ADVERTISEMENT

ಮಹಾ ರಾಜಕೀಯ | ರೆಸಾರ್ಟ್ ರಾಜಕಾರಣ ಆರಂಭ, ಕಾಂಗ್ರೆಸಿಗರು ಭೋಪಾಲ್‌ಗೆ, ಶಿವಸೈನಿಕರು ಜೈಪುರಕ್ಕೆ

ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡಣವೀಸ್‌ ಮುಖ್ಯಮಂತ್ರಿಯಾಗಿ, ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾಗಿ ಶನಿವಾರ ಬೆಳಗ್ಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆಗೂಡಿ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಶಿವಸೇನಾಗೆ ನಿರಾಸೆಯಾಗಿದೆ. ಇತ್ತ ಕಾಂಗ್ರೆಸ್‌ ಕೂಡ ಮೌನಕ್ಕೆ ಶರಣಾಗಿದೆ. ಇಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತ ಕ್ಷಣ ಕ್ಷಣದ ಅಪ್‌ಡೇಟ್‌ ಇಲ್ಲಿದೆ.

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 12:07 IST
Last Updated 23 ನವೆಂಬರ್ 2019, 12:07 IST

ರೆಸಾರ್ಟ್ ರಾಜಕಾರಣಕ್ಕೆ ಚಾಲನೆ

ದೇವೇಂದ್ರ ಫಡಣವೀಸ್ ನೇತೃತ್ವದಲ್ಲಿ ರೂಪುಗೊಂಡಿರುವ ಮಹಾರಾಷ್ಟ್ರದ ನೂತನ ಸರಕಾರ ರಚನೆಯಾದ ಬೆನ್ನಿಗೇ, ಕೆಲವೇ ದಿನಗಳಲ್ಲಿ ಬಹುಮತ ಸಾಬೀತು ಮಾಡಬೇಕಾಗಿರುವುದರಿಂದ, ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಪಣ ತೊಟ್ಟಿವೆ. ಈ ಕಾರಣಕ್ಕೆ, ತಮ್ಮ ಪಕ್ಷದ ಶಾಸಕರನ್ನು ತಮ್ಮದೇ ಸರಕಾರವಿರುವ ಮಧ್ಯಪ್ರದೇಶದ ಭೋಪಾಲ್‌ಗೆ ಕಳುಹಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇದೇ ವೇಳೆ, ಶಿವಸೇನಾ ಶಾಸಕರನ್ನು ಜೈಪುರಕ್ಕೆ ರವಾನಿಸಲು ನಿರ್ಧರಿಸಲಾಗಿದೆ.

ಶಿವಸೇನಾ ಶಾಸಕರು ಹೋಟೆಲ್ ಲಲಿತ್‌ಗೆ, ಕಾಂಗ್ರೆಸ್ ಶಾಸಕರು ಮಧ್ಯಪ್ರದೇಶಕ್ಕೆ, ಎನ್‌ಸಿಪಿ ಬಂಡಾಯ ಶಾಸಕರು ದಿಲ್ಲಿಗೆ

ಮೋದಿ ಹೈ ತೋ ಮುಮ್‌ಕೀನ್ ಹೈ ಎಂದ ಫಡಣವೀಸ್: ಮೋದಿ, ಅಮಿತ್‌ಶಾ ಹಾಗೂ ಬೆಂಬಲಿಸಿದ ಶಾಸಕರಿಗೆ ಸಿಎಂ ಧನ್ಯವಾದ

ಬೆಂಬಲ ನೀಡಿದ ಎಲ್ಲ ಶಾಸಕರು, ಸ್ವತಂತ್ರರಿಗೆ ಧನ್ಯವಾದ. ನಮ್ಮ ಸರ್ಕಾರ ರೈತರು, ಜನಸಾಮಾನ್ಯರಿಗಾಗಿ ಕೆಲಸ ಮಾಡಲಿದೆ ಮತ್ತು 5 ವರ್ಷ ಭದ್ರವಾಗಿ ಆಳ್ವಿಕೆ ನಡೆಸಲಿದೆ ಎಂದ ದೇವೇಂದ್ರ ಫಡಣವೀಸ್

ರಾಮ ಮಂದಿರ ವಿರೋಧಿಸುವ ಕಾಂಗ್ರೆಸ್ ಜತೆ ಶಿವಸೇನಾದಿಂದ ಜನತೆಗೆ ವಿಶ್ವಾಸದ್ರೋಹ: ಬಿಜೆಪಿ ಕಿಡಿ

ಅಜಿತ್ ಪವಾರ್‌ಗೆ ಬೆದರಿಕೆಯೊಡ್ಡಿ ಬೆಂಬಲ ಪಡೆದ ಬಿಜೆಪಿ: ಸಂಜಯ್ ರಾವುತ್ ಆರೋಪ

ಹಾಜರಾತಿಗೆ ಪಡೆದ ಸಹಿಯನ್ನು ಬೆಂಬಲ ಪತ್ರಕ್ಕೆ ದುರುಪಯೋಗಪಡಿಸಿಕೊಂಡ ಬಿಜೆಪಿ: ಎನ್‌ಸಿಪಿ ಮುಖಂಡ

ಮಹಾರಾಷ್ಟ್ರ ರಾಜಕೀಯ: ಎನ್‌ಸಿಪಿ ಬಂಡಾಯ ಶಾಸಕರನ್ನು ದೆಹಲಿಗೆ ವಿಮಾನ ಮೂಲಕ ರವಾನಿಸಲು ಸಿದ್ಧತೆ

ಸದನದಲ್ಲಿ ಬಿಜೆಪಿ - ಎನ್‌ಸಿಪಿ ಬಹುಮತ ಸಾಬೀತುಪಡಿಸಿಯೇ ಸಿದ್ಧ: ರವಿಶಂಕರ್ ಪ್ರಸಾದ್

ಸಿಡಬ್ಲ್ಯುಸಿ ವಿಸರ್ಜಿಸಿ, ರಾಹುಲ್ ಗಾಂಧಿ ವಾಪಸ್ ಕರೆಸಿ, ಖರ್ಗೆ, ವೇಣುಗೋಪಾಲ್, ಪಟೇಲ್ ಎಲ್ಲ ತಪ್ಪು ಮಾಹಿತಿ ನೀಡ್ತಿದ್ದಾರೆ ಎಂದ ಸಂಜಯ್ ನಿರುಪಮ್

ಕ್ರಿಕೆಟ್‌ ಮತ್ತು ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. 

ಸಂಜೆ ನಡೆಯುವ ಎನ್‌ಸಿಪಿ ಶಾಸಕಾಂಗ ಸಭೆಯಲ್ಲಿ ಅಜಿತ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. 

ನಾವು ಒಟ್ಟಾಗಿದ್ದೇವೆ (ಶಿವಸೇನಾ, ಕಾಂಗ್ರೆಸ್‌, ಎನ್‌ಸಿಪಿ) ವಿಶ್ವಾಸಮತ ಸಾಬೀತುಪಡಿಸುವಲ್ಲಿ ಬಿಜೆಪಿ ಯಶಸ್ವಿಯಾಗುವುದಿಲ್ಲ. ಇದನ್ನು ನಾವು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸಲ್ಲಿದ್ದೇವೆ ಎಂದು ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಹಮ್ಮದ್‌ ಪಟೇಲ್‌ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ

ಅಜಿತ್‌ ಪವಾರ್‌ ನಡೆಯಿಂದ ನಮಗೆ ಹಿನ್ನಡೆ ಆಗಿಲ್ಲ, ಸರ್ಕಾರ ರಚಿಸಲು ನಮ್ಮ ಬಳಿ ಅಗತ್ಯ ಸಂಖ್ಯಾ ಬಲವಿದೆ, ಸಂಜೆ ನಡೆಯುವ ಸಭೆಯಲ್ಲಿ ಅಜಿತ್‌ ಪವಾರ್‌ ನಡೆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಶರದ್‌ ಪವಾರ್‌ ಹೇಳಿದ್ದಾರೆ. 

ಅಜಿತ್‌ ಪವಾರ್‌ ಜೊತೆ ಗುರುತಿಸಿಕೊಂಡಿದ್ದ 10 ಶಾಸಕರಲ್ಲಿ ಮೂವರು ಶರದ್ ಪವಾರ್‌ ಕಡೆ ಯುಟರ್ನ್‌ ಹೊಡೆದಿದ್ದಾರೆ

ಸಂಜೆ 4.30ಕ್ಕೆ ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಎನ್‌ಸಿಪಿ ಮತ್ತು ಶಿವಸೇನಾದವರು ಜೊತೆಯಾಗಿದ್ದೇವೆ, ಮುಂದೆಯೂ ಜೊತೆಯಾಗಿ ಇರುತ್ತವೆ, ಮಹಾರಾಷ್ಟ್ರ ರಾಜಕಾರಣದಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದೆ, ಅವರು ಪಕ್ಷ ಇಬ್ಬಾಗ ಮಾಡುವ ಕೆಲಸ ಮಾಡಿದರೆ ನಾವು ಪಕ್ಷವನ್ನು ಜೋಡಿಸುತ್ತೇವೆ ಎಂದು ಉದ್ದವ್‌ ಠಾಕ್ರೆ ಹೇಳಿದ್ದಾರೆ.

ಬಿಜೆಪಿಯ ಕುತಂತ್ರ ಬಯಲಾಗಿದೆ, ಮಹಾರಾಷ್ಟ್ರದ ಜನರಿಗೆ ಬಿಜೆಪಿ ದ್ರೋಹ ಮಾಡಿದೆ, ಅವರು ಏನೇ ಮಾಡಿದರೂ ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ದವ್‌ ಠಾಕ್ರೆ ಹೇಳಿದ್ದಾರೆ.

ಬಿಜೆಪಿ ಸದನದಲ್ಲಿ ಬಹುಮತ ಸಾಬೀತು ಪಡಿಸುವುದಿಲ್ಲ, ನಮ್ಮಲ್ಲಿ ಸಂಖ್ಯಾ ಬಲವಿದೆ ನಾವೇ ಸರ್ಕಾರ ರಚನೆ ಮಾಡುತ್ತೇವೆ–ಶರದ್‌ ಪವಾರ್‌

ಈ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕರು ಭಾಗವಹಿಸಿಲ್ಲ

ಎನ್‌ಸಿಪಿ ಪಕ್ಷದ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ, ಅವರು ಅಜಿತ್‌ ಜೊತೆ ಹೋಗುವುದಿಲ್ಲ ಎಂದು ಹೇಳಿದ ಶರದ್‌ ಪವಾರ್‌

ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಲಿದೆ–ಶರದ್‌ ಪವಾರ್‌

ಅಜಿತ್‌ ಪವಾರ್‌ ಜೊತೆ ಎಷ್ಟು ಜನ ಶಾಸಕರಿದ್ದಾರೆ ಎಂಬ ಮಾಹಿತಿ ಇಲ್ಲ, ಅವರ ಜೊತೆ 10 ರಿಂದ 12 ಜನ ಶಾಸಕರಿರಬಹುದು–ಶರದ್‌ ಪವಾರ್

ಅಜಿತ್‌ ಪವಾರ್‌ ನಡೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿದ್ದು ಕಾರ್ಯಕರ್ತರಿಗೆ ನೋವಾಗಿದೆ. ಅಜಿತ್‌ ಪವಾರ್‌ ನಡೆಗೆ ನಮ್ಮ ವಿರೋಧ ಇದೆ ಎಂದು ಶರದ್‌ ಹೇಳಿದ್ದಾರೆ. 

ಶಿವಸೇನಾ ನೇತೃತ್ವದಲ್ಲಿ ಸರ್ಕಾರ ರಚಿಸಲು ನಮ್ಮ ಬಳಿ ಸಂಖ್ಯಾ ಬಲವಿದೆ–ಶರದ್‌ ಪವಾರ್‌

ಶಿವಸೇನಾ ನಾಯಕ ಉದ್ದವ್‌ ಠಾಕ್ರೆ ಹಾಗೂ ಎನ್‌ಸಿಪಿಯ ಶರದ್‌ ಪವಾರ್‌ ಅವರ ಸುದ್ದಿಗೋಷ್ಠಿ ಆರಂಭ

ಎನ್‌ಸಿಪಿಯು ಅಜಿತ್ ಪವಾರ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿದೆ.

22 ಜನ ಎನ್‌ಸಿಪಿ ಶಾಸಕರು ಗೋವಾ ರೆಸಾರ್ಟ್‌ಗೆ ಹೋಗಲಿದ್ದಾರೆ ಎಂದು ಮಹಾರಾಷ್ಟ್ರದ ಮಾಧ್ಯಮಗಳು ವರದಿ ಮಾಡಿವೆ.

ಮುಂಬೈನ ವೈಬಿ ಚೌಹಾಣ್‌ ಕೇಂದ್ರದಲ್ಲಿ ಉದ್ದವ್‌ ಠಾಕ್ರೆ ಹಾಗೂ ಶರದ್‌ ಪವಾರ್ ಕೆಲವೇ ಕ್ಷಣಗಳಲ್ಲಿ ಜಂಟಿ ಸುದ್ದಿ ಗೋಷ್ಠಿ ನಡೆಸಲಿದ್ದಾರೆ. 

ಮುಂಬೈನ ವೈಬಿ ಚೌಹಾಣ್‌ ಕೇಂದ್ರದಲ್ಲಿ ಉದ್ದವ್‌ ಠಾಕ್ರೆ ಹಾಗೂ ಶರದ್‌ ಪವಾರ್ ಜಂಟಿ ಸುದ್ದಿ ಗೋಷ್ಠಿ ನಡೆಸಲಿರುವ ಹಿನ್ನೆಲೆಯಲ್ಲಿ ಎನ್‌ಸಿಪಿ ಬೆಂಬಲಿಗರು ಶರದ್‌ ಪವಾರ್‌ ಪರ ಘೋಷಣೆಗಳನ್ನು ಕೂಗಿದರು.

ಪಕ್ಷ ಮತ್ತು ಕುಟುಂಬ ಇಬ್ಬಾಗವಾಗಿದೆ ಎಂದು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಲೆ ಟ್ವೀಟ್‌ ಮಾಡಿದ್ದಾರೆ.

ಅತ್ಯಂತ ಗೌಪ್ಯವಾಗಿ ಮಧ್ಯರಾತ್ರಿಯಲ್ಲೂ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲಾಗುತ್ತದೆ. ರಾಜಭವನವು ಬಿಜೆಪಿಗಾಗಿ ರಾತ್ರಿಯೆಲ್ಲ ಕೆಲಸ ಮಾಡುತ್ತದೆ. ರಾತ್ರೋರಾತ್ರಿ ಸಮೀಕರಣಗಳು ಬದಲಾಗಿ ಶಾಸಕರು ಪಕ್ಷಗಳು ತಮ್ಮ ನಿಲುವನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್‌ ಕರ್ನಾಟಕ ಟ್ವೀಟ್‌ ಮಾಡಿದೆ. 

ಬಿಜೆಪಿಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಶುಭಕೋರಿದ್ದಾರೆ.

ಮಹಾರಾಷ್ಟ್ರ ಜನರು ಬಿಜೆಪಿ–ಶಿವಸೇನಾ ಮೈತ್ರಿಗೆ ಮತ ಹಾಕಿ ಸ್ಪಷ್ಟ ಬಹುಮತ ನೀಡಿದ್ದರು. ಆದರೆ ಶಿವಸೇನಾದವರು ಬಿಜೆಪಿ ಬಿಟ್ಟು ಪರ್ಯಾಯ ಸರ್ಕಾರ ರಚನೆ ಮಾಡುವ ಬಗ್ಗೆ ಮೊದಲಿನಿಂದಲೂ ಮಾತನಾಡುತ್ತ ಬಂದಿದ್ದರು ಎಂದು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್‌ ಪಾಟೀಲ್‌ ಹೇಳಿದ್ದಾರೆ. 

ಸರ್ಕಾರ ರಚನೆಯಲ್ಲಿ ಶರದ್‌ ಪವಾರ್‌ ಅವರ ಯಾವುದೇ ಕೈವಾಡ ಇಲ್ಲ, ಅಜಿತ್‌ ಪವಾರ್‌ ಮಹಾರಾಷ್ಟ್ರ ಜನತೆಯ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಶಿವಸೇನಾದ ಸಂಜಯ್‌ ರಾವುತ್‌ ಟ್ವೀಟ್‌ ಮಾಡಿದ್ದಾರೆ.

ಅಜಿತ್‌ ಪವಾರ್‌ ಬಿಜೆಪಿಗೆ ಬೆಂಬಲ ನೀಡಿರುವುದು ಅವರ ವೈಯಕ್ತಿಕ, ಇದು ಪಕ್ಷದ ನಿರ್ಧಾರವಲ್ಲ, ನಾವು ಇದನ್ನು ಬೆಂಬಲಿಸುವುದಿಲ್ಲ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್ ಅವರಿಗೆ ಅಭಿನಂದನೆಗಳು. ಈ ಸರ್ಕಾರವು ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಬದ್ಧ ಮತ್ತು ಪ್ರಗತಿಯ ಹೊಸ ಮಾನದಂಡಗಳನ್ನು ರಚಿಸುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಅಮಿತ್‌ ಶಾ  ಟ್ವೀಟ್ ಮಾಡಿದ

ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡಣವೀಸ್ ಮತ್ತು ಅಜಿತ್ ಪವಾರ್ ಜೀ ಅವರಿಗೆ ಅಭಿನಂದನೆಗಳು. ಮಹಾರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಅವರು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡಣವೀಸ್‌ ಮುಖ್ಯಮಂತ್ರಿಯಾಗಿ, ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾಗಿ ಶನಿವಾರ ಬೆಳಗ್ಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.