ಲಾಕ್‌ಡೌನ್ ಅವಧಿಯಲ್ಲಿ ಮನರಂಜನಾ ವಾಹಿನಿಗಳಿಗಂತೂ ಸಾಕಷ್ಟು ಬೇಡಿಕೆ ಬಂದಿದೆ. ಸುದ್ದಿವಾಹಿನಿಗಳಲ್ಲಂತೂ ಕೋವಿಡ್ ಸಂಬಂಧಿತ ಸಾವು, ನೋವಿನ ಸುದ್ದಿ ನೋಡಿ ರೋಸಿಹೋದ ಮನಸ್ಸುಗಳಿಗೆ ಸಾಂತ್ವನ ನೀಡಲು ಈ ವಾಹಿನಿಗಳು ಮುಂದಾಗಿವೆ.
ಲಾಕ್‌ಡೌನ್ ಅವಧಿಯಲ್ಲಿ ಮನರಂಜನಾ ವಾಹಿನಿಗಳಿಗಂತೂ ಸಾಕಷ್ಟು ಬೇಡಿಕೆ ಬಂದಿದೆ. ಸುದ್ದಿವಾಹಿನಿಗಳಲ್ಲಂತೂ ಕೋವಿಡ್ ಸಂಬಂಧಿತ ಸಾವು, ನೋವಿನ ಸುದ್ದಿ ನೋಡಿ ರೋಸಿಹೋದ ಮನಸ್ಸುಗಳಿಗೆ ಸಾಂತ್ವನ ನೀಡಲು ಈ ವಾಹಿನಿಗಳು ಮುಂದಾಗಿವೆ.
ಶೂಟಿಂಗ್ ಮೇಲೆ ಪರಿಣಾಮ ಬೀರಿದ್ದರೂ ಹಳೆಯ ಸಂಗ್ರಹಗಳ ದೃಶ್ಯಾವಳಿಗಳಿಗೊಂದಿಷ್ಟು ಮಸಾಲೆ ಬೆರೆಸಿ ಹೊಸತನವನ್ನು ಮುಂದಿಡುವ ಪ್ರಯತ್ನವೂ ಕೆಲವು ವಾಹಿನಿಗಳದ್ದು.
ಕಲರ್ಸ್ ಕನ್ನಡ ವಾಹಿನಿಯ ‘ಬಿಗ್‌ಬಾಸ್’ ಆರಂಭದಿಂದಲೂ ವೀಕ್ಷಕರ ಪ್ರಮಾಣದಲ್ಲಿ ಸ್ಥಿರತೆ ಹಾಗೂ ಕುತೂಹಲವನ್ನು ಉಳಿಸಿಕೊಂಡೇ ಮುಂದುವರಿಯುತ್ತಿದೆ. ಉದಯ ಟಿವಿ ಧಾರಾವಾಹಿಗಳ ಜನಪ್ರಿಯತೆಯೂ ಅದೇ ಮಟ್ಟದಲ್ಲಿ ಇದೆ. ಝೀ ವಾಹಿನಿ ಟಿವಿ ಪ್ರಸಾರ ಮಾತ್ರವಲ್ಲದೆ ತನ್ನದೇ ಆದ ಒಟಿಟಿ ವೇದಿಕೆ ಮೂಲಕವೂ ವೀಕ್ಷಕರನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಏನಿದ್ದರೂ ಮನೋರಂಜನೆ ಅಂಗೈಗೆ ಬಂದುಬಿಟ್ಟಿದೆ. ಕಲರ್ಸ್‌ನ ಹಾಸ್ಯ ರಿಯಾಲಿಟಿ ಷೋಗಳ ಜನಪ್ರಿಯತೆಯೂ ಏರುತ್ತಲೇ ಇದೆ.
ಅನ್‌ಲಿಮಿಟೆಡ್ ಮನರಂಜನೆ
ಮನರಂಜನೆಯ ಮಹಾಪೂರ ಹರಿಸಲು ಸಿದ್ಧವಾಗಿದೆ ಝೀ ಕನ್ನಡ ವಾಹಿನಿ. ಆ ಪರಿಕಲ್ಪನೆಯ ಹೆಸರು ‘ಅನ್‌ಲಿಮಿಟೆಡ್ ಮನರಂಜನೆ’. ಕೋವಿಡ್ ಸಂಬಂಧಿಸಿದ ನಕಾರಾತ್ಮಕ ಸುದ್ದಿ, ವಿಚಾರಗಳೇ ತುಂಬಿರುವ ಈ ಹೊತ್ತಿನಲ್ಲಿ ಸಕಾರಾತ್ಮಕ ವಿಚಾರ ಬಿತ್ತಿ ಮನೋಲ್ಲಾಸ ತುಂಬುವುದು ನಮ್ಮ ಉದ್ದೇಶ ಎಂದು ವಾಹಿನಿ ಹೇಳಿದೆ. ಸೋಮವಾರದಿಂದ - ಶನಿವಾರದವರೆಗೆ ಧಾರಾವಾಹಿಗಳು, ವಿಶೇಷ ಕಾರ್ಯಕ್ರಮಗಳು ವೀಕ್ಷಕರನ್ನು ರಂಜಿಸಲಿವೆ ಎಂದು ವಾಹಿನಿ ಹೇಳಿದೆ.
ಬರುತ್ತಿದ್ದಾನೆ ‘ಹೀರೋ’
ರಿಷಬ್ ಶೆಟ್ಟಿ ನಿರ್ಮಿಸಿ ನಟಿಸಿರುವ, ಭರತ್ ರಾಜ್ ನಿರ್ದೇಶನದ ಚಿತ್ರ ‘ಹೀರೋ’ ಮೇ 9ರ ಭಾನುವಾರ ರಾತ್ರಿ 7ಕ್ಕೆ ಝೀ ಕನ್ನಡ ಹಾಗೂ ಝೀ ಕನ್ನಡ ಎಚ್‍ಡಿ ವಾಹಿನಿಯಲ್ಲಿ ಪ್ರಸಾರ ಆಗಲಿದೆ.
‘ನಂಬರ್ 1 ಸೊಸೆ’
ಹೊಸ ಧಾರಾವಾಹಿ ‘ನಂಬರ್ 1 ಸೊಸೆ’ ಮೇ 10ರಿಂದಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ. ‘ಯಜಮಾನಿ ವಾಗ್ದೇವಿಯ ಮನೆಗೆ ಅನಕ್ಷರಸ್ಥ ಹುಡುಗಿ ಸೊಸೆಯಾಗಿ ಬರುತ್ತಾಳೆ. ಆ ಬಳಿಕ ನಡೆಯುವ ಘಟನಾವಳಿಗಳೇ ಧಾರಾವಾಹಿಯ ಕಥಾಹಂದರ’ ಎಂದು ವಾಹಿನಿ ತಿಳಿಸಿದೆ.⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.