ADVERTISEMENT

‘ಸುವರ್ಣ ಗೃಹಮಂತ್ರಿ’ 500ರ ಸಂಭ್ರಮ: ಕುಟುಂಬದ ಜೊತೆ ರವಿಶಂಕರ್ ಗೌಡ ಸಂದರ್ಶನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2025, 10:59 IST
Last Updated 24 ಅಕ್ಟೋಬರ್ 2025, 10:59 IST
<div class="paragraphs"><p>ನಟ ರವಿಶಂಕರ್ ಗೌಡ ದಂಪತಿ</p></div>

ನಟ ರವಿಶಂಕರ್ ಗೌಡ ದಂಪತಿ

   

ಕರ್ನಾಟಕದ ಗೃಹಿಣಿಯರ ಮನಗೆದ್ದು ಮನೆಮಾತಾಗಿರುವ ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮ ನಟ ರವಿಶಂಕರ್ ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿದೆ. ಈ ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ಪ್ರತಿದಿನ ಪ್ರಸಾರವಾಗುವ ಸಾಮಾನ್ಯ ಜನರ (ಕಾಮನ್ ಮ್ಯಾನ್) ರಿಯಾಲಿಟಿ ಶೋ ಆಗಿದ್ದು, ಸದ್ಯ ತನ್ನ 500ನೇ ಸಂಚಿಕೆಯನ್ನು ಪೂರೈಸಿದೆ.

ನಟ ರವಿಶಂಕರ್ ಗೌಡ ದಂಪತಿ

ADVERTISEMENT

ಈ ಕುರಿತು ಪ್ರಕಟಣೆ ಹೊರಡಿಸಿರುವ ಸ್ಟಾರ್ ಸುವರ್ಣ ವಾಹಿನಿ, ‘ತನಗಾಗಿ ಏನನ್ನೂ ಬಯಸದೇ ತನ್ನವರ ಖುಷಿಗಾಗಿ ನಿರಂತರವಾಗಿ ಹಂಬಲಿಸುವ ಗೃಹಿಣಿಯರನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕದ ಮನೆ ಮನೆಗೆ ಹೋಗಿ ದಿನಕ್ಕೊಂದು ಕುಟುಂಬವನ್ನು ಭೇಟಿ ಮಾಡಿ, ಗಂಡ ಹೆಂಡತಿ ಅವರನ್ನು ಆಟ ಆಡಿಸಿ, ಮಾತನಾಡಿಸಿ, ಆಕೆಯ ಕುಟುಂಬದವರ ಪರಿಚಯ ಮಾಡಿಕೊಂಡು, ಅವರಿಗಾಗಿ ಆ ದಿನವನ್ನು ಮೀಸಲಿಟ್ಟು ರಾಣಿ ಸೀಟ್‌ನಲ್ಲಿ ಅವರನ್ನ ಕೂರಿಸಿ ಗೌರವಿಸುತ್ತಾ ಥ್ಯಾಂಕ್ಸ್ ಹೇಳುವ ಕಾರ್ಯಕ್ರಮವೇ ಈ ಸುವರ್ಣ ಗೃಹಮಂತ್ರಿ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ನಟ ರವಿ ಶಂಕರ್ ಗೌಡ ತವರು ಮನೆಯ ಉಡುಗೊರೆಯಾಗಿ ಬಾಗಿನ ನೀಡಿ ಗೌರವಿಸಿ ಇಡೀ ಕುಟುಂಬವನ್ನು ಒಗ್ಗೂಡಿಸಿ ಸಂಭ್ರಮಿಸುವುದೇ ಸುವರ್ಣ ಗೃಹಮಂತ್ರಿ ಕಾರ್ಯಕ್ರಮದ ಸಾರ್ಥಕತೆ’ ಎಂದು ಹೇಳಿಕೊಂಡಿದೆ.

ಇದೀಗ ‘ಸುವರ್ಣ ಗೃಹಮಂತ್ರಿ’ಯು ಯಶಸ್ವಿಯಾಗಿ 500ನೇ ಸಂಚಿಕೆಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಟ ರವಿಶಂಕರ್ ಗೌಡ ಅವರು ತಮ್ಮದೇ ಮನೆಗೆ ಹೋಗಿ ತನ್ನ ಕುಟುಂಬದ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ವಿಶೇಷ ಸಂಚಿಕೆ ಇದೇ ಅಕ್ಟೋಬರ್ 27ರಂದು ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.