ADVERTISEMENT

ಬೆಂಗಳೂರಿನಲ್ಲಿ ಸಾಕು ‍ಪ್ರಾಣಿಗಳೊಂದಿಗೆ ಭೇಟಿ ನೀಡಬಹುದಾದ ಕೆಫೆಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2025, 11:20 IST
Last Updated 4 ನವೆಂಬರ್ 2025, 11:20 IST
   

ಸಾಕುಪ್ರಾಣಿ ಪ್ರಿಯರೇ, ನಿಮ್ಮ ಸಾಕುಪ್ರಾಣಿಗಳನ್ನು ಹೊರಗಡೆ ಕರೆದುಕೊಂಡು ಹೋಗಲು ಉತ್ತಮ ಸ್ಥಳವನ್ನು ಹುಡುಕುತ್ತಿದ್ದೀರಾ? ಬೆಂಗಳೂರಿನಲ್ಲಿರುವ ಈ 5 ಸ್ಥಳಗಳನ್ನು ಸಾಕುಪ್ರಾಣಿ ಸ್ನೇಹಿ ಕೆಫೆಗಳು ಎಂದು ತಜ್ಞರು ಅನುಮೋದಿಸಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ. ಹಾಗಾದರೆ ಆ 5 ಸಾಕುಪ್ರಾಣಿ ಕೆಫೆಗಳು ಯಾವುವು, ಇರುವುದು ಎಲ್ಲಿ ಹಾಗೂ ಯಾವ ಸಮಯದಲ್ಲಿ ತೆರೆದಿರುತ್ತದೆ ಎಂಬ ಮಾಹಿತಿ ನೋಡೋಣ.

ಟ್ರಿಪ್ಪಿ ಗೋಟ್ ಕೆಫೆ (Trippy Goat Cafe ) : 

ಹಚ್ಚ ಹಸಿರು ಹಾಗೂ ಶಾಂತ ವಾತಾವರಣದಿಂದ ಕೂಡಿದ ಟ್ರಿಪ್ಪಿ ಗೋಟ್ ಕೆಫೆ ನಿಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುತ್ತದೆ. ಇದು ಸಾಕು ನಾಯಿಯನ್ನು ಕರೆದುಕೊಂಡು ಹೋಗಲು ಸೂಕ್ತ ಸ್ಥಳವಾಗಿದೆ. ವಾರಾಂತ್ಯದಲ್ಲಿ ವಿಶ್ರಮಿಸಲು ಈ ಸ್ಥಳಕ್ಕೆ ನಿಮ್ಮ ಸಾಕು ನಾಯಿಯೊಂದಿಗೆ ಭೇಟಿ ನೀಡಬಹುದು. 

ಸ್ಥಳ: ವಸಂತ ನಗರ

ADVERTISEMENT

ಸಮಯ: ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10:30 ರಿಂದ ರಾತ್ರಿ 11 ರವರೆಗೆ, ವಾರಾಂತ್ಯದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 11ರವರೆಗೆ.

ದಿ ಪೆಕ್ ( The Peck):

40 ವರ್ಷಗಳ ಹಳೆಯ ಬಂಗಲೆಯಲ್ಲಿ ನೆಲೆಗೊಂಡಿರುವ ‘ದಿ ಪೆಕ್’ ಕೆಫೆಯು ಪ್ರಾಚೀನ ಕಲ್ಪನೆಗೆ ಬಣ್ಣ ತುಂಬುತ್ತದೆ. ಸಾಕು ಪ್ರಾಣಿ ಹಾಗೂ ಅವುಗಳ ಮಾಲೀಕರು ಸಂತೋಷದಿಂದ ಕಾಲ ಕಳೆಯಲು ಉತ್ತಮ ಸ್ಥಳವಾಗಿದೆ. 

ಸ್ಥಳ: ಕೋರಮಂಗಲ

ಸಮಯ: ಬೆಳಿಗ್ಗೆ 11 ರಿಂದ ರಾತ್ರಿ 11 ರವರೆಗೆ

ನೆರ್.ಲು ಕೆಫೆ (Ner.lu Cafe):

ನೆರ್‌.ಲು ಕೆಫೆ ಭಾರತೀಯ ಕಾಫಿ ಬೀಜ ಪರಂಪರೆಯ ಕಲ್ಪನೆಯಡಿ ನಿರ್ಮಿಸಲಾದ ಕೆಫೆಯಾಗಿದೆ. ಇಲ್ಲಿ ರುಚಿಕರವಾದ ಕಾಫಿ ದೊರೆಯುತ್ತದೆ. ನಿಮ್ಮ ಸಾಕು ಪ್ರಾಣಿಯ ಜೊತೆ ಇಲ್ಲಿಗೆ ಭೇಟಿ ನೀಡಬಹುದಾಗಿದೆ. 

ಸ್ಥಳ: ಕ್ರೆಸೆಂಟ್ ರಸ್ತೆ

ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 11ರ ವರೆಗೆ.

ಕಾಪರ್‌ + ಕ್ಲೋವ್ಸ್ (Copper + Cloves):

ಕಾಪರ್‌ + ಕ್ಲೋವ್ಸ್ ವಿಶ್ರಾಂತಿಗಾಗಿ ವಿನ್ಯಾಸಗೊಳಿಸಲಾದ ಆಕರ್ಷಕ ಉದ್ಯಾನದಿಂದ ಕೂಡಿದ ಕೆಫೆಯಾಗಿದೆ. ಹಚ್ಚ ಹಸಿರಿನಿಂದ ಸುತ್ತುವರೆದಿರುವ ಈ ಕೆಫೆ ಹಳ್ಳಿಗಾಡಿನ ಅಲಂಕಾರಗಳಿಂದ ಆಕರ್ಷಿಸುತ್ತವೆ. ನಿಮ್ಮ ಸ್ನೇಹಿತರು ಹಾಗೂ ಅಪ್ತರೊಂದಿಗೆ ಸಮಯ ಕಳೆಯಲು ಇದು ಸೂಕ್ತ ಸ್ಥಳವಾಗಿದೆ.

ಸ್ಥಳ: ಇಂದಿರಾನಗರ

ಸಮಯ: ಸೋಮವಾರದಿಂದ ಗುರುವಾರ ಬೆಳಿಗ್ಗೆ 11 ರಿಂದ ರಾತ್ರಿ 8 ರವರೆಗೆ, ಶುಕ್ರವಾರದಿಂದ ಭಾನುವಾರ ಬೆಳಿಗ್ಗೆ 9:30 ರಿಂದ ರಾತ್ರಿ 8ರವರೆಗೆ

ಮೈಟಿಪಾವ್ಸ್ (Mighty Paws):

ಪ್ರಸಿದ್ಧ ಸಾಕುಪ್ರಾಣಿ ಸ್ನೇಹಿ ತಾಣವಾದ ಮೈಟಿಪಾವ್ಸ್ ಈ ಉಪಾಹಾರ ಗೃಹವು ನಿಮ್ಮ ಪ್ರೀತಿಯ ನಾಯಿಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ಸಾಕು ಪ್ರಾಣಿಗಳಿಗಾಗಿಯೇ ಆಟದ ಮೈದಾನವಿದೆ. ನೀವು ನಿಮ್ಮ ಪ್ರೀತಿಯ ನಾಯಿಗಳ ಜೊತೆ ಮೋಜು, ಮಸ್ತಿ ಮಾಡಬಹುದು.

ಸ್ಥಳ: ಸರ್ಜಾಪುರ ರಸ್ತೆ

ಸಮಯ: ಬೆಳಿಗ್ಗೆ 10:30 ರಿಂದ ರಾತ್ರಿ 10:30 ರವರೆಗೆ