ಜಾಹ್ನವಿ, ‘ನಿಮ್ಮ ಆಟವನ್ನು ನೀವು ಆಡ್ತಿದ್ದೀರಾ, ನನ್ನ ಆಟವನ್ನು ನಾನು ಆಡ್ತಿದ್ದೀನಿ. ಕೆಲವರ ಆಟ ವೇಗವಾಗಿ ಕಾಣಬಹುದು, ಇನ್ನೂ ಕೆಲವರ ಆಟ ನಿಧಾನವಾಗಿ ಗುರಿ ತಲುಪಬಹುದು. ನೀವು ನನ್ನ ಜೊತೆಗೆ ಇರೋದು ತಂತ್ರ ಇರಬಹುದು’ ಎಂದು ಹೇಳಿದ್ದಾರೆ.
ಬಿಗ್‌ಬಾಸ್ ಆರಂಭವಾದ ಮೊದಲ ದಿನದಿಂದಲೂ ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರು ಸ್ನೇಹಿತರಾಗಿದ್ದರು. ಈಗ ಬಿಗ್‌ಬಾಸ್ ನೀಡಿರುವ ಟಾಸ್ಕ್ ಒಂದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಇದು ಟಾಸ್ಕ್‌ಗೆ ಅಷ್ಟೇ ಸೀಮಿತವೋ ಅಥವಾ ಮುಂದೆ ಈ ಜಗಳವನ್ನು ಮುಂದುವರೆಸಿಕೊಂಡು ಹೋಗುತ್ತಾರಾ ಎಂದು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.