ADVERTISEMENT

ಬಾಯಲ್ಲಿ ನೀರು ತರಿಸುವ ಸಬ್ಬಸಿಗೆ ಸೊಪ್ಪಿನ ಬಜ್ಜಿ : ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2025, 13:10 IST
Last Updated 15 ನವೆಂಬರ್ 2025, 13:10 IST
   

ಸಬ್ಬಸಿಗೆ ಸೊಪ್ಪು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಉಪಯುಕ್ತವಾಗಿದೆ. ಕಾಫಿ ಜತೆ ಏನಾದರೂ ಸ್ನ್ಯಾಕ್ಸ್ ಮಾಡುವ ಯೋಚನೆ ಇದ್ದರೆ, ಬಹು ಬೇಗನೆ ಆಗುವ ಸಬ್ಬಸಿಗೆ ಸೊಪ್ಪಿನ ಬಜ್ಜಿ ಮಾಡಿ ಸವಿಯಬಹುದು. ಈ ಸ್ನ್ಯಾಕ್ಸ್ ಅನ್ನು ಸುಲಭವಾಗಿ ಹೇಗೆ ಮಾಡುವುದು ಎಂಬ ಮಾಹಿತಿ ಇಲ್ಲಿದೆ.

ಸಬ್ಬಸಿಗೆ ಸೊಪ್ಪಿನ ಬಜ್ಜಿ ಮಾಡಲು ಬೇಕಾಗುವ ಸಾಮಾಗ್ರಿಗಳು

1–2 ಕಪ್ ಸಬ್ಬಸಿಗೆ ಸೊಪ್ಪು

ADVERTISEMENT

1–2 ಕಪ್ ಕಡಲೆ ಹಿಟ್ಟು

ಅರ್ಧ ಕಪ್ ಅಕ್ಕಿ ಹಿಟ್ಟು

1 ಚಮಚ ಖಾರದಪುಡಿ

ಅರ್ಧ ಚಮಚ ಜೀರಿಗೆ

1–2 ಹಸಿರು ಮೆಣಸಿನಕಾಯಿ

ಅಡುಗೆ ಎಣ್ಣೆ

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

ಸಬ್ಬಸಿಗೆ ಸೊಪ್ಪನ್ನು ತೊಳೆದು ಕತ್ತರಿಸಿಕೊಳ್ಳಿ. ಬಳಿಕ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದಪುಡಿ, ಜೀರಿಗೆ, ಹಸಿರು ಮೆಣಸಿನಕಾಯಿ ಹಾಗೂ ಸಬ್ಬಸಿಗೆ ಸೊಪ್ಪು ಮಿಶ್ರಣ ಮಾಡಿಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ.

ನಂತರ ಸಬ್ಬಸಿಗೆ ಸೊಪ್ಪು ಮಿಶ್ರಣಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಬಜ್ಜಿ ಹದಕ್ಕೆ ಕಲಸಿಕೊಳ್ಳಿ.

ನಂತರ ಕಾದ ಎಣ್ಣೆಗೆ, ಕಲಸಿಕೊಂಡ ಸಬ್ಬಸಿಗೆ ಸೊಪ್ಪು ಮಿಶ್ರಣವನ್ನು ಉಂಡೆ ಆಕಾರದಲ್ಲಿ ಎಣ್ಣೆಗೆ ಬಿಡಿ.

ಬಜ್ಜಿ ಬೆಂದ ಬಳಿಕ ಎಣ್ಣೆಯಿಂದ ತೆಗೆದು ಕಾಫಿ ಜತೆ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.