
ಮಲ್ಲಮ್ಮ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ ಸೀಸನ್ 12 ಮುಕ್ತಾಯ ಹಂತಕ್ಕೆ ತಲುಪಿದೆ. ಇನ್ನು ಒಂದು ವಾರದಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋ ಅಂತ್ಯ ಕಾಣಲಿದೆ. ಈ ಹೊತ್ತಲ್ಲಿ ಅಚ್ಚರಿ ಎಂಬಂತೆ ಬಿಗ್‌ಬಾಸ್ ಮನೆಗೆ ಮತ್ತೆ ಮಲ್ಲಮ್ಮ ಎಂಟ್ರಿ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಮಲ್ಲಮ್ಮ ಅವರು ಮರಳಿ ಮನೆ ಪ್ರವೇಶಿಸಿದ್ದಾರೆ. ಮಲ್ಲಮ್ಮ ಅವರು ಮುಖ್ಯದ್ವಾರದ ಮೂಲಕ ಬಿಗ್‌ಬಾಸ್ ಮನೆ ಪ್ರವೇಶಿದ್ದಾರೆ. ಮಲ್ಲಮ್ಮ ಅವರನ್ನು ನೋಡುತ್ತಿದ್ದಂತೆ ಮನೆಮಂದಿ ಖುಷಿಪಟ್ಟಿದ್ದಾರೆ.
ಮಲ್ಲಮ್ಮ ಬರುತ್ತಿದ್ದಂತೆ ಅವರನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ಈ ಮೊದಲು ಮಲ್ಲಮ್ಮ ಅವರು ಧ್ರುವಂತ್ ಜೊತೆಗೆ ತುಂಬಾ ಆತ್ಮೀಯರಾಗಿದ್ದರು. ಆದರೆ ಈಗ ಆತ್ಮೀಯತೆ ಉಳಿದಿಲ್ಲ ಎಂದು ಪ್ರೋಮೊದಲ್ಲಿ ಎದ್ದು ಕಾಣಿಸಿದೆ. ಇದೇ ವಿಚಾರದ ಬಗ್ಗೆ ಧ್ರುವಂತ್ ಅವರು ಅಶ್ವಿನಿ ಗೌಡ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ ಪ್ರೋಮೊ ಕೊನೆಯಲ್ಲಿ ಮಲ್ಲಮ್ಮ ಅವರ ತಲೆಯ ಮೇಲೆ ಧನುಷ್ ಗೌಡ ತಣ್ಣೀರನ್ನು ಹಾಕಿದ್ದಾರೆ.
ಸದ್ಯ ಬಿಗ್‌ಬಾಸ್ ಮನೆಯಲ್ಲಿ ಈಗ ಧನುಷ್, ಕಾವ್ಯ, ಗಿಲ್ಲಿ, ರಕ್ಷಿತಾ, ರಘು, ಅಶ್ವಿನಿ ಗೌಡ ಹಾಗೂ ಧ್ರುವಂತ್ ಉಳಿದುಕೊಂಡಿದ್ದಾರೆ. ಈ ಏಳು ಮಂದಿ ಪೈಕಿ ಒಬ್ಬ ಸ್ಪರ್ಧಿ ಮಾತ್ರ ಬಿಗ್‌ಬಾಸ್ ಸೀಸನ್ 12ರ ವಿಜೇತರಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.