ADVERTISEMENT

ಪರಿಸರ ಸಂದೇಶ ಸಾರಿದ ‘ಮರದ ದನಿ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 16:48 IST
Last Updated 20 ಸೆಪ್ಟೆಂಬರ್ 2019, 16:48 IST
ಮಕ್ಕಳು ಪ್ರಸ್ತುತಪಡಿಸಿದ ಪರಿಸರ ರಕ್ಷಣೆ ಸಂದೇಶ ಸಾರಿದ ‘ಮರದ ದನಿ’ ನಾಟಕದ ದೃಶ್ಯ
ಮಕ್ಕಳು ಪ್ರಸ್ತುತಪಡಿಸಿದ ಪರಿಸರ ರಕ್ಷಣೆ ಸಂದೇಶ ಸಾರಿದ ‘ಮರದ ದನಿ’ ನಾಟಕದ ದೃಶ್ಯ   

ಗಣೇಶೋತ್ಸವ ಅಂಗವಾಗಿ ಬಾಪೂಜಿನಗರ ಗಣೇಶೋತ್ಸವ ಸಮಿತಿ ಹಾಗೂ ಕೃಪಾ ಸನ್ನಿಧಿ ಸಮನ್ವಯ ಕಲಾಕೇಂದ್ರ ಸಹಯೋಗದಲ್ಲಿ ಬಾಪೂಜಿನಗರದ ಮಾರುತಿ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ್ದ ‘ಮರದ ದನಿ’ ನಾಟಕ ಪರಿಸರ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು.

ಕೃಪಾ ಸನ್ನಿಧಿ ಅಧ್ಯಕ್ಷೆ ಪದ್ಮಾ ಕೊಡಗು ರಚಿಸಿ, ನಿರ್ದೇಶಿಸಿದ ನಾಟಕವನ್ನು ಮಕ್ಕಳು ಮನೋಜ್ಞವಾಗಿ ಪ್ರಸ್ತುತಪಡಿಸಿದರು. ಕಾಡಿನ ರಕ್ಷಣೆ ಜತೆಗೆ ಮನುಷ್ಯನ ಭಾವನಾತ್ಮಕ ಸಂಬಂಧಗಳು ಮಹತ್ವದ್ದು ಹಾಗೂ ದೊಡ್ಡವರು ಮಾಡುವ ತಪ್ಪುಗಳು ಸಣ್ಣವರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಮಕ್ಕಳು ನಾಟಕದ ಮೂಲಕ ಪ್ರಸ್ತುತಪಡಿಸಿದರು.

ಗೌಡನ ಪಾತ್ರದಲ್ಲಿ ರಕ್ಷಿತಾ ಭಜಂತ್ರಿ, ಮಾಸ್ತರ್ ಪಾತ್ರದಲ್ಲಿ ವೇದಾ ಕಮತರ, ಅರಣ್ಯ ಅಧಿಕಾರಿ ಪಾತ್ರದಲ್ಲಿ ನಿಖಿತಾ ಸಂಗಳದ, ಅಂಕಿತಾ ಬೆಳಮಕರ, ಸಿದ್ಧನ ಪಾತ್ರದಲ್ಲಿ ಜೀವನ ಗದಗ, ಭೀಮ್ಯಾನ ಪಾತ್ರದಲ್ಲಿ ಉಮೇಶ ಕೊನೆಸಾಗರ, ತಿಪ್ಪೇಶಿ ಪಾತ್ರದಲ್ಲಿ ತನ್ವಿ ಪಟ್ನಳ್ಳಿ, ಸಾವಿತ್ರಿ ಪಾತ್ರದಲ್ಲಿ ಕರುಣ ಭಜಂತ್ರಿ, ಮಕ್ಕಳ ಪಾತ್ರದಲ್ಲಿ ಅಕ್ಷತಾ ಹಾಗೂ ವಿಶ್ರುತ ಕಮತರ ಅಭಿನಯಿಸಿ ಸೈ ಎನಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.