
ರಕ್ಷಿತಾ ಶೆಟ್ಟಿ, ರಘು, ಗಿಲ್ಲಿ ನಟ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಮುಕ್ತಾಯಗೊಂಡು 25 ದಿನಗಳು ಕಳೆದಿವೆ. ಬಿಗ್‌ಬಾಸ್ ಬಳಿಕ ಇದೇ ಮೊದಲ ಬಾರಿಗೆ ಎಲ್ಲಾ ಸ್ಪರ್ಧಿಗಳು ‘ದೊಡ್ಮನೆ ಹಬ್ಬ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದರ ಪ್ರೋಮೊ ರಿಲೀಸ್ ಆಗಿದ್ದು, ವೇದಿಕೆ ಮೇಲೆ ರಕ್ಷಿತಾ ಶೆಟ್ಟಿ ಅವರು ಭಾವುಕರಾಗಿದ್ದಾರೆ.
ರಕ್ಷಿತಾ ಶೆಟ್ಟಿ
ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೋಮೊದಲ್ಲಿ, ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕಳೆದ ಕೆಲವೊಂದು ಸುಂದರ ಕ್ಷಣಗಳನ್ನು ಮೆಲುಕು ಹಾಕಲಾಗಿದೆ. ಸ್ಪರ್ಧಿಗಳೆಲ್ಲಾ ಫೋಟೊ ನೋಡುತ್ತಾ ತಾವು ಕಳೆದ ಅದ್ಭುತ ದಿನಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ‘ಬಿಗ್ ಬಾಸ್ ಮನೆಯಲ್ಲಿ ದಿನ ಕಳೆದಂತೆ ನಾವು ಮಕ್ಕಳಾಗುತ್ತೇವೆ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ನಾವು ಬಿಗ್ ಬಾಸ್ ಮನೆಯಲ್ಲಿ ಕಳೆದ ಕ್ಷಣಗಳನ್ನು ಮನಸ್ಸಿನಿಂದ ಜೀವಿಸಿದ್ದೇವೆ ಎಂದು ಧ್ರುವಂತ್ ಹೇಳಿದ್ದಾರೆ.
ಬಳಿಕ ಮಾತನಾಡಿದ ರಕ್ಷಿತಾ ಶೆಟ್ಟಿ, ಬಿಗ್‌ಬಾಸ್ ಮುಗಿದು ತುಂಬ ದಿನ ಆಯ್ತು. ಆಗ ಒಟ್ಟಾಗಿ ಕೂತುಕೊಂಡು, ತುಂಬಾ ಮಾತನಾಡುತ್ತಿದ್ದೆವು. ಈಗ ದೂರ ಆಗಿದ್ದಾರೆ ಅಂತ ಬೇಜಾರು ಆಗುತ್ತಿದೆ. ದಯವಿಟ್ಟು ನಮ್ಮ ಸಂಬಂಧವನ್ನು ದೂರ ಮಾಡಬೇಡಿ ಎಂದು ರಕ್ಷಿತಾ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಆ ಕೂಡಲೇ ಗಿಲ್ಲಿ ನಟ, ರಘು ಅವರು ವೇದಿಕೆಗೆ ಓಡಿಬಂದು ರಕ್ಷಿತಾಳನ್ನು ಸಮಾಧಾನ ಮಾಡಿ ಮೂವರು ಅಪ್ಪಿಕೊಂಡಿದ್ದಾರೆ.
ಇದೇ ವಿಡಿಯೊ ನೋಡಿದ ಅಭಿಮಾನಿಗಳು, ’ರಕ್ಷಿತಾ, ಗಿಲ್ಲಿ, ರಘು ಅವರನ್ನು ತುಂಬಾ ಹಚ್ಚಿಕೊಂಡಿದ್ದಾಳೆ. ಮೂವರೂ ಯಾವಾಗಲೂ ಹೀಗೆ ಒಟ್ಟಿಗೆ ಇರಿ‘, ‘ರಕ್ಷಿತಾ ಗಿಲ್ಲಿಯ ತರಲೆ ತುಂಟಾಟಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಕಮೆಂಟ್ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.