ADVERTISEMENT

ಮೋಸದಿಂದ ಕ್ಯಾಪ್ಟನ್ ಆದ ಧನುಷ್: ಅಸಲಿ ವಿಡಿಯೊ ನೋಡಿ ಮನೆಮಂದಿ ಅಚ್ಚರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2026, 6:10 IST
Last Updated 2 ಜನವರಿ 2026, 6:10 IST
<div class="paragraphs"><p>ಧನುಷ್</p></div>

ಧನುಷ್

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ 96ನೇ ದಿನಕ್ಕೆ ಕಾಲಿ‌ಟ್ಟಿದೆ. ಬಿಗ್‌ಬಾಸ್ ಮನೆಯ 12ನೇ ಸೀಸನ್​ನ ಕೊನೆಯ ಕ್ಯಾಪ್ಟನ್ ಆಗಿ ಧನುಷ್ ಅವರು ಹೊರ ಹೊಮ್ಮಿದ್ದಾರೆ. ಆದರೆ ಬಿಗ್‌ಬಾಸ್‌ ನೀಡಿದ ಕೊನೆಯ ಕ್ಯಾಪ್ಟನ್ಸಿ ಆಟದಲ್ಲಿ ಧನುಷ್ ಅವರು ನಿಯಮ ಪಾಲಿಸದಿರುವುದು ಪ್ರೋಮೊದಲ್ಲಿ ಕಾಣಿಸಿದೆ.

ADVERTISEMENT

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಧನುಷ್ ಹಾಗೂ ಅಶ್ವಿನಿ ಗೌಡ ನಡುವೆ ಕ್ಯಾಪ್ಟೆನ್ಸಿ ಟಾಸ್ಕ್ ನಡೆದಿದೆ. ಒಂದು ಕಡೆ ಅಶ್ವಿನಿ ಗೌಡ ಮತ್ತೊಂದು ಕಡೆ ಧನುಷ್ ಕ್ಯಾಪ್ಟನ್ಸಿ ರೇಸ್‌ನಲ್ಲಿದ್ದರು. ಪಜಲ್ ಟಾಸ್ಕ್‌ನಲ್ಲಿ ಧನುಷ್ ಗೆದ್ದು ಬಿಗ್‌ಬಾಸ್‌ ಮನೆಯ ಕೊನೆಯ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದರು.

ಈ ಟಾಸ್ಕ್ ಮುಗಿದ ಬಳಿಕ ಬಿಗ್‌ಬಾಸ್‌ ಟಿವಿಯಲ್ಲಿ ಧನುಷ್ ಟಾಸ್ಕ್‌ನಲ್ಲಿ ನಿಯಮ ಪಾಲಿಸದೇ ಇರುವುದು ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.