

ಬಿಗ್‌ಬಾಸ್ 12ನೇ ಸೀಸನ್‌ನಲ್ಲಿ ಮನೆಯೊಳಗೆ ಸ್ಪರ್ಧಿಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಶ್ವಿನಿ ಹಾಗೂ ಗಿಲ್ಲಿ ನಡುವೆ ಮಾತಿನ ಚಕಮಕಿ ಜೋರಾಗಿದೆ.
ಬಿಗ್ ಬಾಸ್ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ, ಬಿಗ್ ಬಾಸ್ ಮನೆಯ ನಿಯಮಗಳನ್ನು ಪಾಲಿಸದೇ ಇರುವವರ ಹೆಸರು ಹೇಳಿ ಎಂದು ಕೇಳುತ್ತಾರೆ. ಅದಕ್ಕೆ ಗಿಲ್ಲಿ, ರಾಶಿಕಾ ಸೇರಿ ಮನೆಯ ಬಹುತೇಕ ಸ್ವರ್ಧಿಗಳು ಅಶ್ವಿನಿ ಗೌಡ ಅವರ ಹೆಸರನ್ನು ಹೇಳಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಅಭಿಪ್ರಾಯ ಹಂಚಿಕೊಳ್ಳುತ್ತಾರೆ.
ಬಿಗ್ ಬಾಸ್ ಆದೇಶದಂತೆ ಅಶ್ವಿನಿ ಗೌಡ, ಸಹ ಸ್ಪರ್ಧಿಗಳ ಮುಂದೆ ಹೋಗಿ ಬಸ್ಕಿ ಹೊಡೆದು ಕ್ಷಮೆ ಕೇಳಲು ಮುಂದಾಗುತ್ತಾರೆ. ಒಬ್ಬೊಬ್ಬರ ಬಳಿ ಕ್ಷಮೆ ಕೇಳಿ ಬಳಿಕ, ಗಿಲ್ಲಿ ಅವರು ಕಾಲಿನ ಮೇಲೆ ಕಾಲು ಹಾಕಿ ಕುಳಿತು ಕ್ಷಮೆ ಕೇಳಲು ಆದೇಶಿಸುತ್ತಾರೆ. ಇದು ಅಶ್ವಿನಿಯವರ ಕೋಪಕ್ಕೆ ಕಾರಣವಾಗುತ್ತದೆ. ಗಿಲ್ಲಿ ಹಾಗೂ ಅಶ್ವಿನಿ ನಡುವಿನ ಮಾತಿನ ಚಕಮಕಿ ಹೇಗಿರುತ್ತದೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬಹುದು