ಬೆಂಗಳೂರು: ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪವಿ ಪೂವಪ್ಪ ಅವರು ಬಿಗ್‌ಬಾಸ್ ಮನೆಯೊಳಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದಾರೆ.
ಮನೆಯೊಳಗೆ ಹೋಗುವುದಕ್ಕೂ ಮೊದಲು ಅವರು ಜಿಯೋ ಸಿನಿಮಾಗೆ ಅವರು ನೀಡಿರುವ ಸಂದರ್ಶನದಲ್ಲಿ ಆಡಿದ ಮಾತುಗಳು ಇಲ್ಲಿವೆ.
‘ಹತ್ತು ವರ್ಷದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿದ್ದೇನೆ. ಬಿಗ್‌ಬಾಸ್ ಮನೆಯೊಳಗೆ ಹೋಗುತ್ತಿರುವುದು ಖುಷಿ ತಂದಿದೆ. ನಾನು ಮುಂಗೋಪಿ. ಅದು ಬಿಟ್ಟರೆ ನಾನು ಖುಷಿ ಖುಷಿಯಾಗಿರುತ್ತೇನೆ ಎಂದಿದ್ದಾರೆ.
ಮನೆಯೊಳಗೆ ಹೋದ ಬಳಿಕ ನನ್ನ ನಾಯಿಗಳನ್ನು ನಾನು ಮಿಸ್ ಮಾಡಿಕೊಳ್ಳುವೆ. ಅವುಗಳು ನನ್ನ ಜಗತ್ತು. ನನ್ನ ಬಳಿ ಹನ್ನೆರಡು ನಾಯಿಗಳಿವೆ ಎಂದು ಹೇಳಿದ್ದಾರೆ.
ನಾನು ದೈಹಿಕವಾಗಿ ಬಲಶಾಲಿಯಾಗಿದ್ದೇನೆ. ಅದೇ ನನ್ನ ಶಕ್ತಿ. ಮುಂಗೋಪ ನನ್ನ ದೌರ್ಬಲ್ಯ. ಈ ಆವೃತ್ತಿಯಲ್ಲಿ ಕಾರ್ತಿಕ್ ಇಷ್ಟದ ಸ್ಪರ್ಧಿ. ನನಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಅನಿಸುವುದು ತನಿಷಾ ಕುಪ್ಪಂಡ ಜೊತೆಗೆ. ನಮ್ಮಿಬ್ಬರ ಸ್ವಭಾವ ತದ್ವಿರುದ್ಧ ಇದೆ.
ಬಿಗ್‌ಬಾಸ್ ಗೆಲ್ಲಲು ಪ್ರಯತ್ನ ಪಡುವೆ. ವೈಲ್ಡ್‌ಕಾರ್ಡ್‌ನಲ್ಲಿ ಒಳಗೆ ಹೋದವರು ಗೆಲ್ಲಲು ಸಾಧ್ಯ ಇಲ್ಲ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಅದನ್ನು ಈ ಸಲ ಬದಲಾಯಿಸಬೇಕು ಅಂದುಕೊಂಡಿದ್ದೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.