ADVERTISEMENT

₹5 ಲಕ್ಷ ಆಫರ್ ತಿರಸ್ಕರಿಸಿ ಕ್ರೇಜಿಸ್ಟಾರ್ ಜೊತೆ ಮನೆಯಿಂದ ಆಚೆ ಬಂದ ಸ್ಪರ್ಧಿ ಇವರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2026, 16:21 IST
Last Updated 18 ಜನವರಿ 2026, 16:21 IST
<div class="paragraphs"><p>ಕಾವ್ಯ,&nbsp;ಕ್ರೇಜಿಸ್ಟಾರ್ ರವಿಚಂದ್ರನ್</p></div>

ಕಾವ್ಯ, ಕ್ರೇಜಿಸ್ಟಾರ್ ರವಿಚಂದ್ರನ್

   

ಚಿತ್ರ: ಜಿಯೋ ಹಾಟ್ ಸ್ಟಾರ್

ಬಿಗ್‌ಬಾಸ್‌ ಸೀಸನ್ 12ರ 3ನೇ ರನ್ನರ್‌ ಅಪ್‌ ಆಗಿ ಕಾವ್ಯ ಶೈವ ಮನೆಯಿಂದ ಆಚೆ ಬಂದಿದ್ದಾರೆ. ಗಿಲ್ಲಿ ಜೊತೆಗೆ ಬಿಗ್‌ಬಾಸ್‌ ಮನೆಗೆ ಜಂಟಿಯಾಗಿ ಆಗಮಿಸಿದ್ದರು. ಬರೋಬ್ಬರಿ 16 ವಾರಗಳ ನಂತರ ಅಚ್ಚರಿಯ ರೀತಿಯಲ್ಲಿ ಈಗ ಬಿಗ್‌ಬಾಸ್‌ ಮನೆಯಿಂದ ಆಚೆ ಬಂದಿದ್ದಾರೆ.

ADVERTISEMENT

ಕಾವ್ಯ

ಇನ್ನು, ಕಾವ್ಯ ಅವರನ್ನು ಬಿಗ್‌ಬಾಸ್‌ ಮನೆಯಿಂದ ಆಚೆ ಕರೆದುಕೊಂಡು ಬರಲು ಕ್ರೇಜಿಸ್ಟಾರ್ ರವಿಚಂದ್ರನ್‌ ಅವರು ಬಂದಿದ್ದರು. ಅಲ್ಲದೇ ಜೊತೆಗೆ ಸೂಟ್‌ಕೇಸ್‌ನಲ್ಲಿ ₹5 ಲಕ್ಷ ಇಟ್ಟುಕೊಂಡು ಬಂದಿದ್ದ ನಟ ರವಿಚಂದ್ರನ್‌ ಅವರು ಸ್ಪರ್ಧಿಗಳಿಗೆ ಆಫರ್‌ ಸಹ ಕೊಟ್ಟಿದ್ದರು. ಆದರೆ ಸ್ಪರ್ಧಿಗಳು ಆ ಆಫರ್ ಅನ್ನು ತಿರಸ್ಕರಿಸಿದ್ದರು.

ಕಾವ್ಯ

ಕಾವ್ಯ ಬಿಗ್‌ಬಾಸ್‌ನಿಂದ ಆಚೆ ಬರುತ್ತಿದ್ದಂತೆ ಅವರ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ನಾನು ಇಲ್ಲಿಯವರೆಗೂ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಇಲ್ಲಿ ತನಕ ಬಂದಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಕಿಚ್ಚ ಸುದೀಪ್‌ ಮುಂದೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.