
ಬಿಗ್‌ಬಾಸ್ - 12ನೇ ಆವೃತ್ತಿ ಮುಗಿದ ಬಳಿಕ ನಟ, ನಿರೂಪಕ ಕಿಚ್ಚ ಸುದೀಪ್ ಅವರು ಟ್ರೋಪಿ ಗೆದ್ದ ಗಿಲ್ಲಿ ಹಾಗೂ ಉಳಿದ ಸ್ಪರ್ಧಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಶುಭ ಹಾರೈಸಿದ್ದಾರೆ.
ಗಿಲ್ಲಿ ಅವರ ಜೊತೆ ಕಿಚ್ಚ ಸುದೀಪ್ ಅವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ, ಕರಿಬಸಪ್ಪ, ಮಾಳು, ಕಾವ್ಯ, ರಜತ್ ಮಲ್ಲಮ್ಮ ಅವರು ಕೂಡ ಜತೆಯಾಗಿದ್ದಾರೆ.
ಫಿನಾಲೆ ವೀಕ್ಷಿಸಲು ಬಂದ ಸ್ಪರ್ಧಿಗಳಲ್ಲಿ ಸುದೀಪ್ ಅವರು ಬಿಗ್‌ಬಾಸ್ - 12ನೇ ಆವೃತ್ತಿಯನ್ನು ‘ಯಾರು ಗೆಲ್ಲಬೇಕು, ಯಾರು ಗೆಲ್ಲಬಹುದು? ಎಂದು ಕೇಳಿದಾಗ ಅನೇಕರು ಗಿಲ್ಲಿ ಅವರ ಹೆಸರು ಸೂಚಿಸಿದ್ದರು.
ಈ ಬಾರಿ ಬಿಗ್‌ಬಾಸ್‌ನಲ್ಲಿ ತಮ್ಮ ಮಾತಿನ ಮೂಲಕ ನಗೆ ಚಟಾಕಿ ಹಾರಿಸಿ ಹೆಚ್ಚು ಮನರಂಜನೆ ನೀಡಿದ ಗಿಲ್ಲಿ ಅವರಿಗೆ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ ₹10 ಲಕ್ಷ ಕೊಡುವುದಾಗಿ ವೇದಿಕೆ ಮೇಲೆ ಘೋಷಣೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.