
ತನಿಷಾ
ಬೆಂಗಳೂರು: ಇನ್ನೇನು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಫಿನಾಲೆ ವಾರ ಆರಂಭವಾಗಲಿದೆ. ಇದೀಗ ಮನೆಗೆ ದಿನಸಿಯನ್ನು ಕಳುಹಿಸಲು ಮನೆಯ ಸದಸ್ಯರೊಬ್ಬರ ಮೇಕಪ್ ಕಿಟ್‌ಅನ್ನು ವಾಪಸ್ ಕಳುಹಿಸುವಂತೆ ಬಿಗ್ ಬಾಸ್ ಕೇಳಿದ್ದಾರೆ.
ಇದರಲ್ಲಿ ಮನೆಯ ಸದಸ್ಯರೆಲ್ಲರೂ ತನಿಷಾ ಅವರ ಹೆಸರನ್ನು ಹೇಳಿದ್ದಾರೆ. ಹೀಗಾಗಿ ಬಿಗ್ ಬಾಸ್ ತನಿಷಾ ಅವರ ಬಳಿ ಮೆಕಪ್ ಕಿಟ್ ಅನ್ನು ಸ್ಟೋರ್‌ರೂಮ್‌ಗೆ ತಂದಿಡುವಂತೆ ಆದೇಶಿಸಿದ್ದಾರೆ.
ಮೇಕಪ್ ಕಿಟ್ ಕಳೆದುಕೊಂಡು ತನಿಷಾ ಗಳಗಳನೆ ಅತ್ತಿದ್ದಾರೆ. ದಿನಸಿ ಬೇಕಾದರೂ ಬಿಟ್ಟುಕೊಡುತ್ತೀನಿ, ಮೇಕಪ್ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.