
ಗಿಲ್ಲಿ ನಟ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಅಂತ್ಯ ಕಂಡಿದೆ. ಪ್ರತಿ ಸೀಸನ್‌ನಂತೆ ಈ ಬಾರಿಯೂ ವಿಜೇತರಿಗೆ ಹಲವು ಬಹುಮಾನದ ನೀಡಲಾಗಿದೆ. ಅದರಂತೆ ಈ ಬಾರಿಯ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಯಾರಾಗಲಿದ್ದಾರೆ ಎಂಬುವುದಕ್ಕೆ ತೆರೆ ಎಳೆಯಲಾಗಿದೆ. ಅದರಲ್ಲೂ ಫೈನಲ್‌ನಲ್ಲಿ ಗಿಲ್ಲಿ ಗೆಲ್ಲುತ್ತಾರಾ ಅಥವಾ ರಕ್ಷಿತಾ ಶೆಟ್ಟಿ ಗೆಲ್ಲುತ್ತಾರಾ ಎಂದು ಗೊಂದಲ ಮನೆ ಮಾಡಿತ್ತು.
ಗಿಲ್ಲಿ ನಟ, ಸುದೀಪ್, ರಕ್ಷಿತಾ ಶೆಟ್ಟಿ
ಇದೀಗ ಆ ಎಲ್ಲ ಗೊಂದಲಕ್ಕೆ ಕಿಚ್ಚ ಸುದೀಪ್ ಅವರು ತೆರೆ ಎಳೆದಿದ್ದಾರೆ. ಟಾಪ್ ಆರು ಸ್ಪರ್ಧಿಗಳ ಪೈಕಿ ಟಾಪ್ 2 ಸ್ಥಾನಕ್ಕೆ ಗಿಲ್ಲಿ ಹಾಗೂ ರಕ್ಷಿತಾ ಶೆಟ್ಟಿ ಇದ್ದರು. ಈ ಪೈಕಿ ಕಿಚ್ಚ ಸುದೀಪ್ ಅವರು ಗಿಲ್ಲಿ ಅವರ ಹೆಸರನ್ನು ಜೋರಾಗಿ ಕೂಗುವ ಮೂಲಕ ವಿಜೇತರು ಯಾರೆಂದು ಘೋಷಿಸಿದ್ದಾರೆ.
ಗಿಲ್ಲಿ ನಟ ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಎಂಟ್ರಿ ಕೊಟ್ಟು, ತಮ್ಮ ಖಡಕ್ ಡೈಲಾಗ್‌ಗಳ ಮೂಲಕವೇ ಎಲ್ಲರ ಗಮನ ಸೆಳೆದರು. ಗಿಲ್ಲಿ ಅವರ ಮಾತು, ತಮಾಷೆ ಎಲ್ಲರಿಗೂ ಇಷ್ಟವಾಗಿತ್ತು. ಅಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ಗಿಲ್ಲಿ ನಟನ ಪರ ಅಬ್ಬರದ ಪ್ರಚಾರ ನಡೆದಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಈಗ ಬಿಗ್‌ಬಾಸ್ ಟ್ರೋಫಿ ಗೆದ್ದುಕೊಂಡಿದ್ದಾರೆ. ಪ್ರತಿ ಸೀಸನ್ನಂತೆಯೇ ಈ ಬಾರಿಯೂ ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಟ್ರೋಫಿ ಜೊತೆಗೆ ₹50 ಲಕ್ಷ ಹಾಗೂ ಮಾರುತಿ ಸುಜುಕಿ ಎಸ್‌ಯುವಿ ವಿಕ್ಟೋರಿಯಸ್ ಕಾರನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ. ವಿಶೇಷ ಎಂದರೆ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ ಪ್ರೀತಿಯಿಂದ ₹10 ಲಕ್ಷ ಕೊಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.