ADVERTISEMENT

ಬಿಗ್‌ಬಾಸ್‌ನಿಂದ ಹೊರ ಬರುತ್ತಿದ್ದಂತೆ ಹೊಸ ಅವತಾರದಲ್ಲಿ ಧ್ರುವಂತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2026, 7:40 IST
Last Updated 17 ಜನವರಿ 2026, 7:40 IST
<div class="paragraphs"><p>ಧ್ರುವಂತ್</p></div>

ಧ್ರುವಂತ್

   

ಬೆಂಗಳೂರು: ಬಿಗ್‌ಬಾಸ್‌ ಕನ್ನಡದ 12ನೇ ಆವೃತ್ತಿಯಲ್ಲಿ ‘ಜೈ ಮಹಾಕಾಲ್‌’ ಎನ್ನುವ ಸಾಲಿನಿಂದಲೇ ಖ್ಯಾತಿಗಳಿಸಿದ್ದ ಧ್ರುವಂತ್‌, 108ನೇ ದಿನ ನಡೆದ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ.

ತಮ್ಮದೇ ರೀತಿಯಲ್ಲಿ ಆಟವಾಡಿದ್ದ ಧ್ರುವಂತ್‌, ಸೀಕ್ರೇಟ್ ರೂಮ್‌ಗೂ ಹೋಗಿದ್ದರು, ಜತೆಗೆ ಕಿಚ್ಚನ ಚಪ್ಪಾಳೆಯನ್ನೂ ಪಡೆದಿದ್ದರು. ಸದ್ಯ ಬಿಗ್‌ಬಾಸ್‌ ಪಯಣ ಮುಗಿಸಿ ಹೊರಬಂದಿರುವ ಧ್ರುವಂತ್, ತಮ್ಮ ಉದ್ದನೆಯ ಕೂದಲಿಗೆ ಕತ್ತರಿ ಹಾಕಿ ಹೊಸ ಅವತಾರದದಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ಅಂತ್ಯ ಅಲ್ಲ, ಇದು ಹೊಸ ಆರಂಭ’ ಎಂದು ಬರೆದುಕೊಂಡಿದ್ದಾರೆ. 

ಕಪ್ಪು ಬಣ್ಣದ ಥಾರ್‌ನಲ್ಲಿ ಬಂದಿಳಿದ ಧ್ರುವಂತ್‌, ಅಭಿಮಾನಿಗಳನ್ನು ಭೇಟಿಯಾಗಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಪಾರ್ಲರ್‌ ಒಳಹೋಗಿ ಉದ್ದನೆಯ ಕೂದಲನ್ನು ಕತ್ತರಿಸಿಕೊಂಡು ಸ್ಟೈಲಿಶ್‌ ಹೇರ್‌ ಸ್ಟೈಲ್‌ ಮಾಡಿಸಿಕೊಂಡಿದ್ದಾರೆ.

ಬಿಗ್‌ಬಾಸ್‌ ಪ್ರೀ ಫಿನಾಲೆ ಇಂದು (ಶನಿವಾರ) ನಡೆಯಲಿದ್ದು, ನಾಳೆ (ಭಾನುವಾರ) ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಫಿನಾಲೆಯಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟ, ರಘು, ರಕ್ಷಿತಾ, ಧನುಷ್‌, ಕಾವ್ಯಾ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.