ADVERTISEMENT

ಸ್ಟಾರ್ ಸುವರ್ಣದಲ್ಲಿ ‘ಅಮ್ಮ... ಹ್ಯಾಪಿ ಮದರ್ಸ್ ಡೇ’

​ಪ್ರಜಾವಾಣಿ ವಾರ್ತೆ
Published 6 ಮೇ 2022, 11:01 IST
Last Updated 6 ಮೇ 2022, 11:01 IST
‘ಅಮ್ಮ .... ಹ್ಯಾಪಿ ಮದರ್ಸ್ ಡೇ’ ಕಾರ್ಯಕ್ರಮದ ಪೋಸ್ಟರ್‌
‘ಅಮ್ಮ .... ಹ್ಯಾಪಿ ಮದರ್ಸ್ ಡೇ’ ಕಾರ್ಯಕ್ರಮದ ಪೋಸ್ಟರ್‌   

ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಾಯಂದಿರ ದಿನ ಸಂಭ್ರಮ. ಸುವರ್ಣ ಸೂಪರ್ ಸ್ಟಾರ್‌ನಲ್ಲಿ ತಾಯಂದಿರ ಜೊತೆಗೆ ಮಕ್ಕಳೂಭಾಗವಹಿಸಿ, ಕಾರ್ಯಕ್ರಮದ ರಂಗು ಹೆಚ್ಚಿಸಿರುವ ಬೆನ್ನಲ್ಲೆ, ‘ಅಮ್ಮ ... ಹ್ಯಾಪಿ ಮದರ್ಸ್ ಡೇ’ ಕಾರ್ಯಕ್ರಮ ಮೂಡಿಬರುತ್ತಿದೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಸಿನಿಮಾ ನಟರು ಮತ್ತು ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿ ಕಲಾವಿದರು ಪಾಲ್ಗೊಂಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಕಲಾವಿದರು ಹಿಂದೆಂದೂ ಕಾಣದ ರೀತಿಯಲ್ಲಿ ಈ ಕಾರ್ಯಕ್ರಮದಲ್ಲಿ ಕಾಣಸಿಗಲಿದ್ದಾರೆ.

ಜೇನುಗೂಡು, ಬೆಟ್ಟದ ಹೂವು, ಮನಸೆಲ್ಲಾ ನೀನೆ ಮತ್ತು ರಾಜಿ ಧಾರಾವಾಹಿಗಳ ನಟ- ನಟಿಯರು ತಮ್ಮ ತಾಯಂದಿರ ಜೊತೆಯಲ್ಲಿ ‘ಅಮ್ಮ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇವರೊಂದಿಗೆ ನಟಿ ಅನು ಪ್ರಭಾಕರ್ ಮತ್ತು ಅವರ ತಾಯಿ ಗಾಯತ್ರಿ ಪ್ರಭಾಕರ್ ತಮ್ಮ ಬಾಂಧವ್ಯದ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ದಿಯಾ ಚಿತ್ರದ ನಟಿ ಖುಷಿ, ತಮ್ಮ ಮಗಳ ಜೊತೆಯಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ನಟ ವಸಿಷ್ಠ ಸಿಂಹ ತಮ್ಮ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ.

ಈ ಎಲ್ಲಾ ಕಲಾವಿದರೊಂದಿಗೆ ನಟ ಶರಣ್, ನಟಿ ಭವ್ಯ ಮತ್ತು ನಿರ್ದೇಶಕ ಸುನಿ ಸಹ ‘ಅಮ್ಮ ... ಹ್ಯಾಪಿ ಮದರ್ಸ್ ಡೇ’ ಕಾರ್ಯಕ್ರಮದ ಭಾಗವಾಗಿದ್ದಾರೆ. ಮೇ 8ರಂದು ಭಾನುವಾರ, ಸಂಜೆ 6 ಗಂಟೆಗೆ ಅಮ್ಮಂದಿರ ದಿನದ ಈ ವಿಶೇಷ ಕಾರ್ಯಕ್ರಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.