ADVERTISEMENT

ಪೊಂಗಲ್

ವನಜಾ ಚಂದ್ರಶೇಖರ್
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಸಿಹಿ ಪೊಂಗಲ್
ಬೇಕಾಗುವ ಸಾಮಾನು
: ಹೆಸರು ಬೇಳೆ ಒಂದು ಕಪ್, ಅಕ್ಕಿ ಒಂದು ಕಪ್, ಕಾಯಿತುರಿ ಒಂದು ಕಪ್,  ಬೆಲ್ಲ ಒಂದು ಅಚ್ಚು, ತುಪ್ಪ, ಏಲಕ್ಕಿ, ದ್ರಾಕ್ಷಿ, ಗೋಡಂಬಿ, ಅರಿಸಿಣ
ಮಾಡುವ ವಿಧಾನ: ಹೆಸರು ಬೇಳೆಯನ್ನು ಕಂದು ಬಣ್ಣಕ್ಕೆ ಬರುವಂತೆ ಹುರಿಯಿರಿ. ಅಕ್ಕಿಯೊಂದಿಗೆ ಅರಿಸಿಣ ಸೇರಿಸಿ ಪುಡಿ ಮಾಡಿ. ಕಾಯಿತುರಿ, ಬೆಲ್ಲ ಏಲಕ್ಕಿ ಪುಡಿ ಸೇರಿಸಿ ಪಾಕ ಮಾಡಿ. ಬೆಂದ ಅನ್ನ ಹಾಗೂ ಬೇಳೆಗೆ ತುಪ್ಪ ಸೇರಿಸಿ, ದ್ರಾಕ್ಷಿ, ಗೋಡಂಬಿ ಹಾಕಿ ಕಲಸಿರಿ.

ಖಾರದ ಪೊಂಗಲ್
ಬೇಕಾಗುವ ಸಾಮಾನು:
ಹೆಸರು ಬೇಳೆ ಒಂದು ಕಪ್, ಅಕ್ಕಿ ಒಂದು ಕಪ್, ಕಾಯಿತುರಿ ಒಂದು ಕಪ್,  ಜೀರಿಗೆ, ಅರಿಸಿಣ, ಮೆಣಸು, ಇಂಗು, ಹಸಿಮೆಣಸಿನಕಾಯಿ, ಎಣ್ಣೆ ಅಥವಾ ತುಪ್ಪ, ಚಿದಕವರೆ, ಉಪ್ಪು.

ಮಾಡುವ ವಿಧಾನ: ಹೆಸರು ಬೇಳೆಯನ್ನು ಹುರಿದು ಅಕ್ಕಿಯೊಂದಿಗೆ ಸೇರಿಸಿ ಅನ್ನ ಮಾಡಿಕೊಳ್ಳಿ. ಮೆಣಸು,  ಜೀರಿಗೆಯನ್ನು ಪುಡಿ ಮಾಡಿ ಅನ್ನಕ್ಕೆ ಸೇರಿಸಿ. ಕಾಯಿತುರಿ, ತುಪ್ಪ, ಉಪ್ಪು ಸೇರಿಸಿ ಒಂದೆರಡು ಸುತ್ತು ಕೂಡಿಸಿ. ನಂತರ ಬೆಂದ ಚಿದಕವರೆ ಸೇರಿಸಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT