ADVERTISEMENT

ಐಪಿಎಲ್ ಹರಾಜು | ಕೊಹ್ಲಿಯನ್ನು ಕೆಣಕಿ ಚಚ್ಚಿಸಿಕೊಂಡಿದ್ದ ಕೆಸ್ರಿಕ್ ವಿಲಿಯಮ್ಸ್ UNSOLD

ಐಪಿಎಲ್‌ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆಯು ಇದೇ ಮೊದಲ ಬಾರಿಗೆ ಕೋಲ್ಕತ್ತದಲ್ಲಿ ನಡೆಯುತ್ತಿದೆ. ಹರಾಜು ಕಣದಲ್ಲಿ ಒಟ್ಟು 332 ಆಟಗಾರರು ಇದ್ದಾರೆ. ಯಾವ ಆಟಗಾರನ್ನು ಯಾವ ಪ್ರಾಂಚೈಸಿ ಎಷ್ಟು ಮೊತ್ತಕ್ಕೆ ಖರೀದಿಸಿದೆ. ಬಿಕರಿಯಾಗದೇ ಉಳಿದ ಆಟಗಾರರು ಯಾರು? ಎಂಬುದರ ಜೊತೆಗೆ ಹರಾಜು ಪ್ರಕ್ರಿಯೆಯ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 5:52 IST
Last Updated 20 ಡಿಸೆಂಬರ್ 2019, 5:52 IST

ಕೊನೆಗೂ ಆರ್‌ಸಿಬಿಗೆ ಸೇರಿದ ಸ್ಟೇಯ್ನ್‌

ಮಾರಾಟವಾಗದೆ ಉಳಿದಿದ್ದ ದಕ್ಷಿಣ ಆಫ್ರಿಕಾ ವೇಗಿ ಡೇಲ್‌ ಸ್ಟೇಯ್ನ್‌ ಅವರನ್ನು ಮೂಲ ಬೆಲೆ ₹ 2 ಕೋಟಿ ನೀಡಿ ಆರ್‌ಸಿಬಿ ಖರೀದಿಸಿದೆ.

ಜೊತೆಗೆ ಶ್ರೀಲಂಕಾ ಮಧ್ಯಮವೇಗಿ ಇಸುರು ಉದಾನ ಅವರೂ ಆರ್‌ಸಿಬಿ ಕ್ಯಾಂಪ್‌ ಸೇರಿದ್ದಾರೆ.

ವಿನಯ್‌ ಕುಮಾರ್‌ UNSOLD

ಕರ್ನಾಟಕ ತಂಡದ ಮಾಜಿ ನಾಯಕ ವಿನಯ್‌ ಕುಮಾರ್‌ ಯಾವುದೇ ತಂಡಕ್ಕೆ ಮಾರಾಟವಾಗಿಲ್ಲ.

ADVERTISEMENT

ಕೊಹ್ಲಿ ಕ್ಯಾಂಪ್‌ಗೆ ಪವನ್‌

ಕನ್ನಡಿಗ ಪವನ್‌ ದೇಶಪಾಂಡೆ ಅವರನ್ನು ₹ 20 ಲಕ್ಷಕ್ಕೆ ಆರ್‌ಸಿಬಿ ಖರೀದಿಸಿದೆ.

ಮತ್ತೆ ಮಾರಾಟವಾಗಲಿಲ್ಲ ಡೇಲ್‌ ಸ್ಟೇಯ್ನ್‌

ಮೋಹಿತ್‌ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್‌ಗೆ

ಮಧ್ಯಮವೇಗದ ಬೌಲರ್‌ ಮೋಹಿತ್‌ ಶರ್ಮಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ₹ 50 ಲಕ್ಷಕ್ಕೆ ಖರೀದಿಸಿದೆ.

ಕೆಕೆಆರ್ ಪಾಲಾದ ತಾಂಬೆ

ಹರಾಜು ಕಣದಲ್ಲಿದ್ದ ಹಿರಿಯ ಆಟಗಾರ ಪ್ರವೀಣ್‌ ತಾಂಬೆ ಅವರನ್ನು ಕೆಕೆಆರ್‌ ತಂಡ ₹ 20 ಲಕ್ಷಕ್ಕೆ ಖರೀದಿಸಿದೆ.

ಒಶಾನೆ ರಾಜಸ್ಥಾನಕ್ಕೆ

ವೆಸ್ಟ್ ಇಂಡೀಸ್‌ನ ಒಶಾನೆ ಥಾಮಸ್‌ ಅವರನ್ನು ರಾಜಸ್ಥಾನ ರಾಯಲ್ಸ್‌ ₹ 50 ಲಕ್ಷಕ್ಕೆ ಖರೀದಿಸಿದೆ.

ಆರ್‌ಸಿಬಿ ಪಾಳಯಕ್ಕೆ ಕೇನ್‌ ರಿಚರ್ಡ್‌ಸನ್

ಆಸ್ಟ್ರೇಲಿಯಾದ ವೇಗದ ಬೌಲರ್‌ ಕೇನ್‌ ರಿಚರ್ಡ್‌ಸನ್‌ ಅವರನ್ನು ಆರ್‌ಸಿಬಿ ₹ 4 ಕೋಟಿಗೆ ಖರೀದಿಸಿದೆ.

ಹೋಲ್ಡರ್–ಉದಾನ UNSOLD

ಶ್ರೀಲಂಕಾ ತಂಡದ ಆಲ್ರೌಂಡರ್ ಇಸುರು ಉದಾನ ಹಾಗೂ ವೆಸ್ಟ್ ಇಂಡೀಸ್‌ ತಂಡದ ಜೇಸನ್‌ ಹೋಲ್ಡರ್‌ ಯಾವುದೇ ತಂಡಕ್ಕೆ ಮಾರಾಟವಾಗಿಲ್ಲ.

ಯಾರಿಗೂ ಬೇಡ ಕೆಸ್ರಿಕ್ ವಿಲಿಯಮ್ಸ್

ಭಾರತ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಲ್ಲಿ ವಿರಾಟ್‌ ಕೊಹ್ಲಿಯನ್ನು ಕೆಣಕಿ ದಂಡನೆಗೆ ಒಳಗಾಗಿದ್ದ ಕೆಸ್ರಿಕ್ ವಿಲಿಯಮ್ಸ್ ಅವರನ್ನು ಯಾವ ಪ್ರಾಂಚೈಸ್‌ ಕೂಡ ಖರೀದಿಸಿಲ್ಲ.

ಕೆಸ್ರಿಕ್ ಮೂಲ ಬೆಲೆ ₹ 50 ಲಕ್ಷ. 

ಹೆಚ್ಚು ಮೊತ್ತಕ್ಕೆ ಬಿಕರಿಯಾದ ಐವರು

ಹರಾಜು ಪ್ರಕ್ರಿಯೆಯ ಮೊದಲ ಅವಧಿಯಲ್ಲಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಐದು ಆಟಗಾರರು ಇವರು.

‍ಪ್ಯಾಟ್‌ ಕಮಿನ್ಸ್‌: ₹ 15.50 ಕೋಟಿ
ಗ್ಲೇನ್‌ ಮ್ಯಾಕ್ಸ್‌ವೆಲ್‌: ₹ 10.75 ಕೋಟಿ
ಕ್ರಿಸ್‌ ಮೋರಿಸ್‌: ₹ 10 ಕೋಟಿ 
ಶೆಲ್ಡನ್ ಕಾಟ್ರೇಲ್‌: ₹ 8.50 ಕೋಟಿ
ನಾಥನ್‌ ಕಲ್ಟರ್ನೈಲ್‌: ₹ 8.0 ಕೋಟಿ

ಜೋಶ್‌ ಹ್ಯಾಷಲ್‌ವುಡ್‌ ಸಿಎಸ್‌ಕೆಗೆ

ಆಸ್ಟ್ರೇಲಿಯಾದ ಆಲ್ರೌಂಡರ್‌ ಜೋಶ್‌ ಹ್ಯಾಷಲ್‌ವುಡ್‌ ಅವರನ್ನು ₹ 2 ಕೋಟಿ ನೀಡಿ ಸಿಎಸ್‌ಕೆ ಖರೀದಿಸಿದೆ.

ಮಿಚೇಲ್‌ ಮಾರ್ಶ್‌ ಸನ್ ರೈಸರ್ಸ್‌ಗೆ

ಆಸ್ಟ್ರೇಲಿಯಾದ ಆಲ್ರೌಡರ್‌ ಮಿಚೇಲ್‌ ಮಾರ್ಶ್‌ ₹ 2 ಕೋಟಿಗೆ ಸನ್‌ ರೈಸರ್ಸ್‌ ತಂಡದ ಪಾಲಾಗಿದ್ದಾರೆ.

ನ್ಯೂಜಿಲೆಂಡ್‌ನ ಕಾಲಿನ್‌ ಮುನ್ರೋ ಹಾಗೂ ದಕ್ಷಿಣ ಆಫ್ರಿಕಾದ ಆ್ಯಂಡಿಲೆ ಪೆಹ್ಲುಕ್ವಾಯೋ ಮಾರಾಟವಾಗದೆ ಉಳಿದಿದ್ದಾರೆ.

ರಾಜಸ್ಥಾನಕ್ಕೆ ಮಿಲ್ಲರ್, ಡೆಲ್ಲಿಗೆ ಹೆಟ್ಮೆಯರ್‌

ದಕ್ಷಿಣ ಆಫ್ರಿಕಾದ ಡೇವಿಡ್‌ ಮಿಲ್ಲರ್‌ ಅವರನ್ನು ರಾಜಸ್ಥಾನ ರಾಯಲ್ಸ್‌ ತಂಡ ₹ 75 ಲಕ್ಷಕ್ಕೆ ರಾಜಸ್ಥಾನ ರಾಯಲ್ಸ್‌ ತಂಡ ಖರೀದಿಸಿದೆ.

ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಶಿಮ್ರೋನ್‌ ಹೆಟ್ಮೆಯರ್‌ ಅವರನ್ನು ₹ 7.75 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಖರೀದಿಸಿದೆ.

ಸೌರಭ್‌ ತಿವಾರಿ ಮುಂಬೈ ಇಂಡಿಯನ್ಸ್‌ಗೆ ₹ 50 ಲಕ್ಷಕ್ಕೆ ಮಾರಾಟವಾಗಿದ್ದಾರೆ.

ಪ್ಯಾಟ್‌ ಕಮಿನ್ಸ್‌ಗಾಗಿ ನಡೆದ ಬಿಡ್‌ ವಿಡಿಯೊ ನೋಡಿ

ಇದುವರೆಗೆ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎನಿಸಿರುವ ಪ್ಯಾಟ್‌ ಕಮಿನ್ಸ್‌ ಅವರನ್ನು ಖರೀದಿಸಲು ಪ್ರಾಂಚೈಸ್‌ಗಳು ಬಿಡ್‌ ನಡೆಸಿದ್ದು ಹೀಗೆ. ವಿಡಿಯೊ ನೋಡಲು ಇಲ್ಲಿ ಕ್ಲಿಕ್ಕಿಸಿ. https://bit.ly/2sH0KCk

ಆಸ್ಟ್ಟ್ರೇಲಿಯಾದ ಸ್ಟಾರ್‌ ಆಲ್ರೌಂಡರ್‌ ಆಗಿರುವ ಕಮಿನ್ಸ್‌ ಅವರನ್ನು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ₹ 15.5 ಕೋಟಿಗೆ ಖರೀದಿಸಿದೆ.

ಮಾರಾಟವಾದ ನೂರ್ ಅಹ್ಮದ್

ಅಫ್ಗಾನಿಸ್ತಾನದಲ್ಲಿ 19 ವರ್ಷದೊಳಗಿನವರ ವಿಭಾಗದ ವಿವಿಧ ಟೂರ್ನಿಗಳಲ್ಲಿ ಉತ್ತಮ ಆಟವಾಡಿ ಗಮನ ಸೆಳೆದಿದ್ದ ನೂರ್ ಅಹಮದ್‌ ಬಿಕರಿಯಾಗಿಲ್ಲ. ಹರಾಜು ಪ್ರಕ್ರಿಯೆ ಅಖಾಡದಲ್ಲಿದ್ದ ಅತ್ಯಂತ ಕಿರಿಯ ಆಟಗಾರ ಎಂಬ ಶ್ರೇಯ ಅವರದಾಗಿತ್ತು.

ನೂರ್‌ಗೆ ಈಗ ವಯಸ್ಸು 14 ವರ್ಷ, 350 ದಿನಗಳು. ಚೈನಾಮನ್ ಶೈಲಿಯ ಈ ಬೌಲರ್‌ಗೆ ₹ 30 ಲಕ್ಷ ಮೂಲಬೆಲೆ ನಿಗದಿಪಡಿಸಲಾಗಿತ್ತು.

ರಾಜಸ್ಥಾನ ತೆಕ್ಕೆಗೆ ತ್ಯಾಗಿ

‌ಕಾರ್ತಿಕ್‌ ತ್ಯಾಗಿ 1.30 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಮಾರಾಟವಾಗಿದ್ದಾರೆ.

ದೆಹಲಿಯ ರಾವತ್‌ ರಾಜಸ್ಥಾನಕ್ಕೆ

ದೆಹಲಿ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡುವ ಅನುಜ್‌ ರಾವತ್‌ ಅವರನ್ನು ರಾಜಸ್ಥಾನ ರಾಯಲ್ಸ್‌ ₹ 80 ಲಕ್ಷಕ್ಕೆ ಖರೀದಿಸಿದೆ.

ಮಾರಾಟವಾಗದ ಶಾರುಖ್‌ ಖಾನ್‌

ತಮಿಳುನಾಡು ತಂಡದ ಆಟಗಾರ ಶಾರುಖ್‌ ಖಾನ್‌, ಕನ್ನಡಿಗ ಪವನ್‌ ದೇಶಪಾಂಡೆ, ಆಸ್ಟ್ರೇಲಿಯಾದ ಡೆನಿಯಲ್‌ ಸ್ಯಾಮ್ಸ್‌, ರೋಹನ್‌ ಕದಂ ಮಾರಾಟವಾಗಿಲ್ಲ.

ಯಶಸ್ವಿ ಜೈಸ್ವಾಲ್‌ ರಾಜಸ್ಥಾನಕ್ಕೆ ಹೊರಟ

ರಾಜಸ್ಥಾನ ರಾಯಲ್ಸ್‌ ತಂಡ ಯಶಸ್ವಿ ಜೈಸ್ವಾಲ್‌ ಅವರನ್ನು ₹ 2.4 ಕೋಡಿ ನೀಡಿ ಖರೀದಿಸಿದೆ.

ಬಿಗ್‌ ಹಿಟ್ಟರ್‌ ದೀಪಕ್‌ ಹೂಡಾ ಪಂಜಾಬ್‌ಗೆ

ಸನ್‌ ರೈಸರ್ಸ್‌ಗೆ ಗರ್ಗ್‌

ಭಾರತದ 19 ವರ್ಷದೊಳಗಿನವರ ಕ್ರಿಕೆಟ್‌ ತಂಡದ ನಾಯಕ ಪ್ರಿಯಂ ಗರ್ಗ್‌ ಸನ್‌ ರೈಸರ್ಸ್‌ ತಂಡ ಸೇರಿಕೊಂಡಿದ್ದಾರೆ.

ನಾಥನ್‌ ಕರ್ಟರ್‌ನೇಲ್‌ ಕೊಂಡುಕೊಂಡ ಎಂಐ

ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರು

ಆಟಗಾರ ದೇಶ ತಂಡ ಬೆಲೆ
ಪ್ಯಾಟ್‌ ಕಮಿನ್ಸ್‌ ಆಸ್ಟ್ರೇಲಿಯಾ ಕೆಕೆಆರ್‌ ₹ 15.5 ಕೋಟಿ
ಗ್ಲೇನ್‌ ಮ್ಯಾಕ್ಸ್‌ವೆಲ್‌ ಆಸ್ಟ್ರೇಲಿಯಾ ಕಿಂಗ್ಸ್‌ ಇಲವೆನ್ ಪಂಜಾಬ್ ₹ 10.75 ಕೋಟಿ
ಕ್ರಿಸ್‌ ಮೋರಿಸ್‌ ದ.ಆಫ್ರಿಕಾ ಆರ್‌ಸಿಬಿ ₹ 10 ಕೋಟಿ
ಶೆಲ್ಡನ್‌ ಕಾಟ್ರೇಲ್‌ ವೆಸ್ಟ್‌ ಇಂಡೀಸ್‌ ಕಿಂಗ್ಸ್‌ ಇಲವೆನ್ ಪಂಜಾಬ್  ₹ 8.50 ಕೋಟಿ
ನಾಥನ್ ಕರ್ಟರ್‌ನೇಲ್‌ ಆಸ್ಟ್ರೇಲಿಯಾ ಮುಂಬೈ ಇಂಡಿಯನ್ಸ್‌  ₹ 8 ಕೋಟಿ
ಪಿಯೂಷ್‌ ಚಾವ್ಲಾ ಭಾರತ ಸಿಎಸ್‌ಕೆ ₹ 6.75 ಕೋಟಿ
ಸ್ಯಾಮ್‌ ಕರನ್‌ ಇಂಗ್ಲೆಂಡ್‌ ಸಿಎಸ್‌ಕೆ  ₹ 5.5 ಕೋಟಿ
ಇಯಾನ್‌ ಮಾರ್ಗನ್‌ ಇಂಗ್ಲೆಂಡ್‌ ಕೆಕೆಆರ್‌ ₹ 5.25 ಕೋಟಿ

ಬಿಕರಿಯಾಗದವರು.

ಐಪಿಲ್‌ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಘಾತಕ ವೇಗಿ ಡೇಲ್ಸ್‌ ಸ್ಟೇಯ್ನ್‌ ಅವರನ್ನು ಇದುವರೆಗೆ ಯಾವ ತಂಡವೂ ಖರೀದಿಸಿಲ್ಲ.

ಅವರಿಗೆ ₹ 2 ಕೋಟಿ ಮೂಲ ಬೆಲೆ ಇದೆ.

ಸ್ಟೇನ್‌ ಮಾತ್ರವಲ್ಲ ಇನ್ನೂ 14 ಪ್ರಮುಖ ಆಟಗಾರರು ಮಾರಾಟವಾಗದೆ ಉಳಿದಿದ್ದಾರೆ.

ಬಿಕರಿಯಾಗದ ವಿಕೆಟ್‌ ಕೀಪರ್‌ಗಳು

ಶ್ರೀಲಂಕಾದ ಕುಶಾಲ್‌ ಪೆರೇರಾ, ನಮನ್‌ ಓಜಾ, ಬಾಂಗ್ಲಾದೇಶದ ಮುಫಿಕರ್ ರಹೀಂ ಅವರನ್ನು ಇನ್ನೂ ಯಾವ ತಂಡವೂ ಖರೀದಿಸಿಲ್ಲ.

ಅಲೆಕ್ಸ್‌ ಕಾರಿಗೆ ಮಣೆ ಹಾಕಿದ ಡೆಲ್ಲಿ

ಆಸ್ಟ್ರೇಲಿಯಾದ ವಿಕೆಟ್‌ ಕೀಪರ್‌ ಅಲೆಕ್ಸ್‌ ಕಾರಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ₹ 2.4 ಕೋಟಿ ನೀಡಿ ಖರೀದಿಸಿದೆ.

ಮಾರಾಟವಾಗದೆ ಉಳಿದ ಸ್ಟುವರ್ಟ್‌ ಬಿನ್ನಿ

ಕೋಹ್ಲಿ ಪಡೆಗೆ ಸಿಗಲಿದೆ ಫಿಂಚ್‌ ಬ್ಯಾಟಿಂಗ್ ಬಲ

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಆ್ಯರನ್‌ ಫಿಂಚ್‌ ಬೆಂಗಳೂರು ರಾಯಲ್‌ ಚಾಲೆಂಚರ್ಸ್‌ ತಂಡಕ್ಕೆ ಬಿಕರಿಯಾಗಿದ್ದಾರೆ.

ಅವರಿಗೆ ₹ 4.40 ಕೋಟಿ ನೀಡಲಾಗಿದೆ.

ಚೆನ್ನೈ ಸೇರಿದ ಸ್ಯಾಮ್‌ ಕರನ್‌

ಆಲ್ರೌಂಡರ್‌ ಸ್ಯಾಮ್‌ ಕರನ್‌ ಅವರಿಗೆ ₹ 5.5 ಕೋಟಿ ನೀಡಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಖರೀದಿಸಿದೆ.

ಬಿಕರಿಯಾಗದೆ ಉಳಿದವರು

ಬಿಕರಿಯಾಗದೆ ಉಳಿದ ಚೇತೇಶ್ವರ ಪೂಜಾರಾ, ಅನುಮ ವಿಹಾರಿ ಹಾಗೂ ಯುಸೂಫ್‌ ಪಠಾಣ್‌

ಬೆಂಗಳೂರಿಗೆ ಮೋರಿಸ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ದಕ್ಷಿಣ ಆಫ್ರಿಕಾ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ ಅವರನ್ನು ₹ 10 ಕೋಟಿಗೆ ಖರೀದಿಸಿದೆ.

ಶಾರುಖ್‌ ಖಾನ್‌ ಬಳಗ ಸೇರಿದ ಮಾರ್ಗನ್

ಇಂಗ್ಲೆಂಡ್‌ ತಂಡದ ನಾಯಕ ಇಯಾನ್‌ ಮಾರ್ಗನ್‌ ಅವರನ್ನು ಶಾರುಖ್‌ ಖಾನ್ ಮಾಲೀಕತ್ವದ ಕೋಲ್ಕತ್ತ ನೈಟ್‌ ರೈಡರ್‌ ಪ್ರಾಂಚೈಸ್‌ ₹ 5.25 ಕೋಟಿಗೆ ಖರೀದಿಸಿದೆ.

ಕನ್ನಡಿಗ ರಾಬಿನ್‌ ಉತ್ತಪ್ಪಗೆ ₹ 3 ಕೋಟಿ

ಕನ್ನಡಿಗ ರಾಬಿನ್‌ ಉತ್ತಪ್ಪ ₹ 3 ಕೋಟಿಗೆ ರಾಜಸ್ಥಾನ ರಾಯಲ್ಸ್‌ ತಂಡ ಸೇರಿಕೊಂಡಿದ್ದಾರೆ.

ಕೆಕೆಆರ್‌ಗೆ ಪ್ಯಾಟ್‌ ಕಮಿನ್ಸ್‌

ಆಸೀಸ್‌ ಆಲ್ರೌಂಡರ್ ಪ್ಯಾಟ್‌ ಕಮಿನ್ಸ್‌ ಅವರನ್ನು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ಖರೀದಿಸಿದೆ. ಕೆಕೆಆರ್‌ ಬರೋಬ್ಬರಿ ₹ 15 ಕೋಟಿ ನೀಡಿ ಕಮಿನ್ಸ್‌ ಅವರನ್ನು ಕೊಂಡುಕೊಂಡಿದೆ.

ಆಲ್ರೌಂಡರ್‌ ಮ್ಯಾಕ್ಸ್‌ವೆಲ್‌ಗೆ ₹ 10.75 ಕೋಟಿ ಕೊಟ್ಟ ಕಿಂಗ್ಸ್‌

ಆಸ್ಟ್ರೇಲಿಯಾ ಆಲ್ರೌಂಡರ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರನ್ನು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ₹ 10.75 ಕೋಟಿಗೆ ಖರೀದಿಸಿದೆ.

ಮಾರಾಟವಾದ ಮೊದಲ ಆಟಗಾರ ಕ್ರಿಸ್ ಲಿನ್

ಆಸ್ಟ್ರೇಲಿಯಾ ಕ್ರಿಕೆಟಿಗ ಕ್ರಿಸ್‌ ಲಿನ್‌ ಅವರು ಈ ಬಾರಿಯ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾದ ಮೊದಲ ಆಟಗಾರ ಎನಿಸಿದ್ದಾರೆ.

ಲಿನ್‌ರನ್ನು ಅವರ ಮೂಲ ಬೆಲೆ ₹ 2 ಕೋಟಿಗೆ ಮುಂಬೈ ಇಂಡಿಯನ್ಸ್‌ ಖರೀದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.