ADVERTISEMENT

Bigg Boss 12 ಗ್ರ್ಯಾಂಡ್ ಫಿನಾಲೆ: ಯಾರ ಕೈಗೆ ಸೇರಲಿದೆ ಬಿಗ್‌ಬಾಸ್ ಟ್ರೋಫಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2026, 5:35 IST
Last Updated 16 ಜನವರಿ 2026, 5:35 IST
<div class="paragraphs"><p>ಬಿಗ್‌ಬಾಸ್‌ ಸೀಸನ್ 12ರ ಟಾಪ್‌ 6 ಫೈನಲಿಸ್ಟ್‌ಗಳು</p></div>

ಬಿಗ್‌ಬಾಸ್‌ ಸೀಸನ್ 12ರ ಟಾಪ್‌ 6 ಫೈನಲಿಸ್ಟ್‌ಗಳು

   

ಚಿತ್ರ: ಜಿಯೋ ಹಾಟ್ ಸ್ಟಾರ್

ಕನ್ನಡದ ಬಿಗ್‌ಬಾಸ್‌ ಸೀಸನ್ 12 ಅಂತಿಮ ಘಟ್ಟಕ್ಕೆ ತಲುಪಿದೆ. ಸದ್ಯ ಬಿಗ್‌ಬಾಸ್‌ ಮನೆಯಲ್ಲಿ ಟಾಪ್ 6 ಫೈನಲಿಸ್ಟ್‌ಗಳು ಉಳಿದುಕೊಂಡಿದ್ದಾರೆ. ಸ್ಪರ್ಧಿಗಳಾದ ಧನುಷ್ ಗೌಡ, ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಮತ್ತು ರಘು ಅವರು ಬಿಗ್‌ಬಾಸ್‌ ಸೀಸನ್ 12ರ ಟಾಪ್‌ 6 ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.

ADVERTISEMENT

ಇನ್ನು, ಜ.17 ಹಾಗೂ 18ರಂದು ಬಿಗ್‌ಬಾಸ್ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಈ ಬಾರಿಯ ಬಿಗ್‌ಬಾಸ್‌ ಸೀಸನ್ 12ರ ಟ್ರೋಫಿ ಯಾರ ಕೈಗೆ ಸೇರಲಿದೆ ಎಂದು ವೀಕ್ಷಕರಲ್ಲಿ ಕುತೂಹಲ ಮನೆಮಾಡಿದೆ. ಈಗಾಗಲೇ ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳ ಪರ ಅಬ್ಬರದ ಪ್ರಚಾರ ಶುರುವಾಗಿದೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯ, ರಕ್ಷಿತಾ, ಧನುಷ್ ಹಾಗೂ ರಘು ಪರ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಸಾಮಾಜಿಕ ಮಾಧ್ಯಮದ ಮೂಲಕ ಪ್ರಚಾರ ಶುರು ಮಾಡಿದ್ದಾರೆ.

ಇದೇ ಭಾನುವಾರ ಬಿಗ್‌ಬಾಸ್‌ ಸೀಸನ್ 12ರ ವಿನ್ನರ್‌ ಯಾರೆಂದು ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಘೋಷಿಸಲಿದ್ದಾರೆ. 2025ರ ಸೆ.28ರಂದು ಬಿಗ್‌ಬಾಸ್‌ ಆರಂಭಗೊಂಡಿತ್ತು. ಅರಮನೆ ಥೀಮ್‌ನಲ್ಲಿ ಬಿಗ್‌ಬಾಸ್‌ ಮನೆ ನಿರ್ಮಾಣವಾಗಿತ್ತು. ಆರಂಭದಲ್ಲಿ ಬಿಗ್‌ಬಾಸ್‌ ಮನೆಗೆ 19 ಸ್ಪರ್ಧಿಗಳು ಪ್ರವೇಶಿಸಿದ್ದರು. ಬಳಿಕ 3 ಸ್ಪರ್ಧಿಗಳು ವೈಲ್ಡ್‌ ಕರ್ಡ್ ಮೂಲಕ ಮನೆ ಪ್ರವೇಶಿಸಿದ್ದರು. ಸದ್ಯ ಬಿಗ್‌ಬಾಸ್‌ ಶೋ 110 ದಿನಕ್ಕೆ ಕಾಲಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.