ADVERTISEMENT

ಸೆಕೆಂಡಿಗೆ 20 ಬಾರಿ ಮರಕುಟ್ಟುವ ‘ಮರಕುಟುಕ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 5:34 IST
Last Updated 15 ನವೆಂಬರ್ 2018, 5:34 IST
ಮರಕುಟುಕ
ಮರಕುಟುಕ   

ಆಕರ್ಷಕ ಬಣ್ಣ ಮತ್ತು ಆಕಾರಗಳಿಂದ ಕೆಲವು ಪಕ್ಷಿಗಳು ಗಮನ ಸೆಳೆದರೆ,ಬ್ಯಾಕ್ಡೇಡ್ ವುಡ್‌ಪೆಕರ್‌ (ಮರಕುಟುಕ) ಮರಕುಟ್ಟುವ ತನ್ನ ವಿಭಿನ್ನ ಜೀವನ ಕ್ರಮದಿಂದ ಗಮನ ಸೆಳೆಯುತ್ತದೆ.ಇವುಗಳಲ್ಲಿ ಇಲ್ಲಿಯವರೆಗೆ 180ಕ್ಕೂ ಪ್ರಭೇದಗಳನ್ನು ಗುರುತಿಸಲಾಗಿದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?
ಇದರ ದೇಹದಲ್ಲಿ ಕಪ್ಪು ಬಣ್ಣವೇ ಆಕರ್ಷಕ ಬಣ್ಣವಾಗಿರುತ್ತದೆ. ದೇಹದ ಬಣ್ಣವು ಕಪ್ಪು, ಬಿಳಿ, ಕೆಂಪು, ತಿಳಿ ಹಳದಿ ಮತ್ತು ಹಸಿರು ಬಣ್ಣಗಳಿಂದ ಕೂಡಿರುತ್ತದೆ. ದೇಹದ ಬಹುತೇಕ ಭಾಗ ಕಪ್ಪು ಬಣ್ಣದಿಂದ ಆವರಿಸಿದ್ದು, ತಲೆಯ ಮೇಲ್ಭಾಗದಲ್ಲಿ ಹಳದಿ ಬಣ್ಣದ ಪುಕ್ಕಗಳಿರುತ್ತವೆ. ಕತ್ತು ಮತ್ತು ಬೆನ್ನಿನ ಭಾಗದಲ್ಲಿ ಬಿಳಿ ಬಣ್ಣಗಳಿಂದ ಕೂಡಿರುತ್ತದೆ. ಮುಖದ ಮುಂಭಾಗವು ತಿಳಿ ಕೆಂದು ಬಣ್ಣದಿಂದ ಕೂಡಿರುತ್ತದೆ. ಕಣ್ಣಿನಗುಡ್ಡೆಯ ಒಳಭಾಗದ ಸುತ್ತಲಿನ ಭಾಗವು ತಿಳಿ ಹಸಿರು ಬಣ್ಣದಿಂದ ಕೂಡಿರುತ್ತದೆ. ಇದರ ಉಗುರುಗಳು ಚೂಪಾಗಿದ್ದು, ಮರದ ಕೊಂಬೆಗಳನ್ನು ಹಿಡಿದುಕೊಳ್ಳಲು ಸಹಾಯ ಮಾಡುತ್ತವೆ.

ಎಲ್ಲೆಲ್ಲಿವೆ?
ಆಸ್ಟ್ರೇಲಿಯಾ, ಮಡಗಾಸ್ಕರ್‌, ನ್ಯೂಜಿಲೆಂಡ್‌ ಮತ್ತು ಅಟ್ಲಾಂಟಿಕ್‌ ಪ್ರದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ADVERTISEMENT

ಆಹಾರ
ಇದು ಸಣ್ಣ ಕೀಟ, ಹಣ್ಣು ಮತ್ತು ಮರದ ಬೀಜಗಳನ್ನು ತಿಂದು ಜೀವಿಸುತ್ತದೆ.

ಜೀವನ ಕ್ರಮ ಮತ್ತು ವರ್ತನೆ
ಜೀವ ವೈವಿಧ್ಯ ಕಾಡುಗಳಲ್ಲಿ ಇದು ಹೆಚ್ಚಾಗಿ ವಾಸಿಸಲು ಇಷ್ಟ ಪಡುತ್ತದೆ. ಹಳೆಯ ಮರದಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತವೆ. ಮೊಟ್ಟೆಗಳನ್ನು ಇಡಲು ನಿರ್ಮಿಸಿದ ಗೂಡುಗಳನ್ನೇ ಚಳಿಗಾಲದಲ್ಲಿ ಬೆಚ್ಚಗಿರಲು ಬಳಸಿಕೊಳ್ಳುತ್ತವೆ. ಇವುಗಳ ಗಾತ್ರ ಮತ್ತು ಆಕಾರ ಪ್ರಭೇದಗಳ ಆಧಾರದ ಮೇಲೆ ಬದಲಾಗುತ್ತಿರುತ್ತವೆ. ಇವು ಉಳಿದ ಪಕ್ಷಿಗಳಿಗಿಂತ ದೊಡ್ಡ ಧ್ವನಿಯಲ್ಲಿ ಶಬ್ದ ಮಾಡತ್ತವೆ. ಅಂದಾಜು ಸೆಕೆಂಡಿಗೆ 20 ಬಾರಿ ಮರವನ್ನು ಕುಟ್ಟುತ್ತದೆ. ಈ ಪಕ್ಷಿಗಳ ಮಿದುಳಿನಲ್ಲಿ ತಾಪಮಾನವನ್ನು ಕಾಯ್ದುಕೊಳ್ಳುವ ವಿಶೇಷ ಗ್ರಂಥಿ ಇದೆ.

ಸಂತಾನೋತ್ಪತ್ತಿ
ಈ ಪಕ್ಷಿಗಳು ಗೂಡುಗಳನ್ನು ಕಟ್ಟುವಲ್ಲಿ ವಿಶೇಷ ಜಾಣ್ಮೆಯನ್ನು ಪ್ರದರ್ಶಿಸುತ್ತವೆ. ಒಂದು ಬಾರಿಗೆ ಇದು ಅಂದಾಜು 4 ರಿಂದ 8 ಮೊಟ್ಟೆಗಳನ್ನು ಇಡುತ್ತದೆ. ಈ ಮೊಟ್ಟೆಗಳು 10 ರಿಂದ 14 ದಿನಗಳಲ್ಲಿ ಪ್ರೌಡಾವಸ್ಥೆಗೆ ತಲುಪುತ್ತವೆ. ಮೊಟ್ಟೆಗಳನ್ನು ರಕ್ಷಿಸುವಲ್ಲಿ ಪೋಷಕ ಪಕ್ಷಿಗಳು ವಿಶೇಷವಾದ ಕಾಳಜಿಯನ್ನು ವಹಿಸುತ್ತವೆ. ಅಂದಾಜು ಎರಡು ತಿಂಗಳಿನಲ್ಲಿ ಈ ಪಕ್ಷಿಗಳು ಗೂಡನ್ನು ಬಿಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.