ADVERTISEMENT

ರಕ್ಷಿತಾ ಶೆಟ್ಟಿಗೆ ಕಿಚ್ಚನ ಚಪ್ಪಾಳೆ ಸಿಗೋದಕ್ಕೆ ಕಾರಣವೇನು? ಸುದೀಪ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2025, 7:40 IST
Last Updated 24 ನವೆಂಬರ್ 2025, 7:40 IST
<div class="paragraphs"><p>ರಕ್ಷಿತಾ ಶೆಟ್ಟಿ</p></div>

ರಕ್ಷಿತಾ ಶೆಟ್ಟಿ

   

ಚಿತ್ರ: ಇನ್‌ಸ್ಟಾಗ್ರಾಮ್

ಬಿಗ್‌ಬಾಸ್‌ 12ನೇ ಆವೃತ್ತಿ 9ನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಸುದೀಪ್‌ ಅವರು ಈವರೆಗೆ ಕೇವಲ 4 ಮಂದಿಗೆ ಚಪ್ಪಾಳೆ ನೀಡಿದ್ದಾರೆ. ಅದರಲ್ಲೂ ಶನಿವಾರದ ಸಂಚಿಕೆಯಲ್ಲಿ ಮೊದಲ ಬಾರಿಗೆ ಮಹಿಳಾ ಸ್ಪರ್ಧಿಗೆ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.

ADVERTISEMENT

ಕಿಚ್ಚ ಸುದೀಪ್​ ಅವರು ಸುಖಾ ಸುಮ್ಮನೆ ಯಾರಿಗೂ ಚೆಪ್ಪಾಳೆ ತಟ್ಟುವುದಿಲ್ಲ. ಬಿಗ್‌ಬಾಸ್‌ ಮನೆಯಲ್ಲಿ ಆ ವಾರದಲ್ಲಿ ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗೆ ಮಾತ್ರ ಚಪ್ಪಾಳೆ ಹೊಡೆದು ಪ್ರಶಂಶಿಸುತ್ತಾರೆ. ವಿಭಿನ್ನ ಪರಿಕಲ್ಪನೆಯೊಂದಿಗೆ ಶುರುವಾದ ಈ ಬಾರಿಯ ಬಿಗ್​ಬಾಸ್ ಮನೆಯ ಕಿರಿಯ ಮಹಿಳಾ ಸ್ಪರ್ಧಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

ರಕ್ಷಿತಾ ಶೆಟ್ಟಿಗೆ ಸಿಕ್ತು ಕಿಚ್ಚನ ಚಪ್ಪಾಳೆ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಗೆ ಸುದೀಪ್‌ ಅವರು ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ. ಅದರಲ್ಲೂ ರಕ್ಷಿತಾ ಈ ವಾರ ಮಾಡಿದ್ದ ಕೆಲಸದ ಬಗ್ಗೆ ಕಿಚ್ಚ ಸುದೀಪ್‌ ಅವರು ಹೊಗಳಿದ್ದಾರೆ. ‘ಕಳೆದ ವಾರ ಕಿಚ್ಚ ಚಪ್ಪಾಳೆ ಕೊಟ್ಟಿಲ್ಲ. ಈ ವಾರ ಒಬ್ಬರಿಗೆ ಕಿಚ್ಚನ ಚಪ್ಪಾಳೆ ಕೊಡುತ್ತೇನೆ. ಕಳೆದ ವಾರ ನಾನು ಬಂದು ಕೆಲವರಿಗೆ ಬೈಯುತ್ತೇನೆ. ಅವರು ಸಾಗುತ್ತಿರುವ ದಾರಿಯಲ್ಲಿ ಅವರಿಗೆ ಅವರೇ ಮುಳ್ಳಾಗುತ್ತಾರೆ ಗೊತ್ತಾದಾಗ, ನಾನು ಕೆಲವರಿಗೆ ತರಾಟೆ ತೆಗೆದುಕೊಂಡೆ. ಅದಕ್ಕೆ ಕಾರಣ ಅವರು ಚೆನ್ನಾಗಿ ಆಡಲಿ ಅಂತ. ಹಾಗಿದ್ದಾಗ ತಕ್ಷಣವೇ ಇವರು ತಮ್ಮ ಆಟವನ್ನು ಬದಲಾಯಿಸಿಕೊಂಡು, ವಾಪಸ್‌ ಹಳೆಯ ವ್ಯಕ್ತಿತ್ವಕ್ಕೆ ಹೋಗಿ ಅತ್ಯುತ್ತಮವಾಗಿ ಆಟವನ್ನು ಆಡಿ, ತಪ್ಪನ್ನು ತಿದ್ದಿಕೊಂಡು, ಮಾನವೀಯತೆಯನ್ನು ತೋರಿಸಿ, ಯಾರ್ಯಾರಿಂದ ಬೈಸಿಕೊಳ್ಳುತ್ತಿದ್ದರೋ ಅವರಿಂದಲೇ ಉತ್ತಮ ಅಂತ ಹೇಳಿಸಿಕೊಂಡಿರೋ ರಕ್ಷಿತಾ ಅವರಿಗೆ ಈ ವಾರ ಕಿಚ್ಚನ ಚಪ್ಪಾಳೆ’ ಎಂದಿದ್ದಾರೆ.

ಕಿಚ್ಚನ ಚಪ್ಪಾಳೆ ಸಿಗುತ್ತಿದ್ದಂತೆ ರಕ್ಷಿತಾ ಶೆಟ್ಟಿ ಸಂತೋಷಪಟ್ಟಿದ್ದಾರೆ. ಶನಿವಾರದ ಸಂಚಿಕೆ ಮುಕ್ತಾಯದ ಬಳಿಕ ತಮಗಾದ ಖುಷಿಯನ್ನು ಮನೆಯ ಸದಸ್ಯರೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು, ಎಂಟು ವಾರ ಕಳೆದರೂ ಕೇವಲ ಗಿಲ್ಲಿ, ಧನುಷ್, ರಘು ಹಾಗೂ ರಕ್ಷಿತಾಗೆ ಮಾತ್ರ ಕಿಚ್ಚನ ಚಪ್ಪಾಳೆಯನ್ನು ಪಡೆದುಕೊಂಡಿದ್ದಾರೆ. ಉಳಿದ ಸ್ಪರ್ಧಿಗಳು ಕಿಚ್ಚನಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು ಅಂತ ಕಾಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.