ನಟ ದರ್ಶನ್
ಚಿತ್ರ: ಇನ್‌ಸ್ಟಾಗ್ರಾಮ್
ನಟ ದರ್ಶನ್ ಅಭಿಮಾನಿಗಳಿಗೆ ‘ದಿ ಡೆವಿಲ್’ ಚಿತ್ರತಂಡ ಒಂದಾದ ಮೇಲೆ ಒಂದರಂತೆ ಅಪ್‌ಡೇಟ್‌ಗಳನ್ನು ನೀಡುತ್ತಿದೆ. ಈಗ ‘ದಿ ಡೆವಿಲ್’ ಚಿತ್ರದ ಹೊಸ ಹಾಡಿಗೆ ಸಜ್ಜಾಗಿ ಎಂದು ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಈಗಾಗಲೇ ಈ ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿವೆ. ಈಗ ಡೆವಿಲ್ ಸಿನಿಮಾದ ಮೂರನೇ ಹಾಡಿಗೆ ದಿನಾಂಕ ನಿಗದಿಯಾಗಿದೆ. ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಮಾಧ್ಯಮದಲ್ಲಿ ‘ನ.16 ಮಧ್ಯಾಹ್ನ 12:03ಕ್ಕೆ ದಿ ಡೆವಿಲ್‌ನ ಹೊಸ ಹಾಡು ಬಿಡುಗಡೆಯಾಗಲಿದೆ ಸಜ್ಜಾಗಿರಿ’ ಎಂದು ಮಾಹಿತಿ ಹಂಚಿಕೊಂಡಿದೆ.
‘ದಿ ಡೆವಿಲ್’ ಸಿನಿಮಾದ ಹಾಡು ಬಿಡುಗಡೆ ಬಗ್ಗೆ ನಟಿ ರಚಿತಾ ರಾಮ್ ಕೂಡ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ‘ನವೆಂಬರ್ 16ರಂದು ಮಧ್ಯಾಹ್ನ 12:30ಕ್ಕೆ ಮುಂದಿನ ಹಾಡಿಗೆ ಸಿದ್ಧರಾಗಿ’ ಎಂದು ಬರೆದುಕೊಂಡಿದ್ದಾರೆ.
ನಿನ್ನೆ (ಬುಧವಾರ) ಶ್ರೀ ಜೈಮಾತಾ ಕಂಬೈನ್ಸ್ ‘2024 ಮಾರ್ಚ್ 22ರಂದು ‘ದಿ ಡೆವಿಲ್’ ಮೊದಲ ಹಂತದ ಚಿತ್ರೀಕರಣ ಸಂದರ್ಭ ಹೀಗೆ ಆರಂಭವಾಯಿತು ಎಂದು ಡೆವಿಲ್‌ನ ಪ್ರಯಾಣದ ಬಗ್ಗೆ ವಿಡಿಯೊ ಹಂಚಿಕೊಂಡಿತ್ತು. ಅದರಲ್ಲಿ ನಟ ದರ್ಶನ್ ಇದ್ರೆ ನೆಮ್ಮದಿಯಾಗಿ ಇರಬೇಕು ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಕೆಲವೊಂದು ಸಾಹಸ ದೃಶ್ಯಗಳಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದರು. ಡೆವಿಲ್ ಸಿನಿಮಾ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ. ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.