ADVERTISEMENT

ರಾಮನಗರ: ಪೊಲೀಸರಿಂದ ನಟಿ ಸೌಜನ್ಯಾ ಮನೆಯಲ್ಲಿ‌ ಮಹಜರು ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 7:08 IST
Last Updated 1 ಅಕ್ಟೋಬರ್ 2021, 7:08 IST
ನಟಿ ಸೌಜನ್ಯಾ
ನಟಿ ಸೌಜನ್ಯಾ    

ರಾಮನಗರ: ನಟಿ ಸೌಜನ್ಯಾ ಅಲಿಯಾಸ್ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರು‌ ದಕ್ಷಿಣ ತಾಲ್ಲೂಕಿನ ದೊಡ್ಡಬೆಲೆ ಗ್ರಾಮದ ಸನ್ ವರ್ತ್ ಅಪಾರ್ಟ್‌ಮೆಂಟ್‌ನಲ್ಲಿರುವ ಮನೆಯಲ್ಲಿ ಶುಕ್ರವಾರ ಕುಂಬಳಗೋಡು ಠಾಣೆ ಪೊಲೀಸರು ಮಹಜರು ಕಾರ್ಯ ನಡೆಸಿದರು.

ನಟಿಯ ಆಪ್ತ ಸಹಾಯಕ ಮಹೇಶ್ ಅವರನ್ನು ತಮ್ಮೊಂದಿಗೆ ಕರೆತಂದ ಪೊಲೀಸರು, ಅವರಿಂದ ವಿವರಣೆ ಪಡೆದರು‌. ನಟಿಯ ತಂದೆ ಪ್ರಭು ಮಾದಪ್ಪ ಸಹ ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.