ಬೆಂಗಳೂರು: ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ‘ಝೀ ಪವರ್’ವಾಹಿನಿಯು ವಿಭಿನ್ನ ಧಾರಾವಾಹಿಗಳು, ವಿಶೇಷ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಗಮನಸೆಳೆಯಲು ಸಿದ್ದವಾಗಿದೆ.
ಆಗಸ್ಟ್ 23 ‘ಝೀ ಪವರ್’ ಪ್ರಾರಂಭವಾಗಲಿದೆ. ಇದು ಕೇವಲ ವಾಹಿನಿಯಲ್ಲ ಕಲ್ಪನೆ, ನಿಜಜೀವನ, ಮತ್ತು ಕರುನಾಡಿನ ಸಂಸ್ಕೃತಿಯನ್ನು ಒಳಗೊಂಡ ವಾಹಿನಿಯಾಗಿರಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
‘ಝೀ ಪವರ್’ ವಾಹಿನಿಯಲ್ಲಿ ಪ್ರಬಲ ಕಥಾನಾಯಕಿಯರು ಮತ್ತು ಕಥಾನಾಯಕರಿರುವ ಧಾರಾವಾಹಿಗಳು, ಸಮಾಜವನ್ನು ತಲುಪುವ ವಾಸ್ತವ ಕಾರ್ಯಕ್ರಮಗಳು, ಮಹಿಳಾ ಪ್ರಧಾನ ಧಾರಾವಾಹಿಗಳು, ಬ್ಲಾಕ್‌ಬಸ್ಟರ್ ಚಲನ ಚಿತ್ರಗಳು, ಹಬ್ಬದ ಮತ್ತು ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ವಾಹಿನಿಯು ಪ್ರತಿ ಪೀಳಿಗೆಯನ್ನೂ ಆಕರ್ಷಿಸುತ್ತದೆ. ಮಹಿಳಾ ಪ್ರಧಾನ ಕಥೆಗಳು ಇದ್ದರೂ ಯುವಕರು ಮತ್ತು ಪುರುಷರ ಭಾವನೆಗಳಿಗೂ ಒತ್ತುಕೊಟ್ಟಿರುವುದರಿಂದ ಎಲ್ಲಾ ಪೀಳಿಗೆಯವರನ್ನೂ ತನ್ನತ್ತ ಸೆಳೆಯುವಲ್ಲಿ ವಾಹಿನಿಯು ಯಶಸ್ವಿ ಆಗಲಿದೆ ಎಂದು ತಿಳಿಸಿದೆ.
ಪ್ರತಿಯೊಂದು ಧಾರಾವಾಹಿಯೂ ತನ್ನ ಸಂಭಾಷಣೆ, ವಿಭಿನ್ನ ಕಥಾಹಂದರದಿಂದ ಮೊದಲ ದಿನದಿಂದಲೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ವಾಹಿನಿಯಲ್ಲಿನ ಪ್ರಸಾರ ಆಗುವ ಧಾರಾವಾಹಿಗಳು ತಮ್ಮ ವಿಭಿನ್ನ ಮತ್ತು ಅಮೋಘವಾದ ಕಥೆಗಳ ಮೂಲಕ ಯುವಜನತೆಯನ್ನೂ ತನ್ನತ್ತ ಸೆಳೆಯಲಿದೆ. ಅಷ್ಟೇ ಅಲ್ಲದೆ ನಮ್ಮ ಕಥೆಗಳು ಸಂಕ್ಷಿಪ್ತ ಮತ್ತು ವಾಸ್ತವ ಆಲೋಚನೆಯನ್ನು ಪ್ರೇರೇಪಿಸುವಂತೆ ಇರಲಿದೆ ಎಂದು ‘ಝೀ ಪವರ್’ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರ್ ಅವರು ಹೇಳಿದ್ದಾರೆ.
‘ಝೀ ಪವರ್’ ವಾಹಿನಿಯಲ್ಲಿ ರಾಜಕುಮಾರಿ, ಶುಭಸ್ಯ ಶೀಘ್ರಂ, ಜೋಡಿ ಹಕ್ಕಿ ಮತ್ತು ಗೌರಿ ಹೆಸರಿನ ಧಾರಾವಾಹಿಗಳು ಪ್ರಸಾರವಾಗಲಿವೆ. ಹಳ್ಳಿ ಪವರ್ ಹೆಸರಿನ ರಿಯಾಲಿಟಿ ಶೋ, ಭಕ್ತಿ ಕಾರ್ಯಕ್ರಮ, ಭವಿಷ್ಯ ದರ್ಶನ ಸೇರಿದಂತೆ ಅತ್ಯಾಕರ್ಷಕ ಕಾರ್ಯಕ್ರಮಗಳು ಇರಲಿವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.