ADVERTISEMENT

ಚಾಮರಾಜೇಂದ್ರ ಮೃಗಾಲಯ: 27 ವರ್ಷ ವಯಸ್ಸಿನ ಗಂಡು ಚಿಂಪಾಂಜಿ ‘ಗುರು’ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 17:33 IST
Last Updated 25 ಡಿಸೆಂಬರ್ 2018, 17:33 IST
ಚಿಂಪಾಂಜಿ ‘ಗುರು’
ಚಿಂಪಾಂಜಿ ‘ಗುರು’   

ಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ 27 ವರ್ಷ ವಯಸ್ಸಿನ ಗಂಡು ಚಿಂಪಾಂಜಿ ‘ಗುರು’ ಅಸುನೀಗಿದೆ.

ಪ್ರಾಣಿಗಳ ವಿನಿಮಯ ಒಪ್ಪಂದದಡಿ ಚೆನ್ನೈ ಮೃಗಾಲಯದಿಂದ 2003ರಲ್ಲಿ ಚಿಂಪಾಂಜಿಯನ್ನು ಇಲ್ಲಿಗೆ ತರಲಾಗಿತ್ತು. ಇದು ಮೃಗಾಲಯದ ಆಕರ್ಷಣೆ ಆಗಿತ್ತು. ಸದ್ಯ 4 ಚಿಂಪಾಂಜಿಗಳು ಇವೆ.

‘ಭಾನುವಾರದಿಂದ ನಿಶ್ಯಕ್ತಿಯಿಂದ ಬಳಲುತಿತ್ತು. ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ರಾತ್ರಿ ಮೃತಪಟ್ಟಿದೆ. ಅಂಗಾಂಗ ಮಾದರಿಯನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ತಿಳಿಸಿದರು.

ADVERTISEMENT

ಉಸಿರಾಟದ ಸಮಸ್ಯೆಯಿಂದ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಬೆಂಗಳೂರು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವೈದ್ಯರು ಹೇಳಿದರು.

ಕಾಡಿನಲ್ಲಿ ವಾಸಿಸುವ ಚಿಂಪಾಂಜಿಗಳ ಜೀವಿತಾವಧಿ ಸರಾಸರಿ ವಯಸ್ಸು 46. ಮೃಗಾಲಯದಲ್ಲಿ 58 ವರ್ಷಗಳವರೆಗೆ ಜೀವಿಸುತ್ತವೆ. ಇಲ್ಲಿ ಪೌಷ್ಟಿಕ ಆಹಾರ, ವೈದ್ಯಕೀಯ ಸೌಲಭ್ಯ ಇರುತ್ತದೆ ಎಂದು ಪ್ರಾಣಿ ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.