ADVERTISEMENT

Video: ತಾಕತ್ತಿನ ಜೊತೆಗೆ ಉತ್ಸಾಹವನ್ನೂ ತುಂಬುವ ಮಟನ್‌ ಕಾಲ್‌ ಸೂಪ್‌ !

ಪ್ರಜಾವಾಣಿ ವಿಶೇಷ
Published 1 ನವೆಂಬರ್ 2025, 4:26 IST
Last Updated 1 ನವೆಂಬರ್ 2025, 4:26 IST

ಬೆಂಗಳೂರಿನ ಚಿಕ್ಕಪೇಟೆ (Chikkapet), ಬಳೆಪೇಟೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬೆಳಿಗ್ಗೆ 4ರಿಂದ 5ರ ವೇಳೆಗೆ ಕೆಲವು ಹೋಟೆಲ್‌ಗಳ ಮುಂದೆ ಜನ ಸರದಿಯಲ್ಲಿ ನಿಂತಿರುವುದನ್ನು ನೀವು ನೋಡಿರುತ್ತೀರಿ. ಅದು, ಮಟನ್‌ ಕಾಲ್‌ ಸೂಪ್‌ಗಾಗಿ (Mutton Kaal Soup) ನಿಲ್ಲುವ ಸಾಲು. ಹೆಚ್ಚು ಪರಿಶ್ರಮದ ಕೆಲಸ ಮಾಡುವವರಿಗೆ ತಾಕತ್ತು ನೀಡುವ ಮಟನ್‌ ಕಾಲ್‌ ಸೂಪ್‌ಗೆ ಒಳ್ಳೆಯ ಕಾಂಬಿನೇಶನ್‌ ಅಂದರೆ ತಟ್ಟೆ ಇಡ್ಲಿ ಅಥವಾ ದೋಸೆ. ಹಿಂದಿಯಲ್ಲಿ ಪಾಯ ಅಥವಾ ಪಾಯಾ (Mutton Paya) ಎಂದೂ ಕರೆಯುವ ಮಟನ್‌ ಕಾಲ್‌ ಸೂಪ್‌ಗೆ ಮೊಘಲರ (Mughal) ಕಾಲದ ಹಿನ್ನೆಲೆಯೂ ಇದೆ. ಮೇಕೆಯ ಮುಂದಿನ ಎರಡು ಕಾಲುಗಳು ಸೂಪ್‌ಗೆ ಅತ್ಯುತ್ತಮ ಎನ್ನುವ ಮುರಳಿ–ಸುಚಿತ್ರಾ (Murali-Suchithra) ದಂಪತಿ ಸಿಂಪಲ್‌ ಆಗಿ ಕಾಲು ಸೂಪ್‌ ಮಾಡುವುದು ಹೇಗೆ ಎನ್ನುವುದನ್ನು ಈ ವಿಡಿಯೊದಲ್ಲಿ ನಿಮಗೆ ತೋರಿಸಿಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.