
ರಕ್ಷಿತಾ, ಅಶ್ವಿನಿ ಗೌಡ, ರಾಶಿಕಾ, ರಿಷಾ
ಚಿತ್ರ: ಇನ್‌ಸ್ಟಾಗ್ರಾಮ್
ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಜೊತೆ ಅಶ್ವಿನಿ ಗೌಡ ಹಾಗೂ ರಾಶಿಕಾ ಗಲಾಟೆ ಮಾಡಿಕೊಂಡಿದ್ದಾರೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೊಮೋದಲ್ಲಿ ತಮ್ಮದಲ್ಲದ ವಿಚಾರಕ್ಕೆ ರಾಶಿಕಾ ಜೊತೆ ಸೇರಿಕೊಂಡ ಅಶ್ವಿನಿ ಗೌಡ ಮತ್ತೆ ರಕ್ಷಿತಾ ಮೇಲೆ ಕೂಗಾಡಿದ್ದಾರೆ.
ಪ್ರೊಮೋದಲ್ಲಿ ಏನಿದೆ?
‘ನನಗೆ ರಕ್ಷಿತಾ ಮೇಲೆ ಒಂದು ಚೂರು ದೂರು ಇಲ್ಲ. ಯಾರು ಇಲ್ಲ ಅಂದ್ರು ಅಡುಗೆ ಮಾಡ್ತಾ, ಕೆಲಸದಾಕೆ ತರ ಅಂದುಕೊಂಡು ಬಿಟ್ಟಿದ್ದಾರೆ’ ಎಂದು ರಘು ಹೇಳುತ್ತಾರೆ. ಆಗ ರಕ್ಷಿತಾ ರಾಶಿಕಾ ಹತ್ತಿರ ಹೋಗಿ ಅಡುಗೆ ಮಾಡಬೇಕು ಅಂತ ಹೇಳುತ್ತಾರೆ. ಆಗ ರಾಶಿಕಾ, ‘ನನಗೆ ಕೈ ನೋವಾಗಿದೆ. ಅಡುಗೆ ಮಾಡೋದಕ್ಕೆ ಕಷ್ಟ ಆಗುತ್ತೆ’ ಅಂತ ಹೇಳುತ್ತಾರೆ.
ಬಳಿಕ ರಕ್ಷಿತಾ ಮನೆಯ ಕ್ಯಾಪ್ಟನ್ ಬಳಿ ಹೋಗಿ ’ರಾಶಿಕಾ ಅಡುಗೆ ಮಾಡಲ್ಲ ಅಂತ ಹೇಳುತ್ತಿದ್ದಾರೆ’ ಅಂತಾರೆ. ಅದನ್ನು ಕೇಳಿಸಿಕೊಳ್ಳುತ್ತಿದ್ದಂತೆ ಅಶ್ವಿನಿ ಹಾಗೂ ರಾಶಿಕಾ ಏಕಾಏಕಿ ರಕ್ಷಿತಾ ಮೇಲೆ ರೇಗಿದ್ದಾರೆ. ‘ತುಂಬಾ ಅತಿಯಾಗಿ ಆಡಬೇಡ ನೀನು. ನಾನು ನೋಡುತ್ತಿದ್ದೇನೆ ಎಲ್ಲದಕ್ಕೂ ಮಧ್ಯದಲ್ಲಿ ಬಂದರೆ ಸರಿ ಇರೋದಿಲ್ಲ’ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಹಿಂದೆ ಅಶ್ವಿನಿ ಗೌಡ ಹಾಗೂ ರಕ್ಷಿತಾ ಮಧ್ಯೆ ದೊಡ್ಡ ಗಲಾಟೆ ನಡೆದಿತ್ತು. ಈ ವಿಚಾರವಾಗಿ ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ತರಾಟೆ ತೆಗೆದುಕೊಂಡಿದ್ದರು. ಆದರೆ ಈಗ ಮತ್ತೆ ಅಡುಗೆ ಮಾಡುವ ವಿಚಾರಕ್ಕೆ ಸುಖಾ ಸುಮ್ಮನೆ ರಕ್ಷಿತಾ ವಿರುದ್ಧ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.