ADVERTISEMENT

Bigg Boss | ಕಾವ್ಯ, ಗಿಲ್ಲಿ ವಿರುದ್ಧ ಸಿಡಿದೆದ್ದ ಅಶ್ವಿನಿ ಗೌಡ: ಆಗಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2025, 10:20 IST
Last Updated 30 ಸೆಪ್ಟೆಂಬರ್ 2025, 10:20 IST
<div class="paragraphs"><p>ಅಶ್ವಿನಿ ಗೌಡ, ಕಾವ್ಯ, ಗಿಲ್ಲಿ ನಟ</p></div>

ಅಶ್ವಿನಿ ಗೌಡ, ಕಾವ್ಯ, ಗಿಲ್ಲಿ ನಟ

   

ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ ಶುರುವಾದ ಎರಡನೇ ದಿನಕ್ಕೆ ಕಾವ್ಯ ಹಾಗೂ ಗಿಲ್ಲಿ ವಿರುದ್ಧ ಅಶ್ವಿನಿ ಗೌಡ ಅವರು ಏಕಾಏಕಿ ಸಿಡಿದೆದ್ದಿದ್ದಾರೆ. ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಪ್ರೊಮೋದಲ್ಲಿ ನಟಿ, ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಕಾವ್ಯ ಹಾಗೂ ಗಿಲ್ಲಿ ನಟನಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ADVERTISEMENT

ಪ್ರೊಮೋದಲ್ಲಿ ಏನಿದೆ?

‘ಕಾವ್ಯ ಮತ್ತು ಗಿಲ್ಲಿ ನಾವು ಏನಾದರೂ ಹೇಳಿದಾಗ ನೀವು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೀರಿ. ನೀವು ಗೌರವಯುತವಾಗಿ ನಡೆದುಕೊಂಡಾಗ ಮಾತ್ರ ನಮಗೂ ಒಂದು ಗೌರವ. ಮರ್ಯಾದೆ ಕೊಟ್ಟು ಮರ್ಯಾದೆ ತಗೋಬೇಕು ಎಂದು ಅಶ್ವಿನಿ ಗೌಡ ಎಚ್ಚರಿಕೆ ಕೊಟ್ಟಿದ್ದಾರೆ. ಆಗ ಗಿಲ್ಲಿ ನಟ, ಬೆಲೆ ಇರೋದಕ್ಕೆ ಹೀಗೆ ಮಾತಾಡುತ್ತಿದ್ದೇನೆ. ಇಲ್ಲವಾದರೆ, ನಾನು ಹೋಗೇ ಬಾರೇ ಎಂದು ಮಾತಾಡುತ್ತೇನೆ ಎಂದು ಅಶ್ವಿನಿ ಅವರಿಗೆ ಹೇಳಿದ್ದಾರೆ. ಇದೇ ವಿಚಾರಕ್ಕೆ ಗಿಲ್ಲಿ ನಟ, ಅಶ್ವಿನಿ ಹಾಗೂ ಕಾವ್ಯ ಮಧ್ಯೆ ಗಲಾಟೆ ನಡೆದಿದೆ.

ಇನ್ನು, ಈ ಮೂವರು ಗಲಾಟೆ ಮಾಡುತ್ತಿದ್ದಂತೆ ಮನೆಮಂದಿ ಶಾಕ್‌ ಆಗಿದ್ದಾರೆ. ಆದರೆ ಯಾರೊಬ್ಬರು ಅವರ ಗಲಾಟೆಯನ್ನು ಬಿಡಿಸುವುದಕ್ಕೆ ಬರಲಿಲ್ಲ. ಗಲಾಟೆ ವೇಳೆ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.