ADVERTISEMENT

1970ರಿಂದ ಈಚೆಗೆ ವಿಶ್ವದಾದ್ಯಂತ ವನ್ಯಜೀವಿಗಳ ಸಂಖ್ಯೆ ಶೇ 69ರಷ್ಟು ಕುಸಿತ: WWF

ಪಿಟಿಐ
Published 13 ಅಕ್ಟೋಬರ್ 2022, 4:40 IST
Last Updated 13 ಅಕ್ಟೋಬರ್ 2022, 4:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 1970ರಿಂದ 2018ರ ಅವಧಿಯಲ್ಲಿವನ್ಯಜೀವಿಗಳ ಸಂಖ್ಯೆಯು ಶೇ 69ರಷ್ಟು ಕುಸಿದಿದೆ ಎಂದು ವರ್ಲ್ಡ್‌ ವೈಲ್ಡ್‌ಲೈಫ್‌ ಫಂಡ್‌ನ (ಡಬ್ಲ್ಯೂಡಬ್ಲ್ಯೂಎಫ್‌) ಲೀವಿಂಗ್‌ ಪ್ಲಾನೆಟ್‌ ರಿಪೋರ್ಟ್‌ (ಎಲ್‌ಪಿಆರ್‌) 2022 ವರದಿ ಮಾಡಿದೆ.

5,230 ಜಾತಿಗಳಿಗೆ ಸೇರಿದ ಸುಮಾರು 32,000 ವನ್ಯಜೀವಿಗಳ ಕುರಿತ ವರದಿಯಲ್ಲಿ,ಉಷ್ಣವಲಯದ ಪ್ರದೇಶಗಳಲ್ಲಿನವನ್ಯಜೀವಿಗಳ ಸಂಖ್ಯೆಯು ದಿಗ್ಭ್ರಮೆಗೊಳಿಸುವ ದರದಲ್ಲಿ ಕುಸಿದಿರುವುದನ್ನು ಉಲ್ಲೇಖಿಸಲಾಗಿದೆ.

ವರದಿ ಪ್ರಕಾರ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ ಹೆಚ್ಚಿನ ಕುಸಿತ ಕಂಡು ಬಂದಿದೆ. ಇಲ್ಲಿ 1970–2018 ಅವಧಿಯಲ್ಲಿ ಸರಾಸರಿ ಶೇ 94 ರಷ್ಟು ಕುಸಿತವಾಗಿದೆ.

ADVERTISEMENT

ಆಫ್ರಿಕಾದಲ್ಲಿ ವನ್ಯಜೀವಿಗಳ ಸಂಖ್ಯೆಯು ಶೇ 66 ರಷ್ಟು ಹಾಗೂ ಏಷಿಯಾ ಪೆಸಿಫಿಕ್‌ ಭಾಗದಲ್ಲಿ ಶೇ 55 ರಷ್ಟು ಕುಸಿದಿದೆ. ಇತರ ವರ್ಗಕ್ಕೆ ಸೇರಿದ ಜೀವಿಗಳಿಗೆ ಹೋಲಿಸಿದರೆ ಸಿಹಿನೀರಿನಲ್ಲಿ ಜೀವಿಸುವ ಜಲಚರಗಳ ಪ್ರಮಾಣ ಶೇ 83ರಷ್ಟು ಕುಸಿತ ಕಂಡುಬಂದಿದೆ ಎನ್ನಲಾಗಿದೆ.

ಆವಾಸಸ್ಥಾನದ ಅವನತಿ,ಆಕ್ರಮಣ,ಮಾಲಿನ್ಯ,ಹವಾಮಾನ ಬದಲಾವಣೆ,ರೋಗಗಳು ಮತ್ತು ವಲಸೆ ಮಾರ್ಗಗಳಿಗೆ ಅಡ್ಡಿ ಇವುವನ್ಯಜೀವಿಗಳ ಜನಸಂಖ್ಯೆಯ ಕುಸಿತಕ್ಕೆ ಪ್ರಮುಖ ಕಾರಣಗಳು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.