ADVERTISEMENT

ಬಿಗ್‌ಬಾಸ್‌ ಸ್ಪರ್ಧಿ ಧನುಷ್‌ಗೆ ಸಿಕ್ತು ಕಿಚ್ಚನಿಂದ ಸುಂದರ ಉಡುಗೊರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2026, 6:13 IST
Last Updated 21 ಜನವರಿ 2026, 6:13 IST
<div class="paragraphs"><p>ಧನುಷ್, ಕಿಚ್ಚ ಸುದೀಪ್</p></div>

ಧನುಷ್, ಕಿಚ್ಚ ಸುದೀಪ್

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಯಾಗಿದ್ದ ಧನುಷ್‌ ಅವರಿಗೆ ಕಿಚ್ಚ ಸುದೀಪ್ ಅವರು ಸುಂದರ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ‘ಗೀತಾ’ ಧಾರಾವಾಹಿ ನಟ ಧನುಷ್‌ ಅವರು 5ನೇ ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದ್ದಾರೆ.

ADVERTISEMENT

ಧನುಷ್

ಭಾನುವಾರದ (ಜ.18) ಸಂಚಿಕೆಯಲ್ಲಿ ಬಿಗ್‌ಬಾಸ್‌ ಸೀಸನ್ 12ರ ಗ್ರ್ಯಾಂಡ್‌ ಫಿನಾಲೆ ನಡೆದಿತ್ತು. ಫಿನಾಲೆಯಲ್ಲಿ ಗಿಲ್ಲಿ ನಟ ಅವರು ಈ ಬಾರಿಯ ಬಿಗ್‌ಬಾಸ್‌ ವಿಜೇತರಾಗಿ ಹೊರ ಹೊಮ್ಮಿದ್ದರು. ರಕ್ಷಿತಾ ಶೆಟ್ಟಿ ಅವರು ರನ್ನರ್‌ ಅಪ್‌ ಆಗಿದ್ದರು. ಇನ್ನು, ಸಂಚಿಕೆಯ ಮಧ್ಯೆ ಧನುಷ್‌ ಅವರು ಕಿಚ್ಚ ಸುದೀಪ್ ಅವರ ಬಳಿ ‘ಅಣ್ಣ ನನಗೆ ನಿಮ್ಮ ಜಾಕೆಟ್‌ ಬೇಕಿತ್ತು’ ಎಂದು ಹೇಳಿದ್ದಾರೆ. ಆಗ ಸುದೀಪ್, ಓಕೆ ಕೊಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು, ಫಿನಾಲೆ ಮುಗಿದ ಬಳಿಕ ಕಿಚ್ಚ ಸುದೀಪ್ ಅವರು ತಾವು ಫಿನಾಲೆಗೆ ಧರಿಸಿದ್ದ ಜಾಕೆಟ್ ಅನ್ನು ಧನುಷ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಇದೇ ಫೋಟೊವನ್ನು ಧನುಷ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ನಿಮ್ಮ ಆಶೀರ್ವಾದ ಸದಾ ಇರಲಿ ಸುದೀಪ್ ಸರ್’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.