ಕಲರ್ಸ್ ಕನ್ನಡದ ವಾಹಿನಿಯಲ್ಲಿ ಪ್ರಸಾರವಾಗುತ್ತಿರುಯವ ಜನಪ್ರಿಯ ಧಾರಾವಾಹಿ 'ಕರಿಮಣಿ', ರೋಚಕ ಘಟ್ಟಕ್ಕೆ ತಲುಪಿದೆ. ಕಥೆಯುದ್ದಕ್ಕೂ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದ್ದ 'ಬ್ಲ್ಯಾಕ್ ರೋಸ್' ಪಾತ್ರ ರಿವೀಲ್ ಆಗುವ ಸಮಯ ಬಂದಿದೆ.
ಧಾರಾವಾಹಿಯಲ್ಲಿ 'ಬ್ಲ್ಯಾಕ್ ರೋಸ್' ಪಾತ್ರ ನೋಡುಗರಿಗೆ ಸದಾ ಯಕ್ಷಪ್ರಶ್ನೆಯಾಗಿತ್ತು. ಧಾರಾವಾಹಿಯ ಕಥಾ ನಾಯಕ ಕರ್ಣನನ್ನು ಮುಗಿಸಲು ಸದಾ ಅವಕಾಶ ಹುಡುಕುತ್ತಿದ್ದ ಬ್ಲ್ಯಾಕ್ ರೋಸ್', ಅನೇಕ ಪ್ರಯತ್ನಗಳಲ್ಲಿ ವಿಫಲನಾಗಿದ್ದ. 'ಬ್ಲ್ಯಾಕ್ ರೋಸ್' ಪಾತ್ರ ನೋಡುವಾಗಲೆಲ್ಲ ಪ್ರೇಕ್ಷಕರ ಮನಸ್ಸಿನಲ್ಲಿ ಒಂದು ಪ್ರಶ್ನೆ ಕಾಡುತ್ತಿತ್ತು.
'ಕರ್ಣ' ಎಂದರೆ ಆಗದೆ ಇರೋ ವನಜ ಆಗಿರಬಹುದಾ? ನಳಿನಿನಾ ? ಅಥವಾ ವೆಂಕಟೇಶ್ ಆಗಿರಬಹುದಾ ಎಂದು ಗೆಸ್ ಮಾಡುತ್ತಾ ಕುಳಿತಿದ್ದ ಪ್ರೇಕ್ಷಕರಿಗೆ ಉತ್ತರ ಸಿಗುವ ಸಮಯ ಬಂದಿದೆ ಎಂದು ಧಾರಾವಾಹಿ ತಂಡ ತಿಳಿಸಿದೆ. ಮನರಂಜನೆ ನೀಡುವ ಮೂಲಕ ಖಳನಾಯಕ ಅಥವಾ ಖಳನಾಯಕಿ ಪಾತ್ರದಲ್ಲಿ ಮುಖವಾಡ ಮೂಲಕ ಪರಿಚಯವಿದ್ದ ಬ್ಲ್ಯಾಕ್ ರೋಸ್‌ನ ಅಸಲಿ ಮುಖ ಗೊತ್ತಾಗಲಿದೆ.
ಬ್ಲ್ಯಾಕ್ ರೋಸ್ A rose is a rose is a rose ಇಂಗ್ಲಿಷ್ ಸಾಹಿತ್ಯದ ಪ್ರಸಿದ್ಧ ಸಾಲು.. ಗುಲಾಬಿ ಯಾವತ್ತಿಗೂ ಗುಲಾಬಿಯೇ ಎಂಬರ್ಥ ನೀಡುತ್ತದೆ. ಇದರ ಪ್ರೇರಣೆಯಿಂದಲೇ ಬ್ಲ್ಯಾಕ್ ರೋಸ್ ಪಾತ್ರವನ್ನು ಸೃಷ್ಟಿಸಲಾಯಿತು ಎನ್ನುತ್ತದೆ ಧಾರಾವಾಹಿ ತಂಡ. ಆದರೆ ಈ ಧಾರಾವಾಹಿ ಯಲ್ಲಿ ‘ಬ್ಲ್ಯಾಕ್ ರೋಸ್‘ನನ್ನೇ ನೆಗಟೀವ್ ಶೆಡ್‌ನ ಪ್ರತಿಬಿಂಬವಾಗಿ ಬಳಸಿಕೊಳ್ಳುವ ಮೂಲಕ ವಿಭಿನ್ನವಾಗಿ ಚಿತ್ರಿಸಲಾಗಿದೆ.
ಇದೇ ಸೋಮವಾರ (ಮಾರ್ಚ್ 24) ಬ್ಲ್ಯಾಕ್ ರೋಸ್ ಪಾತ್ರದ ಮುಖವಾಡ ಸಂಜೆ 6ಕ್ಕೆ ಕಳಚಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.