ADVERTISEMENT

ದೃಷ್ಟಿ–ಸಾಕ್ಷಿ

SAKSHI -HOLI STORY

ಗವಿ ಬ್ಯಾಳಿ
Published 19 ಮಾರ್ಚ್ 2019, 20:00 IST
Last Updated 19 ಮಾರ್ಚ್ 2019, 20:00 IST
ಸಾಕ್ಷಿ
ಸಾಕ್ಷಿ   

ಪುಸ್ತಕ ಮತ್ತು ಬಣ್ಣಗಳನ್ನು ಪ್ರಾಣಕ್ಕಿಂತಹೆಚ್ಚಾಗಿ ಪ್ರೀತಿಸುವ ದೆಹಲಿಯ ಸಾಕ್ಷಿ ಶ್ರೀವಾಸ್ತವ್‌ಗೆತಾನು ಪ್ರೀತಿಸುವ ವಸ್ತುಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಇನ್ನೂ 27ರ ಹರೆಯದ ಸಾಕ್ಷಿಗೆ ಇರುವುದು ಶೇ 8ರಷ್ಟು ದೃಷ್ಟಿ ಮಾತ್ರ. ಆಕೆಯ ಮುಂದಿರುವ ಯಾವ ವಸ್ತುಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ!

ಹೋಳಿಯ ದಿನ ಸ್ನೇಹಿತರ ಜತೆ ಬಣ್ಣದಲ್ಲಿ ಮಿಂದೆದ್ದು ಖುಷಿ ಪಟ್ಟಿದ್ದ ಸಾಕ್ಷಿಗೆ ವಿಪರೀತ ಕಣ್ಣುರಿ ಆರಂಭವಾಯಿತು. ಕಣ್ಣುಗಳು ಕೆಂಪಾದವು. ಕಣ್ಣಲ್ಲಿ ಬಣ್ಣ ಹೋಗಿರಬೇಕು ಎಂದು ಪೋಷಕರು ಸುಮ್ಮನಾದರು. ದಿನಗಳದಂತೆ ಸಮಸ್ಯೆ ಬಿಗಡಾಯಿಸತೊಡಗಿತು.ಇದ್ದಕ್ಕಿದ್ದಂತೆಯೇ ಎದುರಿಗಿದ್ದ ವಸ್ತುಗಳು ಮಸುಕಾಗತೊಡಗಿದವು. ಸ್ನೇಹಿತರ ಜತೆಗೂಡಿ ಹೋಟಲ್‌ಗೆ ಹೋದಾಗ ಮೆನುವಿನಲ್ಲಿದ್ದ ಅಕ್ಷರ ಕಾಣಿಸಲಿಲ್ಲ. ಪೋಷಕರು ಆಕೆಯನ್ನು ದೆಹಲಿಯ ಏಮ್ಸ್‌ ಆಸ್ಪತ್ರೆ ಕರೆದೊಯ್ದರು. ಅಲ್ಲಿ ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆ ನಡೆದವು.

ಸಾಕ್ಷಿ ಎದುರಿಸುತ್ತಿರುವ ದೃಷ್ಟಿ ಸಮಸ್ಯೆಯನ್ನು ವೈದ್ಯರು ‘ಆಟೊಇಮ್ಯೂನ್‌ ಕಂಡೀಷನ್‌’ ಎಂದು ಗುರುತಿಸಿದರು. ದೇಹದಲ್ಲಿಯ ರೋಗನಿರೋಧಕ ಶಕ್ತಿ ಕುಂಠಿತಗೊಂಡು ದೇಹದ ಅಂಗಾಂಗಳಿಗೆ ಹಾನಿಯಾಗುವ ಸ್ಥಿತಿ ಇದು. ಸಾಕ್ಷಿಯ ಕಣ್ಣಿನ ರೆಟಿನಾ ಹಾಳಾಗಿತ್ತು. ಅದಾಗಲೇ ಆಕೆಯ ಶೇ 70ರಷ್ಟು ದೃಷ್ಟಿ ನಾಶವಾಗಿತ್ತು. ವೈದ್ಯರು ಈ ವಿಷಯ ತಿಳಿಸಿದಾಗ ಸಾಕ್ಷಿ ಕುಸಿದು ಹೋದಳು. ಆಗ ಆಕಿಗಿನ್ನೂ 19 ವರ್ಷ.

ADVERTISEMENT

ವಾಸ್ತವ ಸ್ಥಿತಿ ಮನವರಿಕೆಯಾಗಲು ಹೆಚ್ಚು ಕಾಲ ಬೇಕಾಗಿಲ್ಲ.ಈ ಆಘಾತದಿಂದ ಚೇತರಿಸಿಕೊಂಡ ಸಾಕ್ಷಿ ತನಗೆ ಒದಗಿದ ಆಪತ್ತನ್ನು ಧೈರ್ಯದಿಂದ ಎದುರಿಸಿ ನಿಂತಳು. ಮುಂದಿನ ಮೂರು ವರ್ಷ ಬರವಣಿಗೆ ಮತ್ತು ಪ್ಯಾರಾಗ್ಲೈಡಿಂಗ್‌ನಲ್ಲಿತೊಡಗಿಸಿಕೊಂಡಳು.

ಅನಾಥ ಬಾಲಕರಿಗೆ ‘ಬಕೆಟ್‌ ಲಿಸ್ಟ್‌’

ಸಾಕ್ಷಿ ತನ್ನ ಇಬ್ಬರು ಸ್ನೇಹಿತರ ಜತೆಗೂಡಿ2015ರಲ್ಲಿ ‘ಬಕೆಟ್‌ ಲಿಸ್ಟ್’ ಎಂಬ ಸ್ವಯಂ ಸೇವಾಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಈ ಸಂಸ್ಥೆಯ ಮೂಲಕ ಬೀದಿ ಬದಿಯ ಅನಾಥ ಮಕ್ಕಳಿಗೆ ಹೊಸ ಬದುಕು ರೂಪಿಸಲು ಮುಂದಾದರು.

ಬೀದಿಬದಿ ಮಕ್ಕಳಿಗೆ ಚಿಂದಿ ಆಯುವ ಕೆಲಸವೊಂದನ್ನು ಬಿಟ್ಟರೆಬೇರೆ ದೊಡ್ಡಮಹತ್ವಾಕಾಂಕ್ಷೆ ಇರಲಾರದು ಎಂಬ ಸತ್ಯ ಅರಿವಾಗಲು ಬಹಳ ದಿನ ಬೇಕಾಗಲಿಲ್ಲ. ಶೇ 70ರಷ್ಟು ದೃಷ್ಟಿ ಕಳೆದುಕೊಂಡಿರುವ ತನಗೆ ಇಷ್ಟೊಂದು ಸಾಧಿಸುವ ಛಲ ಇರಬೇಕಾದರೆ, ದೈಹಿಕವಾಗಿ ಎಲ್ಲ ರೀತಿಯಲ್ಲೂ ಸಮರ್ಥರಾಗಿರುವ ಮಕ್ಕಳು ಏಕೆ ಚಿಂದಿ ಆಯುವ ಕೆಲಸ ಬಿಟ್ಟು ಬೇರೆ ಆಲೋಚನೆ ಮಾಡುತ್ತಿಲ್ಲ ಎಂಬ ಚಿಂತನೆಯೇ‘ಬಕೆಟ್‌ ಲಿಸ್ಟ್’ ಎನ್‌ಜಿಒ ಹುಟ್ಟಿಗೆ ಕಾರಣವಾಯಿತು. ಬೀದಿಮಕ್ಕಳಿಗೆ ಅವರ ಸಾಮರ್ಥ್ಯ ಮನವರಿಕೆ ಮಾಡಿಕೊಡುವ ಕೆಲಸಕ್ಕೆ ಬಕೆಟ್‌ ಲಿಸ್ಟ್‌ ಮುಂದಾಯಿತು.

ಮತ್ತೊಂದು ಆಘಾತ

ಮಸುಕಾದ ದೃಷ್ಟಿಯ ಬದುಕಿಗೆ ಇನ್ನೇನು ಹೊಂದಿಕೊಳ್ಳಬೇಕು ಎನ್ನುವಷ್ಟರಲ್ಲಿ ಸಾಕ್ಷಿ ಬಾಳಿನಲ್ಲಿ ಮತ್ತೊಂದು ಬಿರುಗಾಳಿ ಬೀಸಿತು. 2006ರಲ್ಲಿ ಆಕೆಯಶೇ 22ರಷ್ಟು ದೃಷ್ಟಿಯೂ ಹೊರಟು ಹೋಯಿತು. ಬದುಕು ಎಷ್ಟು ನರಕವಾಯಿತು ಎಂದರೆ ಟೇಬಲ್ ಮೇಲಿಟ್ಟಿದ್ದ ಆಹಾರ ಹುಡುಕುವುದೂ ಕಷ್ಟವಾಯಿತು. ಜೀವನದ ಈ ಕರಾಳ ಅಧ್ಯಾಯವನ್ನೂ ಆಕೆ ಛಲದಿಂದಲೇ ಎದುರಿಸಿದಳು. ಶೇ 8ರಷ್ಟು ದೃಷ್ಟಿ ಹೊಂದಿರುವ ಸಾಕ್ಷಿ ಎಂತಹ ಸಂಕಷ್ಟ ಎದುರರಾದರೂ ಎದುರಿಸುವ ಆತ್ಮ ವಿಶ್ವಾಸ ಬೆಳೆಸಿಕೊಂಡಿದ್ದಾಳೆ.

ಉಳಿದುಕೊಂಡಿರುವ ಅಲ್ಪಸ್ವಲ್ಪ ದೃಷ್ಟಿ ಕೂಡ ಯಾವ ಸಮಯದಲ್ಲಾದರೂ ಹೋಗಬಹುದು ಎಂಬ ವಾಸ್ತವದೊಂದಿಗೆ ಬದುಕಿನ ಹೆಜ್ಜೆ ಹಾಕುತ್ತಿದ್ದಾಳೆ. ಬಾಳಿನಲ್ಲಿ ಎದುರಾಗುವ ಎಲ್ಲ ಅಡೆತಡೆಗಳನ್ನು ಮೀರಿಜೀವನವನ್ನು ಸಂಪೂರ್ಣವಾಗಿ ಆಸ್ವಾದಿಸುವುದು ಆಕೆಯ ಜೀವನ ಸಿದ್ಧಾಂತ. ಏಕಾಂಗಿ ಜೀವನವು ಸ್ವಾವಲಂಬನೆ, ಸ್ವಾತಂತ್ರ್ಯದ ಅನುಭವ ಕಲಿಸಿದೆ. ಮೊದಲಿನಿಂದಲೂ ಸ್ವತಂತ್ರ ಮನೋಭಾವದ ಸಾಕ್ಷಿ ಬಾಳಲ್ಲಿ ಕವಿದ ಅಂಧಕಾರದಿಂದಾಗಿ ಮತ್ತೊಬ್ಬರ ಮೇಲೆ ಅವಲಂಬಿತರಾಗುವ ಅನಿವಾರ್ಯತೆ ಎದುರಾಗಿದೆ.

ಐಐಎಂನಲ್ಲಿ ನಡೆಯುತ್ತಿರುವಮೂರು ತಿಂಗಳ ನವೋದ್ಯಮತರಬೇತಿಗಾಗಿ ಬೆಂಗಳೂರಿಗೆ ಬಂದಿರುವ ಸಾಕ್ಷಿ ಒಂಟಿಯಾಗಿ ನೆಲೆಸಲು ಮುಂದಾದಾಗ ನಗರದ ಡಿಜಿಟಲ್‌ ಮೀಡಿಯಾ ಕಂಪೆನಿ ‘ಬೀಯಿಂಗ್‌ ಯೂ’ ಆಕೆಯ ನೆರವಿಗೆ ಧಾವಿಸಿತು. ಬಾಡಿಗೆ ಮನೆ ಹುಡುಕಿ ಕೊಡುವ ‘ನೆಸ್ಟ್ಅವೇ’ ಕಂಪನಿಯ ನೆರವು ಕೋರಿತು. ‘ನೆಸ್ಟ್‌ಅವೇ’ ಬಾಡಿಗೆ ಪಡೆಯದೆ ಮನೆ ಹುಡುಕಿಕೊಟ್ಟಿದೆ. ಸಂಗೀತ ಲೋಕದ ಮಾಂತ್ರಿಕ ಎ.ಆರ್‌. ರೆಹಮಾನ್‌ ಅವರ ಸಂಗೀತ ಕಚೇರಿಗಾಗಿ ಕೇರಳಕ್ಕೆ ಹೊರಡಲು ಸಾಕ್ಷಿ ಸಜ್ಜಾಗಿದ್ದಾಳೆ. ತನ್ನ ಮೆಚ್ಚಿನ ನಟ ವಿಕ್ಕಿ ಕೌಶಲ್‌ ಮತ್ತು ಸಂಗೀತ ಕಲಾವಿದಅರ್ಜುನ್‌ ಕನ್ಹಂಗೊ ಅವರನ್ನು ಭೇಟಿ ಮಾಡುವ ಮಹದಾಸೆಯೂ ಇದೆ. ಆಕೆಯ ಹವ್ಯಾಸಗಳಪಟ್ಟಿಯಲ್ಲಿರುವ ಕೆಲವು ಆಸೆಗಳನ್ನಾದರೂ ನಸಾಗಿಸಲು ‘ಬೀಯಿಂಗ್‌ ಯೂ’ ಸಂಸ್ಥೆ ಕೈಜೋಡಿಸಿದೆ.

ಬೀಯಿಂಗ್‌ ಯೂ’

‘ಬೀಯಿಂಗ್ ಯೂ’ ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆಯು ಮಹಿಳೆಯರು, ಜನಸಾಮಾನ್ಯರಯಶೋಗಾಥೆಗಳನ್ನು ಕಟ್ಟಿ ಕೊಡುತ್ತಿದೆ. ಜೀವನದ ನೈಜಕಥೆಗಳ ಮೂಲಕಸಮಾಜದಲ್ಲಿ ಧನಾತ್ಮಕ ಚಿಂತನೆ, ಜೀವನ ಉತ್ಸಾಹ, ಪ್ರೇರಣೆ ತುಂಬುವ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ಮೂಲ ಇಂಗ್ಲಿಷ್‌: ಪ್ರೀತಿ ರೈ

ಕನ್ನಡಕ್ಕೆ: ಗವಿ ಬ್ಯಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.