ADVERTISEMENT

2022 ಗಣತಿ ಪ್ರಕಾರ ಭಾರತದಲ್ಲಿನ ಹುಲಿಗಳ ಸಂಖ್ಯೆ 3,167: ಮೋದಿ   

ಪಿಟಿಐ
Published 9 ಏಪ್ರಿಲ್ 2023, 9:54 IST
Last Updated 9 ಏಪ್ರಿಲ್ 2023, 9:54 IST
   

ಮೈಸೂರು: ಕಳೆದ ನಾಲ್ಕು ವರ್ಷಗಳಿಂದ 200ರಷ್ಟು ಹುಲಿಗಳು ಹೆಚ್ಚಾಗಿವೆ. 2022ರ ಹುಲಿ ಗಣತಿಯ ಅಂಕಿಅಂಶದ ಪ್ರಕಾರ ದೇಶದಲ್ಲಿ 3,167 ಹುಲಿಗಳಿವೆ ಎಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಹುಲಿಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆ ಪ್ರಧಾನಿ ಮೋದಿ ಅವರು ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿ ಮಾತನಾಡಿದರು.

’ಅಂಕಿಅಂಶಗಳ ಪ್ರಕಾರ 2006ರಲ್ಲಿ ದೇಶದಲ್ಲಿನ ಹುಲಿಗಳ ಸಂಖ್ಯೆ 1,411 ಆಗಿತ್ತು. 2010ರ ಗಣತಿಯಲ್ಲಿ 1,706 ಆಗಿದೆ. 2014ರ ದತ್ತಾಂಶಗಳ ಪ್ರಕಾರ 2,226 ಆಗಿದ್ದರೆ 2018ರಲ್ಲಿ 2,967ಕ್ಕೆ ಏರಿಕೆಯಾಗಿದೆ. 2022ರಲ್ಲಿ ನಡೆಸಿದ್ದ ಗಣತಿಯಲ್ಲಿ 3,167 ಹುಲಿಗಳಿವೆ’ ಎಂದು ಪ್ರಧಾನಿ ವಿವರಿಸಿದರು.

ADVERTISEMENT

ಈ ಸಂದರ್ಭ, ಮುಂದಿನ 25 ವರ್ಷಗಳಲ್ಲಿ ಹುಲಿ ಸಂರಕ್ಷಣೆಯ ದೃಷ್ಟಿಕೋನವನ್ನು ಪ್ರಸ್ತುತಪಡಿಸುವ ‘ಅಮೃತ್ ಕಾಲ್ ಕಾ ಟೈಗರ್ ವಿಷನ್’ ಎಂಬ ಕಿರುಪುಸ್ತಕವನ್ನು ಮೋದಿ ಅವರು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.