ADVERTISEMENT

ಯುವ ಬಾಣಸಿಗರ ಒಲಿಂಪಿಯಾಡ್‌

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 20:00 IST
Last Updated 27 ಜನವರಿ 2019, 20:00 IST
ಕಳೆದ ವರ್ಷದ ಒಲಿಂಪಿಯಾಡ್‌ ಚಿತ್ರ
ಕಳೆದ ವರ್ಷದ ಒಲಿಂಪಿಯಾಡ್‌ ಚಿತ್ರ   

ಬೆಂಗಳೂರಿನ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ (ಐಐಎಚ್‌ಎಂ) ನಲ್ಲಿ ಅಂತರರಾಷ್ಟ್ರೀಯ ಮಟ್ಟದ ‘ಯಂಗ್‌ ಶೆಫ್‌ ಒಲಿಂಪಿಯಾಡ್ 2019’ ಐದನೇ ಆವೃತ್ತಿಯ ‘ಎಫ್‌’ ತಂಡದ ಸ್ಪರ್ಧೆ ಇದೇ 30 ಮತ್ತು 31ರಂದು ಬೆಳಿಗ್ಗೆ 9ರಿಂದ 11ರವರೆಗೆ ನಡೆಯಲಿದೆ.

1 ಮತ್ತು 2ನೇ ಸುತ್ತಿನ ಸ್ಪರ್ಧೆಗಳು ಬೆಂಗಳೂರಿನಲ್ಲಿ ನಡೆಯಲಿದೆ. ಅಂತಿಮ ಸುತ್ತು ಕೋಲ್ಕತ್ತಾದಲ್ಲಿ ನಡೆಯಲಿದೆ. ಐರ್ಲೆಂಡ್‌, ನೇಪಾಳ, ಫ್ರಾನ್ಸ್‌, ಉಗಾಂಡ, ಇಟಲಿ, ಜೋರ್ಡಾನ್‌, ಭೂತಾನ್‌, ಗಾನಾ, ಟರ್ಕಿ, ಸಿಕೆಲ್ಸ್‌ನ ಒಟ್ಟು ಹತ್ತು ಯುವ ಬಾಣಸಿಗರು ತಮ್ಮ ಪಾಕ ಪ್ರಾವೀಣ್ಯತೆಯನ್ನು ಪ್ರದರ್ಶಿಸಲಿದ್ದಾರೆ.

ಈ ಆವೃತ್ತಿಯಲ್ಲಿ 50 ದೇಶಗಳು ಭಾಗವಹಿಸುತ್ತಿವೆ. ಪುಣೆ, ಕೋಲ್ಕತ್ತಾ, ದೆಹಲಿ ಮತ್ತು ಬೆಂಗಳೂರಿನಲ್ಲಿ ಒಲಿಂಪಿಯಾಡ್‌ ನಡೆಯುತ್ತಿದೆ. ಗೆದ್ದವರಿಗೆ ಹತ್ತು ಸಾವಿರ ಡಾಲರ್‌ (ಸುಮಾರು ₹7 ಲಕ್ಷ) ನಗದು ಮತ್ತು ಟ್ರೋಫಿ ಸಿಗಲಿದೆ. ದುಬೈನ ಬುರ್ಜ್‌ ಅಲ್ ಅರಬ್‌ ಸೆವೆನ್‌ ಸ್ಟಾರ್‌ ಹೋಟೆಲಿನಲ್ಲಿ ಎಕ್ಸಿಕ್ಯುಟಿವ್‌ ಶೆಫ್ ಆಗಿರುವ 25 ವರ್ಷದ ಜಾನ್‌ ವುಡ್‌, ಇಂಗ್ಲೆಂಡ್‌ನ ರಾಣಿ ಎಲಿಜಬೆತ್‌ ಮತ್ತು ರಾಜ ಫಿಲಿಪ್‌ ಅವರಿಗೆ ಅಡುಗೆ ಮಾಡಿರುವ ಸ್ಕಾಟ್‌ ಬ್ಯಾಚಿಲರ್‌, ಇಟಲಿಯ ಟುರಿನ್‌ನಲ್ಲಿರುವ ಹೊಟೇಲ್‌ ಅಂಡ್ ರೆಸ್ಟೋರೆಂಟ್‌ ಮ್ಯಾನೇಜ್‌ಮೆಂಟ್‌ನಲ್ಲಿ ತರಬೇತುದಾರರಾಗಿರುವ ಎನ್ರಿಕೋ ಬ್ರಿಕರೆಲ್ಲೆ, ಲಂಡನ್‌ ವೆಸ್ಟ್ ಮಿನಿಸ್ಟರ್‌ ಕಿಂಗ್ಸ್‌ ವೇ ಕಾಲೇಜಿನ ಪ್ರಾಧ್ಯಾಪಕ ಶೆಫ್‌ ಗ್ಯಾರಿ ಹಂಟರ್‌ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.