ADVERTISEMENT

BBK12: ಆಟದಿಂದ ಕಾವ್ಯ, ಗಿಲ್ಲಿಯನ್ನು ಹೊರಗಿಡಲು ರಾಶಿಕಾ ಮಾಸ್ಟರ್ ಪ್ಲಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2025, 12:44 IST
Last Updated 2 ಡಿಸೆಂಬರ್ 2025, 12:44 IST
<div class="paragraphs"><p>ರಾಶಿಕಾ, ಕಾವ್ಯ, ಗಿಲ್ಲಿ ನಟ</p></div>

ರಾಶಿಕಾ, ಕಾವ್ಯ, ಗಿಲ್ಲಿ ನಟ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್12ನೇ ಆವೃತ್ತಿ ಶುರುವಾಗಿ 65ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಮತ್ತೆ ಸ್ಪರ್ಧಿಗಳನ್ನು ಜಂಟಿಗಳನ್ನಾಗಿ ಮಾಡಿದ್ದಾರೆ ಬಿಗ್‌ಬಾಸ್‌. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ.

ADVERTISEMENT

ಅದರಲ್ಲಿ ಬಿಗ್‌ಬಾಸ್‌ ಮತ್ತೆ ಸ್ಪರ್ಧಿಗಳನ್ನು ಜಂಟಿಗಳನ್ನಾಗಿ ಮಾಡಿದ್ದಾರೆ. ಆದರೆ ಈ ಬಾರಿ ಸ್ಪರ್ಧಿಗಳೇ ತಮ್ಮ ಜೊತೆಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರೊಮೋದಲ್ಲಿ ಅಶ್ವಿನಿ ಗೌಡ ಮತ್ತು ರಘು ಒಂದಾಗಿದ್ದು, ರಜತ್ ಹಾಗೂ ಚೈತ್ರಾ ಕುಂದಾಪುರ ಜೋಡಿಯಾಗಿದ್ದಾರೆ. ಮತ್ತೊಂದು ಕಡೆ ಧ್ರುವಂತ್‌ಗೆ ಯಾರು ಕೂಡ ಜೋಡಿಯಾಗಲು ಮಹಿಳಾ ಸ್ಪರ್ಧಿಗಳು ಒಪ್ಪಿಕೊಂಡಿಲ್ಲ.

ಇನ್ನು, ಕೊನೆಯ ಕ್ಷಣದಲ್ಲಿ ಕಾವ್ಯಾ ಮತ್ತು ಗಿಲ್ಲಿ ಮತ್ತೆ ಒಂದಾಗಿದ್ದಾರೆ. ರಾಶಿಕಾ ಅವರು ಸೂರಜ್‌ನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ವಾರ ಪೂರ್ತಿ ಟಾಸ್ಕ್​​ಗಳು ಜಂಟಿಯಾಗಿಯೇ ನಡೆಯಲಿವೆ. ಆಗಲೇ ರಾಶಿಕಾ ಟಾಸ್ಕ್​​ಗಳ ಬಗ್ಗೆ ಯೋಜನೆಯನ್ನು ಮಾಡಿದ್ದಾರೆ. ಕಾವ್ಯಾ ಮತ್ತು ಗಿಲ್ಲಿಯನ್ನು ಸೋಲಿಸಿ ಟಾಸ್ಕ್‌ನಿಂದ ಹೊರಗೆ ಹಾಕುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸೂರಜ್ ಜೊತೆಗೆ ಚರ್ಚೆ ಮಾಡಿದ್ದು ಪ್ರೊಮೋದಲ್ಲಿ ಕಾಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.