ADVERTISEMENT

ಫೆ.8ರಿಂದ ನೂತನ ಧಾರವಾಹಿ ‘ನಯನತಾರಾ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 10:31 IST
Last Updated 7 ಫೆಬ್ರುವರಿ 2021, 10:31 IST
ನಯನತಾರಾ ಧಾರಾವಾಹಿ ತಾರಾಗಣ
ನಯನತಾರಾ ಧಾರಾವಾಹಿ ತಾರಾಗಣ   

ಖ್ಯಾತ ಚಲನಚಿತ್ರ ನಿರ್ಮಾಪಕ ಜಯಣ್ಣ ಅವರು ಮೊಟ್ಟ ಮೊದಲ ಬಾರಿಗೆ ಕಿರುತೆರೆ ನಿರ್ಮಾಣಕ್ಕೆ ಕಾಲಿಡುತ್ತಿದ್ದು, ತಮ್ಮ ಜಯಣ್ಣ ಕಂಬೈನ್ಸ್‌ ಮೂಲಕ ‘ನಯನತಾರಾ’ ಧಾರಾವಾಹಿ ನಿರ್ಮಿಸುತ್ತಿದ್ದಾರೆ.

ʻಚಿತ್ರ ನಿರ್ಮಾಣ ಒಂದು ಸಲಕ್ಕೆ ಮುಗಿದು ಹೋಗುವ ಪ್ರಕ್ರಿಯೆ. ಧಾರಾವಾಹಿ ನಿರ್ಮಾಣವೆಂದರೆ ದಿನವೂ ಮದುವೆ ಮಾಡಿದಂತೆ. ಇದು ಒಂದು ರೀತಿಯ ಸವಾಲಿನ ಕೆಲಸ. ಕನ್ನಡ ಕಿರುತೆರೆಗೆ ಉದಯ ಟಿವಿ ಮೂಲಕ ಕಾಲಿಡುತ್ತಿರುವುದು ಹೆಮ್ಮೆಯ ವಿಷಯ. ಉದಯ ಟಿವಿ ಯಾವತ್ತೂ ಚಿತ್ರ ನಿರ್ಮಾಪಕರನ್ನು ಬೆಂಬಲಿಸುತ್ತ ಬಂದಿದೆ. ನಿರೀಕ್ಷೆಗೆ ತಕ್ಕಹಾಗೆ ಈ ಧಾರಾವಾಹಿಯನ್ನು ಸಿನಿಮಾ ಗುಣಮಟ್ಟದಲ್ಲೇ ಕೊಡಬೇಕು ಅನ್ನೋದು ನಮ್ಮ ಗುರಿʼ ಎನ್ನುತ್ತಾರೆ ಜಯಣ್ಣ.

ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ತಿಲಕ್‌ ಅವರು ಈ ಧಾರಾವಾಹಿ ನಿರ್ದೇಶಿಸುತ್ತಿದ್ದು, ತಾರಾಗಣದಲ್ಲಿ ಚೈತ್ರಾ, ಅಶ್ವಿನಿ, ಧನುಷ್‌, ಸಂಧ್ಯಾ, ವೆಂಕಟೇಶ್‌, ಮಹಾದೇವ, ಸೂರಜ್‌ ಮುಂತಾದವರು ಇದ್ದಾರೆ.

ADVERTISEMENT

ತನ್ನ ಪ್ರಾಮಾಣಿಕತೆ, ನಿಷ್ಠೆಯ ಮೂಲಕ ಮನಗೆಲ್ಲುವ ಸರಳ ಹುಡುಗಿ ನಯನಾ ಮತ್ತು ಅತಿಯಾಸೆ,
ಭ್ರಮೆ, ಸುಳ್ಳು, ವಿಶ್ವಾಸದ್ರೋಹದ ಮೂಲಕ ಬದುಕಲ್ಲಿ ಸೋಲುವ ತಾರಾ ಈ ಇಬ್ಬರು ಅಕ್ಕತಂಗಿಯರ ಕಥೆ ‘ನಯನತಾರಾ’.
ಮನೆಕೆಲಸ ಮಾಡಿಕೊಂಡು ತಂಗಿ ತಾರಾಳನ್ನು ಓದಿಸುವ, ಅವಳ ಮದುವೆ ಮಾಡಿ ದಡ ಸೇರಿಸಲು ಪ್ರಯತ್ನಿಸುವ ನಯನಾ, ಎಂದೂ ತನ್ನ ಜೀವನದ ಬಗ್ಗೆ ಯೋಚಿಸುವವಳಲ್ಲ. ಆದರೆ ಸತ್ಯ, ಪ್ರಾಮಾಣಿಕತೆ ಇದ್ದಲ್ಲಿ ದೇವರೇ ದಾರಿ ತೋರುತ್ತಾನೆ ಎಂಬ ಮಾತಿನಂತೆ ಅವಳ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತ ಹೋಗುತ್ತದೆ. ಆದರೆ ಈ ಸತ್ಯ, ಪ್ರಾಮಾಣಿಕತೆಯ ದಾರಿ ಸುಲಭವಲ್ಲ. ಅಡೆತಡೆಗಳನ್ನು ದಾಟಿ ಮುನ್ನಡೆಯಬೇಕಾಗುತ್ತದೆ. ಇದೇ ಕಥೆಯ ಸಾರಾಂಶ.

ಧಾರಾವಾಹಿಯು ಫೆ.8ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.