ADVERTISEMENT

ಖಗೋಳ ಕೌತುಕ Live | ಗ್ರಹಣ ಮೋಕ್ಷ

ಸೂರ್ಯಗ್ರಹಣದ ಖಗೋಳ ವಿದ್ಯಮಾನ ಇಂದು ಬೆಳಿಗ್ಗೆ ನಡೆಯಲಿದ್ದು, ಬೆಳಿಗ್ಗೆ 8.04 ಗಂಟೆಗೆ ಭಾಗಶಃ ಸೂರ್ಯಗ್ರಹಣ ಆರಂಭವಾಗಿದೆ.

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 5:44 IST
Last Updated 26 ಡಿಸೆಂಬರ್ 2019, 5:44 IST

ಗ್ರಹಣ ಮೋಕ್ಷ

ಕಾಸರಗೋಡು ಸಮೀಪದ ಚೆರುವತೂರ್‌ನ ಕಡಕ್ಕೊಟ್ಟೆಯಲ್ಲಿ ಬೆಳಿಗ್ಗೆ 11.04ಕ್ಕೆ ಸೂರ್ಯಗ್ರಹಣ ಮುಕ್ತಾಯವಾಯಿತು. ಬೆಳಿಗ್ಗೆ 08.04ಕ್ಕೆ ಗ್ರಹಣ ಸ್ಪರ್ಶವಾಗಿತ್ತು.

ಕಾಸರಗೋಡು: ಸೂರ್ಯಗ್ರಹಣ ಕಾಣುವ ಉತ್ಸಾಹ

ಕೈಗೆ ಸಿಕ್ಕ ಸೂರ್ಯ

ಕೈಗೆ ಮೇಲೆ ಸೂರ್ಯ...

ಮಂಡ್ಯ ಜಿಲ್ಲೆ ದ್ಯಾಪಸಂದ್ರ ಗ್ರಾಮದ ಶಂಕರೇಗೌಡರು ತಮ್ಮ ಮನೆಯ ಹೆಂಚಿನ ಕಿಂಡಿಯ ಮೂಲಕ ಸೂರ್ಯನ ಪ್ರತಿಬಿಂಬ ಸೆರೆ ಹಿಡಿದಿದ್ದಾರೆ.

ADVERTISEMENT

ಬಿಡುವ ಮೊದಲು

ಕಾಸರಗೋಡು ಸಮೀಪದ ಚೆರುವತೂರ್‌ನ ಕಡಕ್ಕೊಟ್ಟೆಯಲ್ಲಿ ಸೂರ್ಯಗ್ರಹಣ ಮೋಕ್ಷಕ್ಕೂ ಮುನ್ನ 10.41ಕ್ಕೆ ಕಂಡುಬಂದ ದೃಶ್ಯ. (ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ)

ಗ್ರಹಣ ಬಿಡೋವರೆಗೂ ಒನಕೆ ನಿಂತಿರುತ್ತೆ!

ಬೆಳಗಾವಿ: ಹಳ್ಳಿಗಳಲ್ಲಿ ಸೂರ್ಯ ಗ್ರಹಣ ಕಂಡು ಹಿಡಿಯುವ ಕಲೆ ಇದು. ಗ್ರಹಣ ಇದ್ದ ಸಮಯದಲ್ಲಿ ಮಾತ್ರ ಈ ಒನಕೆ ನಿಲ್ಲುತ್ತದೆ. ಗ್ರಹಣ ಬಿಟ್ಟ ನಂತರ ಈ ಒನಕೆ ತಾನಾಗಿಯೇ ಬೀಳುತ್ತದೆ ಎಂಬ ನಂಬಿಕೆ ಇದೆ.

ತ್ರಾಮದ ಅಥವಾ ಇತರ ತಟ್ಟೆಯಲ್ಲಿ ನೀರು ಹಾಕಿ ಒನಕೆ ನಿಲ್ಲಿಸುವುದು ರಾಮದುರ್ಗ ತಾಲ್ಲೂಕು ಕಟಕೋಳ, ರಾಯಬಾಗ ತಾಲ್ಲೂಕಿನ ಮುಗಳಖೋಡ ಮೊದಲಾದ ಕಡೆಗಳಲ್ಲಿ ಕಂಡುಬಂತು.

ಬೆಳಗಾವಿಯ ಕುಲಕರ್ಣಿ ಬೀದಿಯಲ್ಲಿ ಒನಕೆ ನಿಲ್ಲಿಸಲಾಗಿದೆ.

ತಿಪ್ಪೆಯಲ್ಲಿ ಮಕ್ಕಳನ್ನು ಹುದುಗಿಸಿದ ಪೋಷಕರು

ಗ್ರಹಣದ ದಿನವೇ ಹುಟ್ಟುಹಬ್ಬ ಆಚರಣೆ 

ದಾವಣಗೆರೆ: ಮೌನೇಶ್ವರ ಲೇಔಟ್ ನ  ವಿಶ್ವನಾಥ್  ಸೂರ್ಯಗ್ರಹಣ ದಿನವೇ ಜನುಮದಿನವನ್ನು ಕೇಕ್ ಕತ್ತರಿಸಿ ಸ್ನೇಹಿತರಿಗೆ ತಿನ್ನಿಸಿ ಆಚರಿಕೊಂಡಿದ್ದಾನೆ.

ನಿಟುವಳ್ಳಿ ನಿಂಚನ ಸ್ಕೂಲ್ ನ 8ನೇ ತರಗತಿಯ ವಿದ್ಯಾರ್ಥಿ ಯಾಗಿರವ ವಿಶ್ವನಾಥ ಈ ಮೂಲಕ ವೈಚಾರಿಕತೆ ಸಾರಿದರು.

ಉಳ್ಳಾಲ: ಗ್ರಹಣ ದೋಷ ನಿವಾರಣೆಗೆ ಹೋಮ

ಮಂಗಳೂರು: ಉಳ್ಳಾಲ ಕಾಪಿಕಾಡಿನ ಉಮಾಪುರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಸೂರ್ಯಗ್ರಹಣದ ಅಂಗವಾಗಿ ಗ್ರಹಣದೋಷ ನಿವಾರಣೆಗೆ   ಗ್ರಹಣ ಶಾಂತಿ ಹೋಮ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲೆ ಮಸೀದಿಗಳಲ್ಲಿ ವಿಶೇಷ ನಮಾಜ್

ಮಂಗಳೂರು: ಸೂರ್ಯಗ್ರಹಣ ಹಿನ್ನಲೆಯಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ನಮಾಜ್ ಮಾಡಲಾಯಿತು.

ನಗರ ಬಂದರು ಕೇಂದ್ರ ಜುಮಾ ಮಸೀದಿಯಲ್ಲಿ ಬೆಳಿಗ್ಗೆ 9ಕ್ಕೆ ನಡೆದ ನಮಾಜ್‌ಗೆ ಖತೀಬ್ ಸ್ವದಕತುಲ್ಲಾಹ್ ಫೈಝಿ ನೇತೃತ್ವ ನೀಡಿದರು.‌

ಉಳಿದಂತೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಮಸೀದಿಗಳಲ್ಲಿ ವಿಶೇಷ ನಮಾಜ್ ಮಾಡಲಾಯಿತು.

ಕೊಡಗಿನಲ್ಲಿ ಸೂರ್ಯನಿಗೆ ಕಂಕಣ

ಕೊಡಗಿನಲ್ಲಿ ಸೂರ್ಯನಿಗೆ ಕಂಕಣ (ಪ್ರಜಾವಾಣಿ ಚಿತ್ರಗಳು: ರಂಗಸ್ವಾಮಿ)

ಕಾರವಾರದಲ್ಲಿ ಕಂಡ ಗ್ರಹಣ

ಕಾರವಾರದಲ್ಲಿ ಕಂಕಣ ಸೂರ್ಯಗ್ರಹಣ ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದು ಹೀಗೆ. (ಚಿತ್ರ: ದಿಲೀಪ್ ರೇವಣಕರ್)

ದೇಗುಲಗಳ ಬಾಗಿಲು ಬಂದ್

ಕಾರವಾರದಲ್ಲಿ ಕಂಡ ಗ್ರಹಣ

ಕಾರವಾರದಲ್ಲಿ ಕಂಕಣ ಸೂರ್ಯಗ್ರಹಣ ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದು ಹೀಗೆ. (ಚಿತ್ರ: ದಿಲೀಪ್ ರೇವಣಕರ್)

ಖಗೋಳ ಕೌತುಕ

ಕಾಸರಗೋಡು ಸಮೀಪದ ಚೆರುವತೂರ್‌ನ ಕಡಕ್ಕೊಟ್ಟೆಯಲ್ಲಿ 9.44ಕ್ಕೆ ಕಂಡ ದೃಶ್ಯ.

ಗ್ರಹಣ ನೋಡಲು ಬಂದವರ ನಿರಾಶೆ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಗ್ರಹಣ ನೋಡಲು ಬಂದವರು ಮೋಡ ಮುಸುಕಿದ ವಾತಾವರಣದಲ್ಲಿ ಸೂರ್ಯ ಮರೆಯಾದ ಕಾರಣ ನಿರಾಶೆ ಅನುಭವಿಸಿದರು.

9.27ಕ್ಕೆ ಕಂಕಣ ಮೋಕ್ಷ

9.27ಕ್ಕೆ ಕಂಕಣ ಮೋಕ್ಷ

ರಾಮನಗರದಲ್ಲಿ ಕಂಡ ಗ್ರಹಣ

ರಾಮನಗರದಲ್ಲಿ ಕಂಡ ಗ್ರಹಣ

ಹೊಸಪೇಟೆ: ಮನೆಬಿಟ್ಟು ಹೊರಬರದ ಜನತೆ

9.24ಕ್ಕೆ ಮೂಡಿತು ಕಂಕಣ

9.24ಕ್ಕೆ ಮೂಡಿತು ಕಂಕಣ

ದಾವಣಗೆರೆಯಲ್ಲಿ ಗ್ರಹಣ ವೀಕ್ಷಣೆ

ಬೆಂಗಳೂರಲ್ಲಿ ಸೂರ್ಯಗ್ರಹಣ ಕಂಡಿದ್ದಿಷ್ಟು

ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ. ಅಲ್ಲಿಷ್ಟು ಇಲ್ಲಿಷ್ಟು ಸೂರ್ಯ ಇಣುಕಿ ನೋಡಿದ. (ಚಿತ್ರ: ಈಶ್ವರ ಬಡಿಗೇರ್)

ಬೆಂಗಳೂರಲ್ಲಿ ಸೂರ್ಯಗ್ರಹಣ ಕಂಡದ್ದಿಷ್ಟು

ಬೆಂಗಳೂರಲ್ಲಿ ಮೋಡ ಮುಸುಕಿದ ವಾತಾವರಣ. ಸೂರ್ಯಗ್ರಹಣ ಕಂಡದ್ದಿಷ್ಟು.

ಬೆಳಿಗ್ಗೆ 9.12ಕ್ಕೆ ಕಂಡ ಕೌತುಕ

ಕಾಸರಗೋಡು ಸಮೀಪದ ಚೆರುವತೂರ್‌ನ ಕಡಕ್ಕೊಟ್ಟೆಯಲ್ಲಿ ಬೆಳಿಗ್ಗೆ 9.12ಕ್ಕೆ ಕಂಡ ದೃಶ್ಯ.

ಶಿರಸಿಯಲ್ಲಿ ಕಂಡ ಪ್ರತಿಫಲನ

ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಕಚೇರಿಯಲ್ಲಿ ಪ್ರತಿಫಲನದ ಮೂಲಕ ಗೋಡೆಯ ಮೇಲೆ ಗ್ರಹಣದ ದೃಶ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಹಲವಾರು ಜನರು ಇದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ರಾಯಬಾಗದಲ್ಲಿ ಗ್ರಹಣ ಕಂಡ ಬಗೆ

ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಮುಗಳಖೋಡದಲ್ಲಿ ಕಂಡು ಬಂದ ಸೂರ್ಯಗ್ರಹಣದ ನೋಟ.

ಕಾರವಾರದಲ್ಲಿ ಗ್ರಹಣ ವೀಕ್ಷಣೆ

ಕಾರವಾರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆ.

ಕಾಸರಗೋಡಿನಲ್ಲಿ ಕಂಡ ಗ್ರಹಣ

ಕಾಸರಗೋಡು ಸಮೀಪದ  ಚೆರುವತೂರ್‌ನ ಕಡಕ್ಕೊಟ್ಟೆಯಲ್ಲಿ ಬೆಳಿಗ್ಗೆ 9.04ಕ್ಕೆ ಕಂಡ ಸೂರ್ಯಗ್ರಹಣ

ಕೊಡಗಿನಲ್ಲಿ ಗ್ರಹಣ ವೀಕ್ಷಣೆಗೆ ಮೋಡಗಳೇ ಅಡ್ಡಿ

ಕೊಡಗು ಜಿಲ್ಲೆಯ ಕಾಯಮಾನಿ, ಕುಟ್ಟ, ಇರ್ಫು, ಗೋಣಿಕೊಪ್ಪಲು ಸುತ್ತಮುತ್ತ ದಟ್ಟವಾದ ಮೋಡ ಕವಿದ ವಾತಾವರಣವಿದ್ದು ಸೂರ್ಯ, ಚಂದ್ರನ ವಿಸ್ಮಯ ಕಣ್ತುಂಬಿಕೊಳ್ಳಲು ಸದ್ಯಕ್ಕೆ ಅಸಾಧ್ಯವಾಗಿದೆ.

ಗ್ರಹಣ ನೋಡಲು ನೆರೆದ ಜನ

ಕೊಡಗು - ಕೇರಳದ ಗಡಿಭಾಗವಾದ ಕಾಯಮಾನಿಯಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವಿದ್ಯಾರ್ಥಿಗಳು ಹಾಗೂ ಖಗೋಳ ಆಸಕ್ತರು ಸೇರಿದ್ದಾರೆ. ಮೋಡ ಹಾಗೂ ಮಂಜು ಮುಸುಕಿದ ವಾತಾವರಣವಿದೆ. ಮೋಡ ಮರೆಯಾದರೆ ಗ್ರಹಣ ವೀಕ್ಷಣೆ ಸಾಧ್ಯವಾಗಲಿದೆ.

ಮಂಗಳೂರಿನಲ್ಲಿ ಖಗೋಳಾಸಕ್ತರ ದಂಡು

ಕೇರಳದ ಕಾಸರಗೋಡು ಸಮೀಪದ ಚೆರುವತೂರ್‌ನ ಕಡಕ್ಕೊಟ್ಟೆಯಲ್ಲಿ ಸಾರ್ವಜನಿಕರಿಗೆ ಗ್ರಹಣ ವೀಕ್ಷಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. 

ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಆಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದಾರೆ.

ಕಲಬುರ್ಗಿ ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ. ಕಂಕಣ ಸೂರ್ಯಗ್ರಹಣ ನೋಡಲು ಉತ್ಸುಕತೆಯಿಂದ ಕಾಯುತ್ತಿದ್ದವರಿಗೆ ನಿರಾಸೆ. 

ಬೆಳಗಾವಿ ಜಿಲ್ಲೆಯಲ್ಲಿ ಭಾಗಶಃ ಗೋಚರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.