ADVERTISEMENT

‘ಜೀ ಕನ್ನಡ’ದಲ್ಲಿ ಗೀತಾಪಂಡಿತ ಸಲಾಹುದ್ದೀನ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 19:45 IST
Last Updated 10 ಜನವರಿ 2019, 19:45 IST
ಸೈಯದ್ ಸಲ್ಲಾವುದ್ದಿನ್ ಪಾಷಾ
ಸೈಯದ್ ಸಲ್ಲಾವುದ್ದಿನ್ ಪಾಷಾ   

‘ಜೀವನವನ್ನು ಇತರರಿಗಾಗಿ ಮುಡಿಪಾಗಿಟ್ಟು, ಸಾಮಾನ್ಯರಂತೆ ಬದುಕುತ್ತಿರುವ ಅಸಾಮಾನ್ಯ ಸಾಧಕರನ್ನು ರಿಯಲ್‍ ಸ್ಟಾರ್ ಎಂದು ಗೌರವಿಸುತ್ತಿರುವ’ ಡ್ರಾಮಾ ಜೂನಿಯರ್ಸ್‌ ಕಾರ್ಯಕ್ರಮದಲ್ಲಿ ಈ ವಾರ ಸೈಯದ್ ಸಲಾಹುದ್ದೀನ್ ಪಾಷಾ ಅವರ ಜೀವನ ಕಥೆ ಮೂಡಿಬರಲಿದೆ.

ಸಲಾಹುದ್ದೀನ್ ಅವರ ಮುತ್ತಾತ ಮೈಸೂರು ಮಹರಾಜರ ಆಸ್ಥಾನದಲ್ಲಿ ನಾಟಿ ವೈದ್ಯರಾಗಿದ್ದರು. ಅವರು ಅಂಗವಿಕಲ ಮಕ್ಕಳಿಗೆ ನಾಟಿ ಔಷಧ ನೀಡುತ್ತಿದ್ದರು. ಸಲಾಹುದ್ದೀನ್ ಅವರಿಗೆ ಅಂಗವಿಕಲ ಮಕ್ಕಳ ಬಗ್ಗೆ ವಿಶೇಷ ಪ್ರೀತಿ.

‘ಭಗವದ್ಗೀತೆ ಹಾಗೂ ಬಸವಣ್ಣನ ವಚನಗಳನ್ನು ಅಧ್ಯಯನ ಮಾಡಿರುವ ಸಲಾಹುದ್ದೀನ್, ತಾವು ಕಲಿತಿದ್ದನ್ನು ಅಂಗವಿಕಲ ಮಕ್ಕಳಿಗೂ ಕಲಿಸಿ ಅವರಿಂದ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು, ಭರತನಾಟ್ಯ, ಕಥಕ್‍ ನೃತ್ಯ ರೂಪಕಗಳನ್ನು ವಿನೂತನ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಬ್ರಿಟನ್, ಕೆನಡಾದ ಸಂಸತ್ತುಗಳು ಅವರನ್ನು ಗೌರವಿಸಿವೆ’ ಎಂದು ‘ಜೀ ಕನ್ನಡ’ ಹೇಳಿದೆ.

ADVERTISEMENT

ಇಷ್ಟೇ ಅಲ್ಲದೆ, ಅವರು ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ತಮ್ಮ ‘ಎಬಿಲಿಟಿ ಅನ್‍ಲಿಮಿಟೆಡ್’ ಸಂಸ್ಥೆಯ ಮಕ್ಕಳ ಮೂಲಕ ಅದ್ಭುತ ಪ್ರದರ್ಶನಗಳನ್ನು ನೀಡಿದ್ದಾರೆ.

ಈ ವಾರದ ಡ್ರಾಮಾ ಜೂನಿಯರ್ಸ್‌ ಕಾರ್ಯಕ್ರಮದಲ್ಲಿ ಸಲಾಹುದ್ದೀನ್ ಅವರ ಜೀವನ ಕಥೆ ನಾಟಕದ ರೂಪದಲ್ಲಿ ಮೂಡಿಬರಲಿದೆ. ಇದು ಶನಿವಾರ ಮತ್ತು ಭಾನುವಾರ (ಇದೇ 12, 13) ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.