ADVERTISEMENT

Bigg Boss Kannada: ಮದುವೆಯಾದ ಬಗ್ಗೆ ಮನಬಿಚ್ಚಿ ಮಾತನಾಡಿದ ವರ್ತೂರು ಸಂತೋಷ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2023, 5:22 IST
Last Updated 30 ನವೆಂಬರ್ 2023, 5:22 IST
<div class="paragraphs"><p>ವರ್ತೂರು ಸಂತೋಷ್‌</p></div>

ವರ್ತೂರು ಸಂತೋಷ್‌

   

ಬೆಂಗಳೂರು: ಈ ಬಾರಿಯ ಬಿಗ್‌ ಬಾಸ್‌ ಆರಂಭವಾದಾಗಿನಿಂದ ಹೆಚ್ಚು ಸುದ್ದಿಯಾದವರು ವರ್ತೂರು ಸಂತೋಷ್‌. ಮೊದಲು ಹುಲಿ ಉಗುರಿನ ಕಾರಣದಿಂದಾಗಿ ವಿವಾದಕ್ಕೆ ಒಳಗಾಗಿದ್ದ ಅವರು, ಬಳಿಕ ಅವರಿಗೆ ಮದುವೆಯಾಗಿದೆಯೋ ಇಲ್ಲವೋ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗಿತ್ತು. 

ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ವರ್ತೂರು ಸಂತೋಷ್‌ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. 

ADVERTISEMENT

‘ತಾಳಿ ಕಟ್ಟು ಎನ್ನುವವರಿಗೆ ತಾಳಿ ಕಟ್ಟಿತ್ತೇನೆ ಎಂದು ಮಾತು ಕೊಟ್ಟಿದ್ದೆ, ಅದರಂತೆ ಮದುವೆಯಾದೆ. ಆದರೆ ಮದುವೆಯ ಬಳಿಕ ಅಮ್ಮ, ನಾನು ಪ್ರೀತಿಸುವ ಜನರನ್ನು ದೂರವಿಡಬೇಕಾಗಿ ಬಂತು. ಹೀಗಾಗಿ ಆಕೆಯ ಬಳಿ, ನನ್ನ ಮಾತಿನಂತಿದ್ದರೆ ನೀನು ಈಗಲೂ ರಾಣಿಯೆ ಎಂದಿದ್ದೆ. ಅಂದು ಕೊಟ್ಟ ಮಾತಿಗೆ ಇಂದಿಗೂ ಬದ್ಧನಾಗಿದ್ದೇನೆ’ ಎಂದು ವರ್ತೂರು ಸಂತೋಷ್‌ ಮದುವೆಯ ಬಗ್ಗೆ ಇರುವ ಸತ್ಯವನ್ನು ಹಂಚಿಕೊಂಡಿದ್ದಾರೆ.

ಜಿಯೊ ಸಿನಿಮಾದಲ್ಲಿ 24 ಗಂಟೆಯೂ ನೇರಪ್ರಸಾರವಾಗುವ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ವರ್ತೂರು ಸಂತೋಷ್‌ ಇದೇ ಮೊದಲ ಬಾರಿಗೆ ತಮ್ಮ ಮದುವೆ, ಪತ್ನಿ ಜೊತೆಗಿನ ಭಿನ್ನಾಭಿಪ್ರಾಯಗಳ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.